ಬ್ರೇಕಿಂಗ್ ನ್ಯೂಸ್
21-12-22 08:56 pm HK News Desk ಕ್ರೈಂ
ಗದಗ, ಡಿ.21 : ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ಹತ್ಯೆಗೈದು ಇಬ್ಬರು ಶಿಕ್ಷಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಘಟನೆ ಭಾರೀ ಸಂಚಲನ ಉಂಟು ಮಾಡಿತ್ತು. ಶಿಕ್ಷಕನಿಗೆ ಅಂಥ ಹಗೆಯೇನಿತ್ತು ಎನ್ನುವ ಪ್ರಶ್ನೆ, ಅನುಮಾನಗಳು ಕೇಳಿಬಂದಿದ್ದವು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೊಲೆ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದಾರೆ. ಶಿಕ್ಷಕಿ ಮೇಲಿನ ಪ್ರೇಮವೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ ದೇವರಾಜು, ಕೊಲೆ ಆರೋಪಿ ಮುತ್ತು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ. ಮೃತ ಬಾಲಕನ ತಾಯಿ ಗೀತಾ ಬಾರಕೇರಿ ಮೇಲೆ ಹೊಂದಿದ್ದ ಅತಿರೇಕದ ಪ್ರೇಮವೇ ಕೊಲೆಗೆ ಕಾರಣ ಆಗಿರಬಹುದು. ಅವರಿಬ್ಬರ ವಾಟ್ಸ್ಆ್ಯಪ್ ಸಂದೇಶಗಳಿಂದ ಇಂಥದೊಂದು ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಗೀತಾ ಬಾರಕೇರ, ಮುತ್ತು ಹಡಗಲಿ ಅತಿಥಿ ಶಿಕ್ಷಕರಾಗಿದ್ದರು. ಸಂಗನಗೌಡ ಪಾಟೀಲ ಅದೇ ಶಾಲೆಯ ಇನ್ನೊಬ್ಬ ಶಿಕ್ಷಕ. ಗೀತಾ ಬಾರಕೇರ ಅವರ ಪುತ್ರ ಭರತ್ ಅದೇ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಗೀತಾ ಬಾರಕೇರ ಮತ್ತು ಮುತ್ತು ಹಡಗಲಿ ನಡುವೆ ವಾಟ್ಸ್ಆ್ಯಪ್ನಲ್ಲಿ ಸಂದೇಶಗಳು ವಿನಿಮಯ ಆಗಿದ್ದವು. ಸಂಗನಗೌಡ ಪಾಟೀಲ ಜತೆಗೂ ಗೀತಾ ಸಲುಗೆ ಹೊಂದಿದ್ದಳು. ಇತ್ತೀಚೆಗೆ ಶಾಲೆ ವತಿಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಗೀತಾ ಮತ್ತು ಸಂಗನಗೌಡ ನಡುವಿನ ಸಲುಗೆ ವಿಷಯ ಮುತ್ತು ಹಡಗಲಿಗೆ ಗೊತ್ತಾಗಿ ಕ್ಯಾತೆ ತೆಗೆದಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಶೈಕ್ಷಣಿಕ ಪ್ರವಾಸದ ನಂತರದ ದಿನಗಳಲ್ಲಿ ಮುತ್ತು ಹಡಗಲಿ, ಗೀತಾ ಮತ್ತು ಸಂಗನಗೌಡ ಮೇಲೆ ಕತ್ತಿ ಮಸೆಯುತ್ತಿದ್ದ. ಸೋಮವಾರ ಬೆಳಗ್ಗೆ ಶಾಲೆಯ ಕೊಠಡಿಯಿಂದ ಬಾಲಕ ಭರತನನ್ನು ಹೊರಗೆ ಕರೆದು ಹಲ್ಲೆ ನಡೆಸಿದ್ದ. ಅಲ್ಲದೆ, ಬಾಲಕನನ್ನು ಎತ್ತಿ ಗೋಡೆಗೆ ಎಸೆದು ತೀವ್ರ ಗಾಯಪಡಿಸಿದ್ದ. ಕೆಳಕ್ಕೆ ಬಿದ್ದ ಬಾಲಕನನ್ನು ಮತ್ತೆ ಎತ್ತಿ ಕೊಠಡಿಯಿಂದ ದೂರಕ್ಕೆ ಎಸೆದಿದ್ದನು. ತೀವ್ರ ರಕ್ತಸಾವ್ರದಿಂದ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಚೀರಾಟ ಕೇಳಿ ತಪ್ಪಿಸಲು ಓಡಿಬಂದ ಗೀತಾಳನ್ನು ಬೆದರಿಸಿ ಬೆನ್ನತ್ತಿ ತಲೆಗೆ ಸಲಿಕೆಯಿಂದ ಹೊಡೆದಿದ್ದಾನೆ. ಸಂಗನಗೌಡ ಪಾಟೀಲ್ ಮೇಲೂ ಹಲ್ಲೆ ಮಾಡಿದ್ದಾನೆ. ಪ್ರಶ್ನಿಸಲು ಬಂದ ಮುಖ್ಯಶಿಕ್ಷಕ ಬಸವರಾಜ ಯಾವಗಲ್ ಮೇಲೂ ಹಲ್ಲೆಗೆ ಮುಂದಾಗಿದ್ದ. ಅಷ್ಟರಲ್ಲಿ ಮುಖ್ಯ ಶಿಕ್ಷಕರು ತಪ್ಪಿಸಿಕೊಂಡಿದ್ದಾರೆ ಎಂದು ಘಟನೆ ಕುರಿತು ಎಸ್ಪಿ ವಿವರಿಸಿದ್ದಾರೆ.
ತನ್ನ ಜೊತೆಗಿದ್ದ ಪ್ರೀತಿಯನ್ನು ಬದಿಗೊತ್ತಿ ಶಿಕ್ಷಕಿ ಗೀತಾ ಬೇರೊಬ್ಬನ ಜೊತೆ ಸುತ್ತಾಟಕ್ಕೆ ಮುಂದಾಗಿದ್ದರಿಂದ ಭಗ್ನಪ್ರೇಮಿ ಮುತ್ತು ಹಡಗಲಿ ಅದರ ಸಿಟ್ಟನ್ನು ಬಾಲಕನ ಮೇಲೆ ತೀರಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
A class 4 student died on Monday, December 19, in Karnataka’s Gadag district after he was beaten up with an iron rod and then thrown down from the first floor by his teacher.The Times of India identified the accused as Muthappa Yellapa Hadagali (33), who taught at the Adarsh Primary School in Hadli village.
10-01-25 07:03 pm
Bangalore Correspondent
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
S T Somashekar, Yatnal, DK Shivakumar temple:...
09-01-25 04:54 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 06:23 pm
Mangalore Correspondent
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
10-01-25 09:51 pm
Mangalore Correspondent
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm