ಬ್ರೇಕಿಂಗ್ ನ್ಯೂಸ್
15-01-23 07:35 pm Mangalore Correspondent ಕ್ರೈಂ
ಮಂಗಳೂರು, ಜ.15 : ಹೂವಿನ ಅಂಗಡಿಯಲ್ಲಿ ಇಟ್ಟಿದ್ದ 9 ಲಕ್ಷ ನಗದು ಕಳವು ಪ್ರಕರಣದ ಬೆನ್ನತ್ತಿದ ಪೊಲೀಸರು ಸಿನಿಮಾ ಶೈಲಿಯಲ್ಲಿ ನೆಲದಡಿ ಹೂತಿಟ್ಟಿದ್ದ ನಗದು ಹಣವನ್ನು ಎರಡು ತಿಂಗಳ ಬಳಿಕ ಪತ್ತೆ ಮಾಡಿದ್ದಾರೆ.
ಕಳೆದ ನವೆಂಬರ್ ತಿಂಗಳ 16ರಂದು ಕೆ.ಎಸ್. ರಾವ್ ರಸ್ತೆಯ ಉಮರಬ್ಬ ಎಂಬವರಿಗೆ ಸೇರಿದ ಮಾಸ್ಟರ್ ಫ್ಲವರ್ ಸ್ಟೋರ್ ನಲ್ಲಿರಿಸಿದ್ದ ಡ್ರಾವರ್ ನಲ್ಲಿಟ್ಟಿದ್ದ 9 ಲಕ್ಷ ನಗದು ಹಣವನ್ನು ರಾತ್ರಿ ವೇಳೆ ಕಳ್ಳರು ಹೊತ್ತೊಯ್ದಿದ್ದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗದು ಹೊತ್ತೊಯ್ದಿದ್ದಲ್ಲದೆ, ಒಳಗಿದ್ದ ಸಿಸಿಟಿವಿಯ ಡಿವಿಆರ್ ಅನ್ನೂ ಕಳವು ಮಾಡಿಕೊಂಡು ಹೋಗಿದ್ದರು.
ಪ್ರಕರಣದ ಬಗ್ಗೆ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಇತ್ತೀಚೆಗೆ ಜ.14ರಂದು ರಾತ್ರಿ ಆರೋಪಿ ಬೆಳ್ತಂಗಡಿ ಮದ್ದಡ್ಕ ನಿವಾಸಿ ಹಮೀದ್ ಕುಂಞಮೋನು (48) ಎಂಬ ನಟೋರಿಯಸ್ ಕಳ್ಳನನ್ನು ಪೊಲೀಸರು ಬಂಧಿಸಿದ್ದರು. ಸುಮಾರು 22 ಪ್ರಕರಣಗಳಲ್ಲಿ ವಾರಂಟ್ ಎದುರಿಸುತ್ತಿದ್ದ ಕುಂಞಮೋನುವನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಹೋಲ್ ಸೇಲ್ ಹೂವಿನ ಮಾರುಕಟ್ಟೆಯಿಂದ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದ.
