ಬ್ರೇಕಿಂಗ್ ನ್ಯೂಸ್
17-10-20 07:59 am Headline Karnataka News Network ಕ್ರೈಂ
ಅಮೆರಿಕ, ಅಕ್ಟೋಬರ್ .17 : ಮಹಿಳೆಯೊಬ್ಬಳು ತುಂಬು ಗರ್ಭಿಣಿಯನ್ನು ಕೊಲೆಗೈದು ಆಕೆಯ ಹೊಟ್ಟೆಯಲ್ಲಿದ್ದ ಭ್ರೂಣವನ್ನು ತೆಗೆದು ಹಾಕಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.
ಆರೋಪಿ ಮಹಿಳೆಯನ್ನು ಟೇಲರ್ ಮೊರ್ಟನ್(27 ) ಎಂದು ಗುರುತಿಸಲಾಗಿದೆ. ಬುಧವಾರ ಪೊಲೀಸರು ಆಕೆಯನ್ನು ಬಂಧಿಸಿ ಟೆಕ್ಸಾಸ್ ಜೈಲಿನಲ್ಲಿ ಇರಿಸಿದ್ದಾರೆ.
ಶುಕ್ರವಾರ ಪೊಲೀಸ್ ಮುಂದೆ ಬಂದಿದ್ದ ಟೇಲರ್, ಈಗಷ್ಟೇ ನಾನು ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ್ದೇನೆ. ಆದರೆ ಮಗು ಉಸಿರಾಡುತ್ತಿಲ್ಲ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇನೆ. ಅದರೆ ಅಷ್ಟೊತ್ತಿಗಾಗಲೇ ಮಗು ಸಾವನ್ನಪ್ಪಿತ್ತು ಎಂದು ಪೊಲೀಸರ ಬಳಿ ಹೇಳಿದ್ದಾಳೆ.

ಅದೇ ದಿನ ಟೆಕ್ಸಾಸ್ ನಗರದಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿದ್ದು, ಆಕೆ ಗರ್ಭದಲ್ಲಿದ್ದ ಮಗು ನಾಪತ್ತೆಯಾಗಿತ್ತು. ಪಾರ್ಕರ್ ಸಿಕ್ಕಿಬಿದ್ದ ಸ್ಥಳದಿಂದ 20 ಕಿ.ಮೀ. ದೂರದಲ್ಲಿ ಗರ್ಭಿಣಿ(ರೇಗನ್ ಸಿಮ್ಮನ್ಸ್) ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ವಿಚಾರಣೆ ವೇಳೆ ಟೇಲರ್ ಮಹಿಳೆಯ ಹತ್ಯೆ ಮಾಡಿದ್ದಾಳೆಂಬುದು ಗೊತ್ತಾಗಿದೆ. ಆಕೆ ಜಾಮೀನಿಗೆ 37 ಕೋಟಿ ಬಾಂಡ್ ನೀಡುವಂತೆ ಕೋರ್ಟ್ ಸೂಚಿಸಿದೆ.
ಒಂದು ವರ್ಷದ ಹಿಂದೆ ಫೇಸ್ಬುಕ್ ಮೂಲಕ ಟೇಲರ್ ಹಾಗೂ ರೇಗನ್ ಸ್ನೇಹ ಶುರುವಾಗಿತ್ತು. ಕೊಲೆಯ ಹಿಂದಿನ ದಿನ ಪಾರ್ಕರ್, ರೇಗನ್ ಗೆ ಗಿಫ್ಟ್ ಅನ್ನು ಕೊಟ್ಟಿದ್ದಳು, ಆದ್ರೆ ಪಾರ್ಕರ್ ಏಕೆ ಹತ್ಯೆ ಮಾಡಿದ್ದಾಳೆ ಎಂಬುದು ಗೊತ್ತಿಲ್ಲವೆಂದು ರೇಗನ್ ತಾಯಿ ಹೇಳಿದ್ದಾಳೆ.
ಗರ್ಭಿಣಿ ಕೊಲೆಗೆ ಕಾರಣವೇನು ಎಂಬುದು ಇನ್ನೂ ಸಹ ತಿಳಿದು ಬಂದಿಲ್ಲ. ಸದ್ಯ ಆರೋಪಿತ ಮಹಿಳೆ ಕೊಲೆ ಮತ್ತು ಅಪಹರಣ ಪ್ರಕರಣದಡಿಯಲ್ಲಿ ಟೆಕ್ಸಾಸ್ ಜೈಲಿನಲ್ಲಿ ಇದ್ದಾಳೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
A texas woman is accused of killing her pregnent friend and removing the victims unborn baby from her womb in a voilent attack that also resulted in the childs death.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm