ಹಿಮಾಚಲದಿಂದ ಮಂಗಳೂರಿಗೆ ಗಾಂಜಾ, ಚರಸ್ ಪೂರೈಕೆ ; ಟೂರ್ ಗೈಡ್, ಪ್ರವಾಸಿ ಹೆಸರಲ್ಲಿ ಡ್ರಗ್ಸ್ ಸಂಗ್ರಹಿಸ್ತಿದ್ದ ಆರೋಪಿಗಳ ಸೆರೆ 

13-01-23 04:12 pm       Mangalore Correspondent   ಕ್ರೈಂ

ಪ್ರತ್ಯೇಕ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮತ್ತು ಚರಸ್ ಪೂರೈಸುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಜ.13: ಪ್ರತ್ಯೇಕ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮತ್ತು ಚರಸ್ ಪೂರೈಸುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಕುಲು ಜಿಲ್ಲೆಯ ಪಾರ್ವತಿ ವ್ಯಾಲಿ ಎಂಬ ಹೆಸರಿನ ಸುಮಾರು 300ಕ್ಕಿಂತ ಹೆಚ್ಚು ಹಳ್ಳಿಗಳಿರುವ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಗಾಂಜಾ ಮತ್ತು ಅದರಿಂದ ತಯಾರಿಸುತ್ತಿದ್ದ ಚರಸ್ ಅನ್ನು ಕಾರ್ಕಳದ ಬಜಗೋಳಿ ಮೂಲದ ಸುಕೇತ್ ಕಾವ ಎಂಬಾತ ತಾನು ಪ್ರವಾಸಿಗಳ ಟೂರ್ ಗೈಡರ್ ಎಂದು ಹೇಳಿಕೊಂಡು ಅಲ್ಲಿನ ಗುಡ್ಡಗಾಡು ಜನರಿಂದ ಸಂಗ್ರಹಿಸಿ, ಮಂಗಳೂರಿಗೆ ಪೂರೈಕೆ ಮಾಡುತ್ತಿದ್ದ. ಈತ‌ನ ಜೊತೆಗೆ ತಮಿಳುನಾಡು ಕೊಯಂಬತ್ತೂರು ಮೂಲದ ಅರವಿಂದ ಮತ್ತು ಕಾರ್ಕಳದ ಸುನಿಲ್ ಎಂಬವರು ಸಹಕರಿಸಿದ್ದು ಹಿಮಾಚಲದಲ್ಲಿ ತಾವು ಪ್ರವಾಸಿಗರೆಂಬ ಸೋಗಿನಲ್ಲಿ ಗಾಂಜಾ ಮತ್ತು ಚರಸ್ ಅನ್ನು ಗುಡ್ಡಗಾಡು ಜನರಿಂದ ಸಂಗ್ರಹಿಸುತ್ತಿದ್ದರು.  

ಸುಕೇತ್ ಕಾವ ಹಿಮಾಚಲದಲ್ಲಿ ಟೂರ್ ಗೈಡ್ ಆಗಿದ್ದರೆ, ಅರವಿಂದ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳೂರಿನ ಸೆನ್ ಕ್ರೈಂ ಠಾಣೆಯ ಪೊಲೀಸರು ಆರೋಪಿಗಳಿಂದ 500 ಗ್ರಾಮ್ ಚರಸ್ ಮತ್ತು ಒಂದು ಕೇಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಇವರು ಸಾಗಾಟಕ್ಕೆ ಬಳಸಿದ್ದ ರಿಡ್ಜ್ ಕಾರು ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಎಂಟು ಲಕ್ಷ ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಲಾಗಿದೆ. 

ಇನ್ನೊಂದು ಪ್ರಕರಣದಲ್ಲಿ ಮಂಗಳೂರಿನ ಕುಂಟಿಕಾನ ಕ್ರಾಸ್ ಬಳಿಯಲ್ಲಿ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ನಿವಾಸಿ ವಿಜಯಕುಮಾರ್ ಶೆಟ್ಟಿ(24) ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ 2.55 ಲಕ್ಷ ಮೌಲ್ಯದ 10.200 ಕೇಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ವಿಜಯ ಕುಮಾರ್ ವಿರುದ್ಧ ಈ ಹಿಂದೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿದೆ.

The city police arrested eight people in three separate cases of drug trafficking. A man who was transporting ganja in his car near Kuntikan cross in the city on Friday January 13 morning was arrested. The arrested is Vijaya Kumar Shetty (24), a resident of N R Pura taluk in Chikkamagaluru. Police confiscated 10.2 kg of ganja worth Rs 2.55 lac, a Maruti Swift car, mobile phone and Rs 500 cash. The total value of the confiscated goods is Rs 5.65 lac. A case in this connection is registered in Urwa police