ಕುಡಿದ ಮತ್ತಿನಲ್ಲಿ ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಲೆ ; ಬಜ್ಪೆ ಎಕ್ಕಾರಿನಲ್ಲಿ ಘಟನೆ 

28-11-22 03:40 pm       Mangalore Correspondent   ಕ್ರೈಂ

ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಮಾಡಿದ ಘಟನೆ ಮಂಗಳೂರಿನ ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರಿನಲ್ಲಿ ನಡೆದಿದೆ.

ಮಂಗಳೂರು, ನ.28: ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಮಾಡಿದ ಘಟನೆ ಮಂಗಳೂರಿನ ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರಿನಲ್ಲಿ ನಡೆದಿದೆ.

ಎಕ್ಕಾರು ಪಲ್ಲದಕೋಡಿ ನಿವಾಸಿ ಸರಿತಾ (35) ಕೊಲೆಯಾದ ಮಹಿಳೆ. ಮದ್ಯವ್ಯಸನಿಯಾಗಿದ್ದ ಆಕೆಯ ಪತಿ ದುರ್ಗೇಶ್ ಆರೋಪಿಯಾಗಿದ್ದು ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ರಾತ್ರಿ ಪತಿ -ಪತ್ನಿ ನಡುವೆ ಜಗಳವಾಗಿದ್ದು, ಈ ವೇಳೆ ಪತ್ನಿ ಸರಿತಾಳ ಮೇಲೆ ದುರ್ಗೇಶ್ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದ. ಇದನ್ನು ಕಂಡು ದಂಪತಿಯ ಹನ್ನೊಂದು ವರ್ಷದ ಮಗ ಹೆದರಿ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವವಾಗಿ ಸರಿತಾ ಸಾವನ್ನಪ್ಪಿದ್ದಾರೆ. ಈ ಹಿಂದೆಯೂ ದುರ್ಗೇಶ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಗ್ಗೆ ದುರ್ಗೇಶ್ ತನ್ನ ಅಣ್ಣನಿಗೆ ಸರಿತಾ ಮೃತಪಟ್ಟ ಬಗ್ಗೆ ತಿಳಿಸಿದ್ದಾನೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.

A man, resident of Tenka Ekkaru village in Bajpe killed his wife in drunken stupor in Mangalore.