ಬ್ರೇಕಿಂಗ್ ನ್ಯೂಸ್

ಜಾರ್ಖಂಡ್ ನಟಿಯನ್ನು ಪತಿ ಎದುರಲ್ಲೇ ಗುಂಡಿಟ್ಟು ಹತ್ಯೆ ; ಪತಿ ಪೊಲೀಸ್ ವಶಕ್ಕೆ 

28-12-22 10:01 pm       HK News Desk   ಕ್ರೈಂ

ಜಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ ಅವರನ್ನು ಆಗಂತುಕರು ಗುಂಡಿನ ದಾಳಿ ನಡೆಸಿ ಕೊಲೆಗೈದ ಘಟನೆ ಪಶ್ಚಿಮ ಬಂಗಾಳದ ರಾಂಚಿ ಹೆದ್ದಾರಿಯಲ್ಲಿ ನಡೆದಿದೆ. 

ಕೊಲ್ಕತ್ತಾ, ಡಿ.28 : ಜಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ ಅವರನ್ನು ಆಗಂತುಕರು ಗುಂಡಿನ ದಾಳಿ ನಡೆಸಿ ಕೊಲೆಗೈದ ಘಟನೆ ಪಶ್ಚಿಮ ಬಂಗಾಳದ ರಾಂಚಿ ಹೆದ್ದಾರಿಯಲ್ಲಿ ನಡೆದಿದೆ. 

ನಟಿ ರಿಯಾ ತನ್ನ ಪತಿ ಪ್ರಕಾಶ್ ಕುಮಾರ್ ಜೊತೆಗೆ ಕೋಲ್ಕತಾದಿಂದ ರಾಂಚಿಗೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬುಧವಾರ ಸಂಜೆ 6 ಗಂಟೆಗೆ ಗುಂಡಿನ ದಾಳಿ ನಡೆದಿದೆ. ಘಟನೆ ವೇಳೆ ಪತಿ ಪ್ರಕಾಶ್ ಕುಮಾರ್ ವಾಹನ ಚಲಾಯಿಸುತ್ತಿದ್ದರು. 

ಪ್ರಕಾಶ್ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಹೌರಾ ಜಿಲ್ಲೆಯ ಬಗ್ನಾನ್ ಪ್ರದೇಶದ ಮಹಿಶ್ರೇಖಾ ಸೇತುವೆ ಸಮೀಪ ತಮ್ಮ ಕಾರನ್ನು ನಿಲ್ಲಿಸಿದ್ದು, ಈ ಸಂದರ್ಭದಲ್ಲಿ ಮೂವರು ಆಗಂತುಕರು ಶಸ್ತ್ರಾಸ್ತ್ರದೊಂದಿಗೆ ದರೋಡೆ ಮಾಡುವ ಉದ್ದೇಶದಿಂದ ದಾಳಿ ನಡೆಸಿದ್ದರು. ಈ ವೇಳೆ ನಾವು ಪ್ರತಿರೋಧ ಒಡ್ಡಿದ್ದು, ಆಗ ಒಬ್ಬಾತ ರಿಯಾ ಮೇಲೆ ಪಾಯಿಂಟ್ ಬ್ಲ್ಯಾಂಕ್ ರೇಂಜ್ ನಿಂದ ಗುಂಡಿಟ್ಟಿದ್ದ. ಆಕೆ ರಕ್ತದ ಮಡುವಿನಲ್ಲೇ ಕೊನೆಯುಸಿರೆಳೆದಿದ್ದಾಗಿ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕೂಡಲೇ ರಿಯಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಟಿ ರಿಯಾ ಪತಿ ಪ್ರಕಾಶ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

An actress from Jharkhand, Riya Kumari, was shot dead by a gang of three men after she allegedly tried to thwart a robbery attempt in West Bengal's Howrah district on Wednesday, PTI reported. The incident happened when Riya Kumari, her husband Prakash Kumar, a film producer, and their two-year-old daughter were heading to Kolkata via the National Highway 16 by car, police said.