ಬ್ರೇಕಿಂಗ್ ನ್ಯೂಸ್
28-12-22 04:54 pm Bangalore Correspondent ಕ್ರೈಂ
ಬೆಂಗಳೂರು, ಡಿ.28: ಕರ್ನಾಟಕ ರಕ್ಷಣಾ ವೇದಿಕೆ ಹೆಸರಲ್ಲಿ ಸಂಘಟನೆ ಕಟ್ಟಿಕೊಂಡಿದ್ದ ತಂದೆ- ಮಗನ ತಂಡವೊಂದು ಯುವಕನನ್ನು ಅಪಹರಿಸಿ ಅಮಾನುಷವಾಗಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಲ್ಲದೆ, ಶವವನ್ನು ಚಾರ್ಮಾಡಿ ಘಾಟಿಯಲ್ಲಿ ಎಸೆದು ಒಂಬತ್ತು ತಿಂಗಳ ಮುಚ್ಚಿ ಹಾಕಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಹೊರಗೆಡವಿದ್ದಾರೆ.
ಯುವಕ ಸತ್ತು 9 ತಿಂಗಳಾದರೂ ಪಾಲಕರು ಮಾತ್ರ ಮಗ ದುಡಿಯಲು ಹೊರ ರಾಜ್ಯಕ್ಕೆ ಹೋಗಿದ್ದಾನೆ ಎಂದೇ ತಿಳಿದಿದ್ದರು. ವರ್ಷದ ನಂತರ ಮನೆಗೆ ಮರಳುತ್ತಾನೆ ಎಂದೇ ಭಾವಿಸಿದ್ದರು. ಇತ್ತೀಚೆಗೆ ಎಸಿಪಿ ಕಚೇರಿಗೆ ಬಂದ ಅನಾಮಧೇಯ ಪತ್ರ ಹಾಗೂ ಪೆನ್ಡ್ರೈವ್ ಕೊಟ್ಟ ಸುಳಿವು ಕೊಲೆ ರಹಸ್ಯ ಭೇದಿಸುವಂತೆ ಮಾಡಿದೆ. ಕೋಣನಕುಂಟೆ ನಿವಾಸಿ ಎಚ್. ಶರತ್ ಕೊಲೆಯಾದವನಾಗಿದ್ದು ಆರೋಪಿಗಳಾದ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಲಪತಿ ಅಗಲಗುರ್ಕಿ ಅಲಿಯಾಸ್ ವೆಂಕಟಾಚಲಪತಿ, ಈತನ ಮಗ ಎ.ವಿ.ಶರತ್ ಕುಮಾರ್ ಹಾಗೂ ಈತನ ಸ್ನೇಹಿತರಾದ ಕೆ.ಧನುಷ್, ಶ್ರೀಧರ್ ಮತ್ತು ಯಲಹಂಕದ ಎಂ.ಪಿ.ಮಂಜುನಾಥ್ ಎಂಬವರನ್ನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪೊಲೀಸರು ಬಂಧಿಸಿದ್ದಾರೆ.
ಸಬ್ಸಿಡಿಯಲ್ಲಿ ಕಾರು ನೀಡುವುದಾಗಿ ಆಮಿಷ, ಹಣ ವಸೂಲಿ
ಕೊಲೆಗೀಡಾದ ಶರತ್, ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಕಾರುಗಳನ್ನು ನೀಡುವುದಾಗಿ ನಂಬಿಸಿ ಚಿಕ್ಕಬಳ್ಳಾಪುರ ಮತ್ತು ಯಲಹಂಕ ನಿವಾಸಿಗಳಿಂದ ಲಕ್ಷಾಂತರ ರೂ. ಸಂಗ್ರಹಿಸಿದ್ದ. ಆದರೆ, ಯಾರಿಗೂ ಕಾರನ್ನು ಕೊಡಿಸದೆ ವಂಚಿಸಿದ್ದ. ಈ ಬಗ್ಗೆ ಆತನಿಂದ ಹಣ ವಸೂಲಿ ಮಾಡಲು 2022ರ ಮಾರ್ಚ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಲಪತಿ ಅಗಲಗುರ್ಕಿಗೆ ಸಂತ್ರಸ್ತರು ದೂರಿಕೊಂಡಿದ್ದರು. ಚಲಪತಿ ತನ್ನ ಮಗ ಶರತ್ಕುಮಾರ್ಗೆ ಹೇಳಿದ್ದು ಆತ ತನ್ನ ಸ್ನೇಹಿತರು ಮತ್ತು ಸಾಲಕೊಟ್ಟ ಇತರರನ್ನು ಸೇರಿಸಿಕೊಂಡು ಶರತ್ನನ್ನು ಬನಶಂಕರಿ ಬಳಿಯಿಂದ ಅಪಹರಿಸಿದ್ದ.
ಬಳಿಕ ಕೋಲಾರದ ಗೌರಿಬಿದನೂರಿನ ತೋಟದ ಮನೆಯಲ್ಲಿ ಹಾಗೂ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸಂಕೇತ್ ಎಂಬವನ ಮಾವಿನ ತೋಟದಲ್ಲಿ 6-7 ದಿನ ಕಟ್ಟಿ ಹಾಕಿದ್ದರು. ಅರೆಬೆತ್ತಲೆಗೊಳಿಸಿ ಕೈ-ಕಾಲುಗಳನ್ನು ಕಟ್ಟಿ ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿ, ಹಣಕ್ಕಾಗಿ ಪೀಡಿಸಿದ್ದಾರೆ. ಕೊನೆಗೆ, ಶರತ್ ಅಮಾನುಷವಾಗಿ ಹತ್ಯೆಯಾಗಿದ್ದ. ಕೊಲೆಯ ಬಳಿಕ ಶವವನ್ನು ಕಾರಿನಲ್ಲಿ ಚಾರ್ಮಾಡಿ ಘಾಟ್ಗೆ ಒಯ್ದು ಅಲ್ಲಿ ಎಸೆದು ಬಂದಿದ್ದರು.
ಈ ನಡುವೆ, ಆರೋಪಿಗಳು ಮೃತನ ಮೊಬೈಲ್ನಿಂದಲೇ ಪಾಲಕರ ಮೊಬೈಲ್ಗೆ ಸಂದೇಶ ಕಳುಹಿಸಿದ್ದರು. 'ನಾನು ದುಡಿಯಲು ಹೊರ ರಾಜ್ಯಕ್ಕೆ ಹೋಗುತ್ತಿದ್ದೇನೆ. ನನ್ನನ್ನು ಹುಡುಕಬೇಡಿ' ಎಂದು ಸಂದೇಶ ಕಳುಹಿಸಿದ್ದರು. ಬಳಿಕ ಮೊಬೈಲ್ ಅನ್ನು ಹೊರ ರಾಜ್ಯಕ್ಕೆ ತೆರಳುತ್ತಿದ್ದ ಲಾರಿಯೊಂದರ ಮೇಲೆ ಎಸೆದಿದ್ದರು. ಲಾರಿ ಮೈಸೂರು ಮಾರ್ಗವಾಗಿ ಹೊರ ರಾಜ್ಯಕ್ಕೆ ಹೋಗಿತ್ತು. ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದರಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಮೆಸೇಜ್ ನಂಬಿದ್ದ ಶರತ್ ಪಾಲಕರು, ಮಗ ದುಡಿಯಲು ಹೋಗಿದ್ದಾನೆ ಎಂದೇ ನಂಬಿ ಸುಮ್ಮನಾಗಿದ್ದರು.
ನಾಪತ್ತೆ ದೂರು ನೀಡಿದ್ದ ಪಾಲಕರು
ಹಲವು ತಿಂಗಳು ಕಳೆದರೂ ಶರತ್ ಮನೆಗೆ ವಾಪಸ್ ಬಾರದ್ದರಿಂದ ಮತ್ತು ಮೊಬೈಲ್ ಕೂಡ ಸಿಗದೇ ಇದ್ದುದರಿಂದ ಅನುಮಾನಗೊಂಡ ಪಾಲಕರು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಕೂಡ ಸ್ಪಷ್ಟ ಮಾಹಿತಿ ಇಲ್ಲದ್ದರಿಂದ ಹೆಚ್ಚು ತನಿಖೆ ನಡೆಸಿರಲಿಲ್ಲ.
ರಹಸ್ಯ ಬಯಲಿಗೆಳೆದ ಅನಾಮಧೇಯ ಪತ್ರ
ಇದೇ ವೇಳೆ, ಕೇಂದ್ರ ವಿಭಾಗದ ಎಸಿಪಿ ಅವರಿಗೆ ಅನಾಮಧೇಯ ಪತ್ರ ಮತ್ತು ಅದರೊಂದಿಗೆ ಪೆನ್ಡ್ರೈವ್ ಬಂದಿತ್ತು. ಪೆನ್ಡ್ರೈವ್ ತೆರೆದು ನೋಡಿದಾಗ ಅದರಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ದೃಶ್ಯಗಳಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. ಪೆನ್ಡ್ರೈವ್ ದೃಶ್ಯಗಳನ್ನು ಆಧರಿಸಿ ಎ.ವಿ.ಶರತ್ ಕುಮಾರ್ ಮತ್ತು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಬೆಚ್ಚಿ ಬಿಳಿಸುವ ವಿಡಿಯೋಗಳು
ಶರತ್ನನ್ನು ಅಪಹರಿಸಿದ್ದ ಆರೋಪಿಗಳು ಆತನಿಗೆ ಚಿತ್ರಹಿಂಸೆ ನೀಡಿದ್ದನ್ನು ವಿಡಿಯೋ ಮಾಡಿದ್ದರು. ಸಿನಿಮಾಗಳಲ್ಲಿ ತೋರಿಸುವಂತೆ ಅರೆಬೆತ್ತಲೆಗೊಳಿಸಿ, ಕೈಗಳನ್ನು ಹಿಂದಕ್ಕೆ ಕಟ್ಟಿ, ಕಾಲುಗಳನ್ನೂ ಕಟ್ಟಿ ಹಗ್ಗದಿಂದ ಹೊಡೆಯಲಾಗಿತ್ತು. ಅಲ್ಲದೆ ಮರದ ಕೊಂಬೆಗೆ ಕೈ ಮತ್ತು ಕಾಲುಗಳನ್ನು ಕಟ್ಟಿ ಜೋತು ಬಿಟ್ಟಿರುವುದು ದೃಶ್ಯಗಳಿದ್ದವು. ಗೋಗರೆದರೂ ಬಿಡದೆ ಮನಬಂದಂತೆ ಥಳಿಸುತ್ತಿರುವ ದೃಶ್ಯಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
Bangalore Police crack nine month old kidnap and murder case that was not even reported of Sharath Kumar. Cubbon park police arrested five persons, including a member of Karnataka Rakshana Vedike. The arrested are identified as H G Venkatachalapathi, Karnataka Rakshana Vedike state president, his son A V Sharath Kumar. The victim H Sharat, 27, was abducted by the accused on March 23 and taken to a farmhouse in Gauribidanur where he was allegedly tortured for six days eventually causing his death. Later the accused stuffed his body in a sack and dumped it in the forested area at Charmadi Ghat.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm