ಬ್ರೇಕಿಂಗ್ ನ್ಯೂಸ್
17-01-23 08:49 pm Mangalore Correspondent ಕ್ರೈಂ
ಪುತ್ತೂರು, ಜ.17: ದಲಿತ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಕೆಲವೇ ಗಂಟೆಗಳಲ್ಲಿ ಪ್ರಕರಣದ ಹಿನ್ನೆಲೆಯನ್ನು ಭೇದಿಸಿದ್ದಾರೆ. ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರಿಯತಮನೇ ಕೊಲೆ ಕೃತ್ಯ ನಡೆಸಿದ್ದಾನೆ ಅನ್ನುವ ವಿಷಯವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಸುಳ್ಯ ತಾಲೂಕಿನ ಕನಕಮಜಲು ನಿವಾಸಿ ಉಮೇಶ್ ಎಂಬಾತನನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ತೂರು ತಾಲೂಕಿನ ಮುಂಡೂರು ಬಳಿಯ ಕಂಪ ಎಂಬಲ್ಲಿ ವಾಸವಿದ್ದ ಗುರುವಪ್ಪ ಎಂಬವರ ಪುತ್ರಿ ಜಯಶ್ರೀ(23) ಎಂಬ ಯುವತಿಯನ್ನು ಸಂಬಂಧಿಕನೇ ಆಗಿರುವ ಉಮೇಶ್ ಪ್ರೀತಿಸುತ್ತಿದ್ದ. ಕೆಲವೊಮ್ಮೆ ಈಕೆಯ ಮನೆಗೆ ಬಂದು ಹೋಗುತ್ತಿದ್ದ ಉಮೇಶನ ನಡತೆ ಬಗ್ಗೆ ಜಯಶ್ರೀಗೆ ಸಂಶಯಗಳಿದ್ದವು. ಹೀಗಾಗಿ ಆತನನ್ನು ಉದ್ದೇಶಪೂರ್ವಕ ದೂರ ಮಾಡಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಉಮೇಶ, ಇಂದು ಬೆಳಗ್ಗೆ ನೇರವಾಗಿ ಜಯಶ್ರೀ ಮನೆಗೆ ನುಗ್ಗಿದ್ದು, ತನ್ನಲ್ಲಿದ್ದ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.
ಹೊಟ್ಟೆಗೆ ಚೂರಿಯಿಂದ ಇರಿಯಲ್ಪಟ್ಟಿದ್ದ ಜಯಶ್ರೀ ಮನೆಯಿಂದ ಹೊರಗೆ ಬಂದು ಬೊಬ್ಬೆ ಹಾಕಿದ್ದು, ಆನಂತರ ಮನೆ ಅಂಗಳದಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇಷ್ಟಾಗುತ್ತಲೇ ಉಮೇಶ ಅಲ್ಲಿಂದ ನಾಪತ್ತೆಯಾಗಿದ್ದ. ಜಯಶ್ರೀ ಮನೆಯಲ್ಲಿ ಆ ಸಂದರ್ಭದಲ್ಲಿ ಒಬ್ಬಂಟಿಯಾಗಿದ್ದಳು. ತಾಯಿ ತೋಟದ ಕೆಲಸಕ್ಕೆ ಹೋಗಿದ್ದರೆ, ಆಕೆಯ ತಮ್ಮ ಮನೆಯ ಹೊರಗಡೆ ಯಾವುದೋ ಕೆಲಸಕ್ಕಾಗಿ ಹೋಗಿದ್ದ. ಆನಂತರ, ಮಗಳ ಬೊಬ್ಬೆ ಕೇಳಿ ತಾಯಿ ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದಳು. ಆಕೆಯನ್ನು ಕೂಡಲೇ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಒಯ್ದಿದ್ದು, ಅಷ್ಟರಲ್ಲಿ ಸಾವನ್ನಪ್ಪಿದ್ದಳು. ಘಟನೆ ಬಗ್ಗೆ ತಾಯಿ ಪುತ್ತೂರು ಪೊಲೀಸರಿಗೆ ದೂರು ನೀಡಿದ್ದರು.
ಪುತ್ತೂರು ಪೊಲೀಸರು ಆಕೆಯ ಮೊಬೈಲ್ ಸಂಪರ್ಕ ಆಧರಿಸಿ ತನಿಖೆ ಕೈಗೊಂಡಿದ್ದು, ಕೆಲವೇ ಗಂಟೆಗಳ ಅಂತರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸಂಜೆಯೇ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತಾಯಿ ಮತ್ತು ತಮ್ಮನನ್ನೂ ವಿಚಾರಣೆ ನಡೆಸಿದ್ದರು. ಉಮೇಶ ಸುಳ್ಯ ತಾಲೂಕಿನ ಕನಕಮಜಲು ನಿವಾಸಿಯಾಗಿದ್ದು, ಕೃತ್ಯದ ಬಳಿಕ ಸುಳ್ಯಕ್ಕೆ ಪರಾರಿಯಾಗಿದ್ದ. ಅಲ್ಲಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಯಶ್ರೀಯನ್ನು ಕೇವಲ ಪ್ರೀತಿಯ ಕಾರಣಕ್ಕೆ ಕೊಲೆ ಮಾಡಿದ್ದೋ, ಇತರೇ ಕಾರಣ ಇದೆಯೇ ಅನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Puttur girl murder case, rejection of love reason for murder clarifies SP.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm