ಬ್ರೇಕಿಂಗ್ ನ್ಯೂಸ್
28-11-22 04:46 pm HK News Desk ಕ್ರೈಂ
ನವದೆಹಲಿ, ನ.28: ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಶ್ರದ್ಧಾ ವಾಲ್ಕರ್ ರೀತಿಯಲ್ಲೇ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಮಗನೇ ಸೇರಿಕೊಂಡು ಇರಿದು ಕೊಂದು ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ಬಳಿಕ ಒಂದೊಂದೇ ಪೀಸನ್ನು ಹೊರಗೆ ಕೊಂಡೊಯ್ದು ನೆಲದಲ್ಲಿ ಹೂತಿಟ್ಟ ಪೈಶಾಚಿಕ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಶ್ರದ್ಧಾ ವಾಲ್ಕರ್ ಎಂಬ 26 ವರ್ಷದ ಯುವತಿಯನ್ನು ಪ್ರಿಯತಮನೇ ಕೊಂದು 35 ಪೀಸ್ ಮಾಡಿ, ಫ್ರಿಡ್ಜ್ ನಲ್ಲಿಟ್ಟು ವಿಲೇವಾರಿ ಮಾಡಿದ ಘಟನೆಯ ಬೆನ್ನು ಹತ್ತಿದ ಪೊಲೀಸರಿಗೆ ಮತ್ತೊಂದು ಅಂತಹದ್ದೇ ಕೃತ್ಯ ಎದುರಾಗಿದ್ದು, ದೇಶವನ್ನು ಬೆಚ್ಚಿ ಬೀಳಿಸಿದೆ. ಪೂರ್ವ ದೆಹಲಿಯ ಪಾಂಡವ್ ನಗರದ ತ್ರಿಲೋಕ್ ಪುರಿಯಲ್ಲಿ ಘಟನೆ ನಡೆದಿದ್ದು, ತಾಯಿ, ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಅಂಜನ್ ದಾಸ್ ಎಂದು ಗುರುತಿಸಿದ್ದು, ಆತನ ಪತ್ನಿ ಪೂನಂ ಮತ್ತು ಮಗ ದೀಪಕ್ ನನ್ನು ಬಂಧಿಸಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ರಾಮಲೀಲಾ ಮೈದಾನ ಆಸುಪಾಸಿನಲ್ಲಿ ಮನುಷ್ಯನ ದೇಹದ ಭಾಗಗಳು ಪೊಲೀಸರಿಗೆ ಲಭಿಸಿದ್ದವು. ಈ ಬಗ್ಗೆ ಅನಾಥ ಶವ, ಕೊಲೆ ಕೃತ್ಯದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಮೊನ್ನೆ ಶ್ರದ್ಧಾ ವಾಲ್ಕರ್ ಹತ್ಯೆ ಸುದ್ದಿಯಾದ ಬೆನ್ನಲ್ಲೇ ಆ ದೇಹದ ಭಾಗಗಳು ಶ್ರದ್ಧಾನದ್ದೇ ಎಂಬ ಬಗ್ಗೆ ತನಿಖೆ ನಡೆಸಿದ್ದರು. ಶ್ರದ್ಧಾ ದೇಹದ್ದು ಅಲ್ಲ ಎನ್ನುವುದು ತಿಳಿಯುತ್ತಲೇ ಈ ಬಗ್ಗೆ ಹುಡುಕಾಟ ನಡೆಸಿದ್ದರು.ತ್ರಿಲೋಕ್ ಪುರಿಯಲ್ಲಿ ವಾಸವಿದ್ದ ಅಂಜನ್ ದಾಸ್ ಕಳೆದ ಏಳೆಂಟು ತಿಂಗಳಿನಿಂದ ನಾಪತ್ತೆಯಾಗಿದ್ದ. ಅಂಜನ್ ದಾಸ್ ಮತ್ತು ಆತನ ಪತ್ನಿ ಪೂನಂ ಹಾಗೂ ಅವರ ಮಗ, ಸೊಸೆ, ಮಗಳು ಜೊತೆಯಾಗಿ ವಾಸವಿದ್ದರು. ಆದರೆ ಅಂಜನ್ ದಾಸ್ ಕುಡಿಯುವ ಚಟ ಹೊಂದಿದ್ದು, ದಿನವೂ ಕುಡಿದು ಬಂದು ಸೊಸೆಯ ಮೇಲೆ ಕೈಮಾಡಲು ಹೋಗುತ್ತಿದ್ದ. ಅಲ್ಲದೆ, ಸೊಸೆಯನ್ನು ಮೈಗೆ ಕೈಹಾಕಿ ಆಸೆ ಕಣ್ಣು ಬೀರುತ್ತಿದ್ದ. ಅದೇ ರೀತಿ ಮಗಳ ಮೇಲೆಯೂ ಕಣ್ಣು ಹಾಕಿದ್ದ.
