ಎಸ್ ಬಿಐ ಬ್ಯಾಂಕ್ ಕಟ್ಟಡದ ಅಡಿಪಾಯಕ್ಕೆ ಸುರಂಗ ಕೊರೆದು ಲಾಕರಿನಲ್ಲಿದ್ದ ಕೇಜಿಗಟ್ಟಲೆ ಚಿನ್ನ ದರೋಡೆ 

24-12-22 04:36 pm       HK News Desk   ಕ್ರೈಂ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಎಸ್ ಬಿಐ ಬ್ಯಾಂಕಿನ ಗೋಡೆ ಕೊರೆದು ಕಳ್ಳರು ನುಗ್ಗಿದ್ದು ಲಾಕರ್ ಒಡೆದು 1.8 ಕಿಲೋ ಗ್ರಾಮ್ ತೂಕದ ಚಿನ್ನಾಭರಣ ದೋಚಿದ್ದಾರೆ. 

ಕಾನ್ಪುರ, ಡಿ.24: ಉತ್ತರ ಪ್ರದೇಶದ ಕಾನ್ಪುರದಲ್ಲಿ ಎಸ್ ಬಿಐ ಬ್ಯಾಂಕಿನ ಗೋಡೆ ಕೊರೆದು ಕಳ್ಳರು ನುಗ್ಗಿದ್ದು ಲಾಕರ್ ಒಡೆದು 1.8 ಕಿಲೋ ಗ್ರಾಮ್ ತೂಕದ ಚಿನ್ನಾಭರಣ ದೋಚಿದ್ದಾರೆ. 

ಕಟ್ಟಡದ ಅಡಿಪಾಯದ ಕೆಳಗೆ ಐದು ಮೀಟರ್ ಆಳದ ವರೆಗೂ ಅಗೆದು, ಸುರಂಗ ಕೊರೆದು ಬ್ಯಾಂಕಿನ ಒಳ ನುಗ್ಗಿದ್ದಾರೆ. ಬಳಿಕ ಸ್ಟ್ರಾಂಗ್‌ರೂಮ್‌ ನುಗ್ಗಿದ ಕಳ್ಳರು, 1.8 ಕೆಜಿ ಚಿನ್ನವನ್ನು ಕಳವು ಮಾಡಿದ್ದಾರೆ. ಇದು ರಾಜ್ಯದಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ಅತಿದೊಡ್ಡ ಕಳ್ಳತನ ಎಂದು ಪೊಲೀಸರು ತಿಳಿಸಿದ್ದಾರೆ.

UP Money Heist! Burglars Dig 10-Foot-Long Tunnel To SBI Branch, Flee With  Gold Worth Rs 1 Crore

ಶುಕ್ರವಾರ ಬೆಳಗ್ಗೆ ಎಂದಿನಂತೆ ಬ್ಯಾಂಕ್‌ಗೆ ಬಂದ ಉದ್ಯೋಗಿಗಳಿಗೆ, ಕಳ್ಳತನ ಆಗಿರುವುದು ಪತ್ತೆಯಾಗಿದೆ. ಕಳ್ಳರು ಎಂಟು ಮೀಟರ್ ಉದ್ದ, ಮೂರು ಅಡಿ ಆಳದ ಸುರಂಗವನ್ನು ತೋಡಿದ್ದಾರೆ. ಸುರಂಗದ ಹೊರಬದಿ ಪೊದೆಗಳಿಂದ ಆವೃತವಾಗಿತ್ತು. ಹೀಗಾಗಿ ಸುರಂಗ ಕೊರೆದಿರುವುದು ಬೇರೆಯವರಿಗೆ ಗೊತ್ತಾಗಿರಲಿಲ್ಲ.

Thieves Dig 10-Foot Deep Tunnel, Steal Gold Worth Rs 1 Crore From SBI Kanpur  Branch

"ಸುರಂಗ ಕೊರೆಯಲು ಕಳ್ಳರು ದಿನಗಳನ್ನು ತೆಗೆದುಕೊಂಡಿರಬಹುದು. ಅಷ್ಟು ನಿಖರತೆಯಿಂದ ಒಳಗಡೆ ಸರಿಯಾದ ಸ್ಥಳಕ್ಕೆ ಗುರಿ ಇಟ್ಟು ಸುರಂಗ ಮಾಡಿದ್ದಾರೆ. ಕಳ್ಳರಿಗೆ ಪ್ರಮುಖ ಮಾಹಿತಿಯನ್ನು ಒಳಗಿನವರೇ ರವಾನಿಸಿದ್ದಾರೆ ಎಂಬ  ಶಂಕೆಯಿದೆ" ಎಂದು ಕಾನ್ಪುರ ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್ ಹೇಳಿದ್ದಾರೆ.

Paka sketch for bank robbery..2 kg gold stolen by digging a 10 feet long  tunnel

29 ಜನರು ಸಾಲಕ್ಕಾಗಿ ಅಡಮಾನವಿಟ್ಟ ಚಿನ್ನವನ್ನು ಆ ಲಾಕರ್‌ನಲ್ಲಿ ಇಡಲಾಗಿತ್ತು. ಲಾಕರ್‌ ಬಾಗಿಲು ಒಡೆಯಲು ಕಳ್ಳರು ಗ್ಯಾಸ್ ಕಟ್ಟರ್ ಬಳಸಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳ್ಳತನದ ವೇಳೆ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ದರೋಡೆಕೋರರು, ಸ್ಟ್ರಾಂಗ್‌ರೂಮ್‌ನಲ್ಲಿರುವ ಏಕೈಕ ಸಿಸಿಟಿವಿ ಕ್ಯಾಮರಾವನ್ನು ಬೇರೆ ಕಡೆಗೆ ತಿರುಗಿಸಿದ್ದರು. 

Video: Thieves Dig 10-Foot-Long Tunnel To SBI In Kanpur, Take 1.8 Kg Of Gold

ಲಾಕರಿನಲ್ಲಿದ್ದ 1.812 ಕೆಜಿ ತೂಕದ ಎಲ್ಲಾ ಚಿನ್ನವನ್ನು ಹೊತ್ತೊಯ್ದಿರುವ ಕಳ್ಳರು ಅದರ ಪಕ್ಕದ ಲಾಕರ್‌ನಲ್ಲಿ ಇಟ್ಟಿದ್ದ 35 ಲಕ್ಷ ರೂಪಾಯಿ ನಗದಿನಲ್ಲಿ ಒಂದು ರೂಪಾಯಿಯನ್ನೂ ಮುಟ್ಟಿಲ್ಲ ಎನ್ನುವುದು ವಿಶೇಷ.

Thieves broke open a chest at a bank in Uttar Pradesh's Kanpur and stole gold worth ₹ 1 crore. They entered the bank's vault through a 10-feet-long tunnel, the police said today. They dug the four-feet-wide tunnel from an empty plot adjacent to the State Bank of India's Bhanuti branch, the police said.