ಆಲಂಗಾರಿನಲ್ಲಿ ಮನೆಯಲ್ಲೇ ಕಸಾಯಿಖಾನೆ ; ಗೋವುಗಳನ್ನು ಕಟ್ಟಿ ವಧಿಸುತ್ತಿದ್ದ ಇಬ್ಬರು ಕಿರಾತಕರು, ನಸುಕಿನಲ್ಲಿ ಹಿಂಜಾವೇ ದಾಳಿ 

24-12-22 11:58 am       Mangalore Correspondent   ಕ್ರೈಂ

ಮನೆಯೊಂದರಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಜಾಗಕ್ಕೆ ಬೆಳ್ಳಂಬೆಳಗ್ಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರ ಜೊತೆಗೆ ದಾಳಿ ನಡೆಸಿದ ಘಟನೆ ಆಲಂಗಾರಿನಲ್ಲಿ ನಡೆದಿದೆ. 

ಮೂಡುಬಿದ್ರೆ, ಡಿ.24: ಮನೆಯೊಂದರಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಜಾಗಕ್ಕೆ ಬೆಳ್ಳಂಬೆಳಗ್ಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರ ಜೊತೆಗೆ ದಾಳಿ ನಡೆಸಿದ ಘಟನೆ ಆಲಂಗಾರಿನಲ್ಲಿ ನಡೆದಿದೆ. 

ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂಡ ಎಂಬವನ ಮನೆಯಲ್ಲಿ ಅಕ್ರಮ ಕಸಾಯಿ ಖಾನೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಬೆಳಗ್ಗೆ ನಾಲ್ಕು ಗಂಟೆಗೆ ಎಂಟ್ರಿ ಕೊಟ್ಟಿದ್ದಾರೆ.‌ ಈ ವೇಳೆ, ಮನೆಯ ಒಳಗಿನ ಕೋಣೆಯಲ್ಲಿ ದನವನ್ನು ಕಡಿದು ಮಾಂಸ ಮಾಡುತ್ತಿದ್ದರು. ಇದಲ್ಲದೆ, ಕಡಿಯಲು ತಂದಿದ್ದ ನಾಲ್ಕು ಸಣ್ಣ ಪ್ರಾಯದ ಕರುಗಳನ್ನು ಒಳಗಡೆ ಕಟ್ಟಿದ್ದರು. ಭಾರೀ ಪ್ರಮಾಣದ ದನದ ಮಾಂಸ ಮತ್ತು ನಾಲ್ಕು ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ. 

ಆನಂತರ, ಮನೆ ಪಕ್ಕದ ತೋಟದಲ್ಲಿ ಅಗೆದು ನೋಡಿದಾಗ ಹಲವಾರು ದನದ ತಲೆಯ ಭಾಗಗಳು ಪತ್ತೆಯಾಗಿವೆ. ಆಲಂಗಾರು ನಿವಾಸಿಗಳಾದ ಕ್ಲಾರಿನ್ ಆಲ್ವಿನ್ ಮತ್ತು ಗಿಲ್ಬರ್ಟ್ ಮಿರಾಂಡ ಬಂಧಿತರು. ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2020ರ ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ, ಲೈಸನ್ಸ್ ರಹಿತ ಯಾವುದೇ ಜಾಗದಲ್ಲಿ ಗೋವುಗಳನ್ನು ಕಡಿಯುವಂತಿಲ್ಲ. ಅಕ್ರಮ ಕಸಾಯಿಖಾನೆ ಪತ್ತೆಯಾದಲ್ಲಿ ಆ ಜಾಗವನ್ನು ಸರಕಾರದ ವಶಕ್ಕೆ ಪಡೆಯಬೇಕು. ಮನೆಯಾಗಿದ್ದರೆ, ಕಟ್ಟಡ ಕಂದಾಯ ಇಲಾಖೆಗೆ ಸೇರುತ್ತದೆ. ಈ ರೀತಿಯ ಕಠಿಣ ಕ್ರಮದಿಂದಾಗಿ ಅಕ್ರಮ ಕಸಾಯಿಖಾನೆ ಕಡಿಮೆಯಾಗಿತ್ತು. 13 ವಯಸ್ಸಿನ ಒಳಗಿನ ಗೋವುಗಳನ್ನು ಕಡಿಯುವಂತಿಲ್ಲ ಎಂಬ ನಿಯಮದಿಂದಾಗಿ ಅಧಿಕೃತ ಕಸಾಯಿಖಾನೆಗಳಿಗೆ ಮಾಂಸಕ್ಕಾಗಿ ಗೋವುಗಳ ಪೂರೈಕೆ ಆಗುತ್ತಿಲ್ಲ. ಗೋಹತ್ಯೆ ಕಾನೂನು ಬಂದ ಬಳಿಕ ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಅಕ್ರಮ ಗೋಹತ್ಯೆಗೆ ಕಡಿವಾಣ ಬಿದ್ದಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಗೋಹತ್ಯೆ ನಡೆಸಿದ ಜಾಗವನ್ನು ಸರಕಾರದ ವಶಕ್ಕೆ ಪಡೆಯಲಾಗಿದೆ.

Mangalore Illegal Sluaughter house inside home in Moodbidri, hindu jagarana vedike raids house