ಈ ವಿಚಾರದಲ್ಲಿ ಅಂಜನ್ ದಾಸ್ ಮತ್ತು ಪೂನಂ ಮಧ್ಯೆ ಜಗಳ ನಡೆಯುತ್ತಿತ್ತು. ಮಗ ಇಲ್ಲದ ಸಂದರ್ಭ ಸೊಸೆಯ ಮೇಲೆ ಕೈಮಾಡುತ್ತಿದ್ದ ಬಗ್ಗೆ ತಾಯಿ ಮಗನಲ್ಲಿ ದೂರಿಕೊಂಡಿದ್ದರು. ಮಗ ದೀಪಕ್ ಗೆ ವರ್ಷದ ಹಿಂದೆ ಮದುವೆಯಾಗಿದ್ದು, ಸೊಸೆಯನ್ನು ಮನೆಯಲ್ಲಿರಿಸಿ ಕೆಲಸಕ್ಕೆ ಹೋಗುತ್ತಿದ್ದ. ಅಂಜನ್ ದಾಸ್ ಯಾವುದೇ ಕೆಲಸ ಮಾಡದೆ ಮನೆಮಂದಿಯ ದುಡ್ಡನ್ನೇ ಕಸಿದು ಕುಡಿದು ಚಟ ತೀರಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಪೂನಂ, ಮಗನ ಜೊತೆ ಸೇರಿ ಅಂಜನ್ ದಾಸ್ ಕೊಲೆಗೆ ಸಂಚು ರೂಪಿಸಿದ್ದಳು. ಒಂದು ದಿನ ರಾತ್ರಿ ಅಂಜನ್ ಗೆ ನಿದ್ದೆ ಮಾತ್ರೆ ಕೊಟ್ಟು ಚೂರಿಯಿಂದ ಇರಿದು ಸಾಯಿಸಿದ್ದರು. ಬಳಿಕ ದೇಹವನ್ನು ಹೊರಗೆ ಒಯ್ದರೆ ಅಕ್ಕಪಕ್ಕದವರು ನೋಡುತ್ತಾರೆಂದು ಮನೆಯ ಒಳಗೇ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ಬಚ್ಚಿಟ್ಟಿದ್ದರು. ಆನಂತರ, ಕೈ, ಕಾಲು ಹೀಗೆ ಒಂದೊಂದೇ ಭಾಗವನ್ನು ಪಾಂಡವ್ ನಗರದ ವಿವಿಧ ಕಡೆಗಳಿಗೆ ಚೀಲದಲ್ಲಿ ಒಯ್ದು ರಾತ್ರಿ ವೇಳೆ ನೆಲದಲ್ಲಿ ಹೂತು ಹಾಕಿದ್ದರು.
ಪೊಲೀಸರು ತೀವ್ರ ಹುಡುಕಾಟದ ಬಳಿಕ ಅಂಜನ್ ದಾಸ್ ನಾಪತ್ತೆ ಆಗಿರುವುದನ್ನು ತಿಳಿದು ಅಲ್ಲಿನ ಸ್ಥಳೀಯರಲ್ಲಿ ವಿಚಾರಣೆ ನಡೆಸಿದ್ದರು. ಪೂನಂ ಬಳಿ ಕೇಳಿದಾಗ, ಆತ ಊರಿಗೆ ತೆರಳಿದ್ದಾಗಿ ಹೇಳಿದ್ದಳು. ಆರು ವರ್ಷಗಳ ಹಿಂದೆ ಉತ್ತರ ಪ್ರದೇಶದ ಹಳ್ಳಿಯಿಂದ ಬಂದು ದೆಹಲಿಯಲ್ಲಿ ಉಳಿದುಕೊಂಡಿದ್ದ ಕುಟುಂಬದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಸಿಸಿಟಿವಿ ಪರಿಶೀಲನೆ ನಡೆಸಿದಾಗ, ತಾಯಿ- ಮಗ ರಾತ್ರಿ ವೇಳೆ ಅಡ್ಡಾಡುವುದು ಕಂಡುಬಂದಿತ್ತು. ಮಗ ದೀಪಕ್ ಮತ್ತು ತಾಯಿ ಪೂನಂ ಹಿಂದು ಮುಂದಿನಿಂದ ನಡೆದುಕೊಂಡು ಹೋಗುವುದು, ಚೀಲದಲ್ಲಿ ಏನೋ ವಸ್ತು ಹಿಡಿದುಕೊಂಡು ಸಾಗುತ್ತಿದ್ದುದು ಕಂಡುಬಂದಿತ್ತು. ಸಂಶಯಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನಿಜ ಬಾಯಿಬಿಟ್ಟಿದ್ದಾರೆ.
ಜೂನ್ 5ರಂದು ಕಾಲು, ಕೈಯ ಭಾಗ, ತೊಡೆ, ಅಂಗೈ ಭಾಗ ರಾಮಲೀಲಾ ಮೈದಾನದ ಆಸುಪಾಸಿನಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದವು. ಇದನ್ನು ನೋಡಿ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ದೇಹ ಯಾರದ್ದೆಂದು ಪತ್ತೆ ಆಗಿರಲಿಲ್ಲ. ಇದೀಗ ಆರೋಪಿಗಳನ್ನು ಬಂಧಿಸಿದ್ದು, ಪೂನಂ ನನ್ನ ಮಗನೇ ಗಂಡನನ್ನು ಕೊಲೆ ಮಾಡಿದ್ದೆಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾಳೆ.
A woman along with her son arrested by Crime Branch in Delhi's Pandav Nagar for murdering her husband. They chopped off body in several pieces,kept in refrigerator & used to dispose of pieces in nearby ground: Delhi Police Crime Branch
— ANI (@ANI) November 28, 2022
(CCTV visuals confirmed by police) pic.twitter.com/QD3o5RwF8X
In another Shraddha Walkar-like case, a man’s body was chopped and stored in fridge after being killed by his wife and son in Delhi’s Pandav Nagar. The parts were then disposed off over days in and around Pandav Nagar and East Delhi. The deceased has been identified as Anjan Das. News18 has learnt that the accused, his wife Poonam and son Deepak, murdered Das over his illicit affair by giving him drugs and then stored his body in the fridge of their Trilokpuri house.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm