ಸ್ವಿಗ್ಗಿ, ಝೋಮ್ಯಾಟೊ ಕಂಪನಿ ಡೆಲಿವರಿ ಹೆಸರಲ್ಲಿ ಡ್ರಗ್ಸ್ ಸಪ್ಲೈ ; 4 ಲಕ್ಷ ರೂ. ಮೌಲ್ಯದ 3 ಕೆ.ಜಿ. ಗಾಂಜಾ ವಶಕ್ಕೆ ! 

18-12-22 06:47 pm       Bangalore Correspondent   ಕ್ರೈಂ

ಸ್ವಿಗ್ಗಿ ಮತ್ತು ಝೋಮ್ಯಾಟೊ ಕಂಪನಿಯ ಫ‌ುಡ್‌ ಡೆಲಿವರಿ ಬಾಯ್‌ ಸೋಗಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಡಿ 18: ಸ್ವಿಗ್ಗಿ ಮತ್ತು ಝೋಮ್ಯಾಟೊ ಕಂಪನಿಯ ಫ‌ುಡ್‌ ಡೆಲಿವರಿ ಬಾಯ್‌ ಸೋಗಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಅಭಿಜಿತ್‌(28) ಬಂಧಿತ. ಮತ್ತೂಬ್ಬ ಆರೋಪಿ ಪರಾರಿಯಾಗಿದ್ದಾನೆ.

ಬಂಧಿ ತನಿಂದ ಫ‌ುಡ್‌ ಡೆಲಿವರಿ ಬ್ಯಾಗ್‌ನಲ್ಲಿದ್ದ 4 ಲಕ್ಷ ರೂ. ಮೌಲ್ಯದ 3 ಕೆ.ಜಿ. ಗಾಂಜಾ, 14 ಗ್ರಾಂ ತೂಕದ 12 ಎಲ್‌ ಎಸ್‌ಡಿ ಸ್ಟ್ರೀಪ್ಸ್‌ ಮತ್ತು ಮೊಬೈಲ್‌, ಬೈಕ್‌ ವಶಕ್ಕೆ ಪಡೆಯಲಾಗಿದೆ.

Bengaluru Man Arrested for Posing as Zomato, Swiggy Delivery Agent and Delivering Drugs | Video

ಆರೋಪಿಗಳಿಬ್ಬರೂ ಬಿಹಾರ ಮೂಲದವ ರಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಿಹಾರದಿಂದಲೇ ಬೆಂಗಳೂರಿಗೆ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಗ್ರಾಹಕರ ಜತೆ ಸಂಪರ್ಕ ಹೊಂದಿದ್ದು, ಆನ್‌ಲೈನ್‌ನಲ್ಲೇ ವ್ಯವಹಾರ ನಡೆಸುತ್ತಿದ್ದ. ಗ್ರಾಹಕನ ಲೋಕೇಷನ್‌ ಮತ್ತು ಆತ ಧರಿಸಿ ರುವ ಬಟ್ಟೆಯ ಬಣ್ಣದ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಅದನ್ನು ಅಭಿಜಿತ್‌ಗೆ ರವಾನಿಸಿದ್ದ. ಈತ ಸ್ವಿಗ್ಗಿ ಮತ್ತು ಝೋಮ್ಯಾಟೋ ಡೆಲಿವರಿ ಬಾಯ್‌ ಸೋಗಿನಲ್ಲಿ ಫ‌ುಡ್‌ ಡೆಲಿವರಿ ಮಾದರಿಯಲ್ಲಿ ಪ್ಯಾಕೆಟ್‌ಗಳನ್ನು ಮಾಡಿಕೊಂಡು ಗ್ರಾಹಕನಿಗೆ ಮಾರಾಟ ಮಾಡುತ್ತಿದ್ದ. ಅಭಿಜಿತ್‌ಗೆ ಬಿಹಾರ ಮೂಲದ ಆರೋಪಿ, ಪ್ರತಿ ಗ್ರಾಹಕನಿಗೆ ಪೂರೈಕೆ ಮಾಡಿದ ಬಳಿಕ ಇಂತಿಷ್ಟು ಕಮಿಷನ್‌ ನೀಡುತ್ತಿದ್ದ.

ಗ್ರಾಹಕ ಯಾರೆಂದು ಗೊತ್ತಿಲ್ಲ:

ಅಭಿಜಿತ್‌ ಈ ಹಿಂದೆ ಸ್ವಿಗ್ಗಿ ಮತ್ತು ಝೋಮ್ಯಾಟೋ ಕಂಪನಿಯಲ್ಲಿ ಪುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಆದರೆ, ಕಂಪನಿಗೆ ಸಮ ವಸ್ತ್ರ ಮತ್ತು ಫ‌ುಡ್‌ ಡೆಲಿವರಿ ಬ್ಯಾಗ್‌ ವಾಪಸ್‌ ನೀಡಿರಲಿಲ್ಲ. ಅದನ್ನು ತನ್ನ ಬಳಿಯೇ ಇಟ್ಟು ಕೊಂಡು, ಬಿಹಾರದ ತನ್ನ ಸ್ನೇಹಿತನ ಸೂಚನೆ ಮೇರೆಗೆ ಮಾದಕ ವಸ್ತು ಪೂರೈಸುತ್ತಿದ್ದ. ವಿಶೇಷ ವೆಂದರೆ, ಅಭಿಜಿತ್‌ಗೆ ತಾನೂ ಯಾರಿಗೆ ಡ್ರಗ್ಸ್‌ ಪೂರೈಸುತ್ತಿದ್ದೇನೆ ಎಂದು ಗೊತ್ತಿರಲಿಲ್ಲ. ಬಿಹಾರ ದಿಂದಲೇ ಆರೋಪಿ ಸೂಚಿಸಿದ ಲೋಕೇಷನ್‌ ಮತ್ತು ಗ್ರಾಹಕನ ಬಟ್ಟೆ ಬಣ್ಣ ತಿಳಿಸಿ, ಡ್ರಗ್ಸ್‌ ಅನ್ನು ಪ್ಯಾಕೆಟ್‌ಗಳನ್ನು ಕಳುಹಿಸುತ್ತಿದ್ದರಿಂದ ಗ್ರಾಹಕನ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾನೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಈ ಸಂಬಂಧ ವೈಟ್‌ಫೀಲ್ಡ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

A Bengaluru-based man was recently arrested for posing as Zomato, Swiggy delivery agent, and delivering drugs. The accused, whose identity has not yet been revealed, was arrested by the Central Crime Branch (CCB) of Bengaluru police earlier on Friday. After the arrest, 3 kg of marijuana, 12 LSD strips, one phone, one two-wheeler, and other items, were seized by the police.