ಆರೋಪಿ ಕುಂಞಮೋನು ಪ್ರತಿ ಬಾರಿ ಕಳವು ಮಾಡಿದ ನಗದು ಇನ್ನಿತರ ಸೊತ್ತುಗಳನ್ನು ಬಂದರಿನಲ್ಲಿ ತಾನು ಉಳಿದುಕೊಂಡಿದ್ದ ಹಳೆಯ ಕಟ್ಟಡದಲ್ಲಿ ಹೂತಿಡುತ್ತಿದ್ದ. ನ.16ರಂದು ರಾತ್ರಿ ಕಳವುಗೈದ ಒಂಬತ್ತು ಲಕ್ಷ ಹಣವನ್ನೂ ಅದೇ ಹಳೆ ಕಟ್ಟಡದಲ್ಲಿ ಇರಿಸಿದ್ದ. ಆದರೆ, ಮರುದಿನ ಅದೇ ಕಟ್ಟಡವನ್ನು ಕಾರ್ಮಿಕರು ನೆಲಸಮ ಮಾಡಿದ್ದರು. ಕಾರ್ಮಿಕರು ಅಗೆಯುತ್ತಿದ್ದಾಗ ಹಣದ ಕಂತೆಯ ಕಟ್ಟು ಅವರಿಗೆ ಸಿಕ್ಕಿತ್ತು. ಒಂಬತ್ತು ಲಕ್ಷ ಹಣವನ್ನು ಅವರು ಯಾರಿಗೂ ತಿಳಿಸದೆ ಹೊತ್ತೊಯ್ದಿದ್ದರು. ತಮಗೆ ಹಣ ಸಿಕ್ಕಿದ್ದ ಬಗ್ಗೆ ಕಟ್ಟಡದ ಮಾಲೀಕನಿಗೂ ತಿಳಿಸಿರಲಿಲ್ಲ.
ಮೊನ್ನೆ ಪೊಲೀಸರು ಆರೋಪಿ ಕುಂಞಮೋನುವನ್ನು ಬಂಧಿಸಿದಾಗ, ನಿಜ ವಿಷಯ ಬಾಯ್ಬಿಟ್ಟಿದ್ದ. ನಗದು ಹಣವನ್ನು ಹಳೆ ಕಟ್ಟಡದಲ್ಲಿ ಬಚ್ಚಿಟ್ಟಿದ್ದನ್ನೂ ಹೇಳಿದ್ದ. ಪೊಲೀಸರು ಅಲ್ಲಿ ಹುಡುಕಾಡಿದಾಗ ಕಟ್ಟಡ ನೆಲಸಮ ಆಗಿತ್ತು. ತಾನು ಕಳವು ಮಾಡಿದ್ದರೂ ನಗದು ಯಾರದ್ದೋ ಪಾಲಾಗಿದ್ದನ್ನು ಕಳ್ಳ ತಿಳಿಸಿದ್ದ. ಪೊಲೀಸರು ಕಟ್ಟಡದ ಮಾಲೀಕರ ಮೂಲಕ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಕಾರ್ಮಿಕರು ತಮಗೆ ಹಣ ಸಿಕ್ಕಿರುವುದನ್ನು ಒಪ್ಪಿಕೊಂಡಿದ್ದು ತಮ್ಮಲ್ಲಿ ಖರ್ಚಾಗಿ ಉಳಿದಿದ್ದ 5.80 ಲಕ್ಷ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಆರೋಪಿ ಕುಂಞಮೋನು 35ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು 22 ಪ್ರಕರಣಗಳಲ್ಲಿ ಕೋರ್ಟ್ ವಾರಂಟ್ ಇದ್ದರೂ ಹಾಜರಾಗದೆ ತಲೆಮರೆಸಿಕೊಂಡಿದ್ದ. ಪುತ್ತೂರು, ಉಪ್ಪಿನಂಗಡಿ, ಚಿಕ್ಕಮಗಳೂರು, ವೇಣೂರು, ಬೆಳ್ತಂಗಡಿ, ಶೃಂಗೇರಿ, ಮೂಡಿಗೆರೆ, ಧರ್ಮಸ್ಥಳ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಠಾಣೆಗಳಲ್ಲಿ ಕೇಸು ಎದುರಿಸುತ್ತಿದ್ದ. ಇದೀಗ ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದು ಕೋರ್ಟಿಗೆ ಹಾಜರುಪಡಿಸಿದ್ದಾರೆ.
An absconding accused wanted in more than 35 theft cases has been arrested by the city police. The absconder nabbed is Hameed (48), a resident of Beltangady. He has more than 35 theft cases, 22 warrants against him in Mangaluru City Police commissionerate, Dakshina Kannada and other districts of the state.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm