ಬ್ರೇಕಿಂಗ್ ನ್ಯೂಸ್
24-01-23 10:36 pm HK News Desk ಕ್ರೈಂ
ಲಕ್ನೋ, ಜ.24: ಪ್ರೀತಿ, ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಹೀಗಾಗಿ ಪ್ರೀತಿ, ಕಾಮ ಎರಡೂ ಕುರುಡು ಅಂತಲೂ ಹೇಳುತ್ತಾರೆ. ಇದನ್ನೇ ಬಿಂಬಿಸಬಲ್ಲ ಜ್ವಲಂತ ನಿದರ್ಶನವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಅವರಿಬ್ಬರೂ ಮೂಲತಃ ಹುಡುಗಿಯರು. ಪರಸ್ಪರ ಆಕರ್ಷಣೆಗೊಳಗಾಗಿ ಪ್ರೀತಿ, ಕಾಮಕ್ಕೆ ತಿರುಗಿ ಜೊತೆಯಾಗಿ ಓಡಿ ಹೋಗುತ್ತಾರೆ. ಕೊನೆಗೆ, ಅಷ್ಟೇ ಸಾಲದು ಅಂತ ಅವರಲ್ಲಿ ಒಬ್ಬಾಕೆ ತನ್ನ ಲಿಂಗವನ್ನೇ ಬದಲಿಸಿ ಗಂಡಾಗುತ್ತಾಳೆ. ಆದರೆ, ಆಕೆಗೆ ಕೊನೆಗೆ ಸಿಕ್ಕಿದ್ದು ಲವ್, ಸೆಕ್ಸ್, ದೋಖಾ ಅನ್ನುವಂಥ ಉಡುಗೋರೆ.
ಹೌದು.. ಈ ಕತೆಯನ್ನು ಕೇಳಿದರೆ, ಹೀಗೂ ಇದೆಯೇ ಎಂದು ಹುಬ್ಬು ಗಂಟಿಕ್ಕಿಕೊಳ್ಳಬೇಕು. ಯಾಕಂದ್ರೆ, ನಾವು ಸುಲಭದಲ್ಲಿ ನಂಬಲಾಗದ ಕತೆಯಿದು. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿರುವ ನೈಜ ಘಟನೆಯಿದು. ಸೋನಾಲಿ ಎಂಬ ಯುವತಿ ಆಕೆಯ ಹೆತ್ತವರ ಜೊತೆಗೆ ವಾಸವಿದ್ದಳು. 2016ರಲ್ಲಿ ಅವರ ಮನೆಯಿದ್ದ ಕಟ್ಟಡದ ಮೇಲಿನ ಭಾಗಕ್ಕೆ ಇನ್ನೊಬ್ಬಳು ಯುವತಿ ಬಾಡಿಗೆ ಬಂದಿದ್ದಳು. ಆಕೆಯ ಹೆಸರು ಸನಾ.. ಸರಕಾರಿ ಕೆಲಸದಲ್ಲಿದ್ದ ಸನಾ, ತನ್ನ ಹೆತ್ತವರಿಂದ ದೂರದಲ್ಲಿ ಕೆಲಸ ಇದ್ದುದರಿಂದ ಒಬ್ಬಂಟಿಯಾಗೇ ಇದ್ದಳು. ಆಕೆ ಆ ಮನೆಗೆ ಬಂದ ನಾಲ್ಕೇ ತಿಂಗಳಲ್ಲಿ ಕೆಳಗಿನ ಮನೆಯ ಸೋನಾಲಿ ಆಕರ್ಷಣೆಗೀಡಾಗಿದ್ದಳು. ಇಬ್ಬರೂ ಪರಸ್ಪರ ಪ್ರೀತಿಸತೊಡಗಿದ್ದರು. ಜೊತೆಗೆ, ಸಾಲದು ಎಂಬಂತೆ ಮೇಲಿನ ಮನೆಯಲ್ಲೇ ಕೆಲವೊಮ್ಮೆ ಒಟ್ಟಿಗಿರುತ್ತಿದ್ದರು.
ವರ್ಷದ ನಂತರ, ಸೋನಾಲಿ ಹೆತ್ತವರಿಗೆ ಇವರ ನಡತೆ ಬಗ್ಗೆ ಸಂಶಯ ಉಂಟಾಗಿತ್ತು. ಸೋನಾಲಿಯನ್ನು ಪ್ರಶ್ನೆ ಮಾಡಿದಾಗ, ಇಬ್ಬರ ಪ್ರೀತಿ ವಿಚಾರ ಗೊತ್ತಾಗಿದೆ. ಇದೇನ್ರೀ ಹುಡುಗಿಯರ ಲವ್ ಅಂತ ಗಾಬರಿಯಾದರೂ, ಮೊದಲು ಸನಾಳನ್ನು ಮನೆ ಬಿಟ್ಟು ಹೋಗುವಂತೆ ಹೇಳಿ ಹೊರಕ್ಕೆ ಹಾಕಿದ್ದಾರೆ. ಸನಾ ಸರಕಾರಿ ಉದ್ಯೋಗಿಯಾಗಿದ್ದರಿಂದ ಆ ಮನೆ ಬಿಟ್ಟು ಸರಕಾರದ ವಸತಿ ಗೃಹದಲ್ಲಿ ಹೋಗಿ ನೆಲೆಸಿದ್ದಳು. ಆದರೆ ಇದರ ಬೆನ್ನಲ್ಲೇ ಸೋನಾಲಿ ಕೂಡ ಮನೆಯಿಂದ ನಾಪತ್ತೆಯಾಗಿದ್ದು, ಸನಾ ಜೊತೆಗೆ ತೆರಳಿ ಉಳಿದುಕೊಂಡಿದ್ದಾಳೆ.
ಆನಂತರ, ಸೋನಾಲಿ ತನ್ನ ಸ್ನೇಹಿತೆ ಸನಾಗೆ ಲಿಂಗ ಬದಲಿಸುವಂತೆ ಸಲಹೆ ಮಾಡಿದ್ದಾಳೆ. ಹೇಗೂ ಜೊತೆಗಿದ್ದೇವೆ, ಲಿಂಗ ಬದಲಿಸಿಕೊಂಡು ಸೆಕ್ಸ್ ಮಾಡುವ ಇಂಗಿತ ತೋರಿದ್ದಾಳೆ. ಅದಕ್ಕೆ ಒಪ್ಪಿದ ಸನಾ, ಸೋನಾಲಿ ಜೊತೆಗೆ ದೆಹಲಿಯ ಗಂಗಾರಾಮ್ ಹಾಸ್ಪಿಟಲ್ ಗೆ ತೆರಳಿ ಈ ಬಗ್ಗೆ ತಪಾಸಣೆ ನಡೆಸಿದ್ದಾರೆ. ಸನಾಗೆ ಲಿಂಗ ಬದಲಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ನಡೆಸಬಹುದು. ಆಕೆಯ ದೇಹ ಅದಕ್ಕೆ ಸಮರ್ಥ ಇದೆ ಎಂದು ವೈದ್ಯರು ರಿಪೋರ್ಟ್ ನೀಡಿದ್ದೇ ತಡ, ಸನಾ ತನ್ನ ಲಿಂಗ ಬದಲಿಸಿಕೊಂಡು ಗಂಡಾಗಿದ್ದಳು. ಶಸ್ತ್ರಚಿಕಿತ್ಸೆಯ ಬಳಿಕ 2020ರಲ್ಲಿ ಅಧಿಕೃತವಾಗಿ ಗಂಡು ಆಗಿದ್ದಲ್ಲದೆ, ಸನಾ ತನ್ನ ಹೆಸರನ್ನು ಸೊಹೈಲ್ ಖಾನ್ ಎಂದು ಬದಲಿಸಿಕೊಂಡಿದ್ದಳು. ಅಷ್ಟೇ ಅಲ್ಲ, ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಸೋನಾಲಿ ತಾನು ಸೊಹೈಲ್ ಖಾನ್ ಪತ್ನಿಯೆಂದೇ ಹೆಸರು ದಾಖಲಿಸಿ ಸಹಿ ಮಾಡಿದ್ದಳು. ಹೆಣ್ಣು ಗಂಡಾಗಿ ಬದಲಾಗಿದ್ದ ನಂತರ ಅವರ ಸಂಸಾರವೂ ಹೊಸತನಕ್ಕೆ ತೆರೆದುಕೊಂಡಿತ್ತು.
ಈ ನಡುವೆ, 2022ರಲ್ಲಿ ಸೋನಾಲಿಗೆ ದೆಹಲಿಯ ಯತಾರ್ಥ ಹಾಸ್ಪಿಟಲ್ ನಲ್ಲಿ ಕೆಲಸ ಸಿಕ್ಕಿತ್ತು. ಅಲ್ಲಿ ಕೆಲಸಕ್ಕೆ ಹೋಗಲು ಶುರು ಮಾಡಿದ ಬಳಿಕ ಸೋನಾಲಿಯ ವರ್ತನೆಯೂ ಬದಲಾಗಿತ್ತು. ಗಂಡನನ್ನು ದೂರ ಮಾಡುತ್ತಿದ್ದ ಸೋನಾಲಿ ಹೆಚ್ಚು ಹೊತ್ತು ಹಾಸ್ಪಿಟಲ್ ನಲ್ಲಿಯೇ ಇರುತ್ತಿದ್ದಳು. ಇದರಿಂದ ಅವರ ನಡುವೆ ಜಗಳವೂ ಶುರುವಾಗಿತ್ತು. ಒಂದು ದಿನ ಸೋನಾಲಿ ಮನೆಯಲ್ಲಿದ್ದಾಗ, ತನ್ನ ಕುಟುಂಬವನ್ನೆಲ್ಲ ಬಿಟ್ಟು ಬಂದೆ, ಅವರನ್ನು ಎಣಿಸಿ ಅಳಲು ಶುರು ಮಾಡಿದ್ದಳು. ಆನಂತರ, ಸೊಹೈಲ್ ಖಾನ್ ಆಕೆಯ ಬೆನ್ನು ಬಿದ್ದು ಪರಿಶೀಲನೆ ನಡೆಸಿದಾಗ, ಸೋನಾಲಿಗೆ ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಗ್ಯಾನ್ ಎಂಬ ಹೊಸ ಹುಡುಗ ತಗ್ಲಾಕ್ಕೊಂಡಿದ್ದು ತಿಳಿದುಬಂದಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಸೋನಾಲಿ, ತಾನು ಗ್ಯಾನ್ ಜೊತೆಗೆ ಜೀವನ ಮಾಡುತ್ತೇನೆ ಎಂದು ಖಡಕ್ಕಾಗಿ ಹೇಳಿದ್ದಳು.
ಅಷ್ಟೇ ಅಲ್ಲ, ತನಗಾಗಿ ಲಿಂಗವನ್ನೇ ಬದಲಿಸಿಕೊಂಡು ಗಂಡಾಗಿದ್ದ ಸನಾ ಅಲಿಯಾಸ್ ಸೊಹೈಲ್ ಖಾನನ್ನು ಬಿಟ್ಟು ತನ್ನ ಹುಟ್ಟೂರು ಝಾನ್ಸಿಗೆ ತೆರಳಿದ್ದಳು. ಅಲ್ಲಿ ತೆರಳಿ ಹೆತ್ತವರ ಜೊತೆ ಸೇರಿ ಸೊಹೈಲ್ ಖಾನ್ ವಿರುದ್ಧವೇ ಅತ್ಯಾಚಾರ, ಕಿರುಕುಳದ ಆರೋಪ ಹೊರಿಸಿ ಕೇಸು ದಾಖಲು ಮಾಡಿದ್ದಾಳೆ. ಪೊಲೀಸರು ತನಿಖೆ ನಡೆಸಿದಾಗ, ಸನಾ ಅಲಿಯಾಸ್ ಸೊಹೈಲ್ ಖಾನ್ ತನ್ನ ನಿಜ ವಿಚಾರವನ್ನು ತಿಳಿಸಿದ್ದಾನೆ. ಸೋನಾಲಿಯನ್ನು ಪೊಲೀಸರು ಕರೆದು ಮನವರಿಕೆ ಮಾಡಿದರೂ, ಆಕೆ ಕೇಳಿರಲಿಲ್ಲ. ಸದ್ಯಕ್ಕೆ ಇಬ್ಬರ ನಡುವಿನ ಪ್ರಕರಣ ಕೋರ್ಟಿನಲ್ಲಿದ್ದು, ವಿಚಾರಣೆ ಹಂತದಲ್ಲಿದೆ. ಹುಡುಗಿಯರ ಹುಚ್ಚಾಟ, ಕಾಮ, ಪ್ರೇಮದ ಕಾದಾಟ ಅವಳು ಅವನಾಗುವ ತನಕವೂ ಮುಂದುವರಿದಿದೆ ಅಂದರೆ ನಾವು ನಂಬದೇ ಇರೋಕ್ಕಾಗುತ್ತಾ.
Even though we say that love knows no boundaries but sometimes it does see a terrible ending. Two girls met each other in Uttar Pradesh’s Jhansi district, soon became friends, and fell in love. As expected, they faced outrage from their family members, and then when one of them underwent a sex change, things turned sour.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am