ಬೈಕಿನಲ್ಲಿ ಎಂಡಿಎಂಎ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿ ಬಂಧನ ; ತಿಂಗಳ ಅಂತರದಲ್ಲಿ ಕೊಣಾಜೆಯಲ್ಲಿ ಮೂರನೇ ಡ್ರಗ್ಸ್ ಬೇಟೆ 

07-01-23 06:22 pm       Mangalore Correspondent   ಕ್ರೈಂ

ಬೈಕಲ್ಲಿ ನಿಷೇಧಿತ ಎಂಡಿಎಂಎ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದ ಡ್ರಗ್ ಪೆಡ್ಲರನ್ನ ಕೊಣಾಜೆ ಠಾಣೆ ಪಿಎಸ್ಐ ಶರಣಪ್ಪ ಭಂಢಾರಿ ನೇತೃತ್ವದ ತಂಡ ಬಂಧಿಸಿದ್ದು, ತಿಂಗಳ ಅಂತರದಲ್ಲಿ ಕೊಣಾಜೆ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ಮೂರು ಡ್ರಗ್ಸ್ ಪ್ರಕರಣಗಳ ಭರ್ಜರಿ ಬೇಟೆ ನಡೆಸಿದ್ದಾರೆ. 

ಉಳ್ಳಾಲ, ಜ.7: ಬೈಕಲ್ಲಿ ನಿಷೇಧಿತ ಎಂಡಿಎಂಎ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದ ಡ್ರಗ್ ಪೆಡ್ಲರನ್ನ ಕೊಣಾಜೆ ಠಾಣೆ ಪಿಎಸ್ಐ ಶರಣಪ್ಪ ಭಂಢಾರಿ ನೇತೃತ್ವದ ತಂಡ ಬಂಧಿಸಿದ್ದು, ತಿಂಗಳ ಅಂತರದಲ್ಲಿ ಕೊಣಾಜೆ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ಮೂರು ಡ್ರಗ್ಸ್ ಪ್ರಕರಣಗಳ ಭರ್ಜರಿ ಬೇಟೆ ನಡೆಸಿದ್ದಾರೆ. 

ಕಾಸರಗೋಡು ಜಿಲ್ಲೆ ಮಂಜೇಶ್ವರ, ಗೇರುಕಟ್ಟೆ ನಿವಾಸಿ ಸದ್ದಾಂ ಅಲಿಯಾಸ್ ಅಬ್ದುಲ್ಲ ಬಂಧಿತ ಡ್ರಗ್ ಪೆಡ್ಲರ್. ನಿನ್ನೆ ಸಂಜೆ‌ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ವಿಜಯ ನಗರ ಎಂಬಲ್ಲಿ‌‌ ಬಂಧಿತ ಸದ್ದಾಂ ಯಮಾಹ ಎಫ್ ಝಿ ಬೈಕಲ್ಲಿ ನಿಷೇಧಿತ ಎಂ ಡಿಎಂಎ ಮಾದಕ ವಸ್ತುವನ್ನ ಮಾರಾಟ ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್ಐ ಶರಣಪ್ಪ‌ ಮತ್ತು ತಂಡವು ದಾಳಿ ನಡೆಸಿ ಆರೋಪಿಯನ್ನ ಅಮಲು ಪದಾರ್ಥದೊಂದಿಗೆ ವಶಕ್ಕೆ ಪಡೆದಿದೆ.

Love, sex and MDMA: Could the party drug be used for couple's therapy? |  The Independent | The Independent

ಬಂಧಿತನಿಂದ 40,000 ರೂಪಾಯಿ ಮೌಲ್ಯದ 8 ಗ್ರಾಂ ಎಂಡಿಎಂಎ ಮಾತ್ರೆ, 1,56,000 ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಗಳನ್ನ ವಶ ಪಡಿಸಿಕೊಂಡಿದ್ದಾರೆ.
ಕೇರಳ-ಕರ್ನಾಟಕ ಗಡಿ ಪ್ರದೇಶ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಕೇರಳಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿದೆ. ಕೊಣಾಜೆ ಠಾಣೆಯ ದಕ್ಷ ಪಿಎಸ್ ಐ ಶರಣಪ್ಪ ಮತ್ತು ತಂಡ ಕಳೆದ ಡಿ.17 ರಂದು ಬೋಳಿಯಾರ್ ಮತ್ತು ಡಿ.26 ರಂದು ಚೇಳೂರು ಚೆಕ್ ಪೋಸ್ಟಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಿಷೇದೀತ ಗಾಂಜಾ , ಎಮ್ ಡಿಎಮ್ಎ ಸಾಗಾಟ ನಡೆಸುತ್ತಿದ್ದ ಪೆಡ್ಲರ್ಗಳನ್ನ ಬಂಧಿಸಿದ್ದರು.

The People's Commissioner

ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆನ್ಶುಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹಾಗೂ ಎಸಿಪಿ ದಿನಕರ ಶೆಟ್ಟಿಯವರ ನಿರ್ದೇಶನದಂತೆ ಕೊಣಾಜೆ ಇನ್ಸ್ ಪೆಕ್ಟರ್  ಪ್ರಕಾಶ್ ನೇತೃತ್ವದಲ್ಲಿ ಪಿ.ಎಸ್ಸೈ ಶರಣಪ್ಪ ಭಂಡಾರಿ ಹಾಗೂ ಸಿಬ್ಬಂದಿಗಳಾದ ಶಿವಕುಮಾರ್, ಪುರುಷೋತ್ತಮ, ಸುರೇಶ್, ಪ್ರಶಾಂತ್, ದೀಪಕ್, ಶೈಲೇಂದ್ರ, ಮಂಜಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Mangalore Mdma Drug supply by bike in Ullal, one arrested. In one month span three have been arrested by Konaje police in Ullal.