ಅಪ್ರಾಪ್ತಳನ್ನೇ ಮದುವೆಯಾದ ಅತ್ಯಾಚಾರಿ ; ಹುಡುಗಿ ತಂದೆ, ಉಸ್ತಾದ್ ಸೇರಿ ಮೂವರ ಬಂಧನ

25-01-23 08:47 pm       HK News Desk   ಕ್ರೈಂ

16 ವರ್ಷದ ಅಪ್ರಾಪ್ತ ಯುವತಿಯನ್ನು ಅತ್ಯಾಚಾರಗೈದು ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯೇ ಆಕೆಯನ್ನು ಮದುವೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮದುಮಗ, ಹುಡುಗಿ ತಂದೆ ಸೇರಿ ಮೂವರನ್ನು ಬಂಧಿಸಿದ್ದಾರೆ.

ತಿರುವನಂತಪುರ, ಜ.25: 16 ವರ್ಷದ ಅಪ್ರಾಪ್ತ ಯುವತಿಯನ್ನು ಅತ್ಯಾಚಾರಗೈದು ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯೇ ಆಕೆಯನ್ನು ಮದುವೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮದುಮಗ, ಹುಡುಗಿ ತಂದೆ ಸೇರಿ ಮೂವರನ್ನು ಬಂಧಿಸಿದ್ದಾರೆ.

ಮದುವೆಯಾಗಿದ್ದ 23 ವರ್ಷದ ಅಲ್ ಅಮೀರ್, ಮದುವೆಯನ್ನು ನಿರ್ವಹಿಸಿದ್ದ ಉಸ್ತಾದ್ ಅನ್ವರ್ ಸಾದಾತ್ ಮತ್ತು ಮದುಮಗಳ ತಂದೆಯೂ ಬಂಧನ ಆಗಿದ್ದಾರೆ. 2021ರಲ್ಲಿ ಅಲ್ ಅಮೀರ್, ಅದೇ ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಪೋಕ್ಸೋ ಪ್ರಕರಣ ದಾಖಲಾಗಿ ನಾಲ್ಕು ತಿಂಗಳು ಜೈಲಿನಲ್ಲಿದ್ದ ಅಮೀರ್ ಬಳಿಕ ಜಾಮೀನಿನಲ್ಲಿ ಹೊರಬಂದಿದ್ದ.

ಆದರೆ ಜಾಮೀನಲ್ಲಿ ಹೊರಬಂದರೂ, ಹುಡುಗಿಯ ಮನೆಗೆ ತೆರಳಿ ಅತ್ಯಾಚಾರ, ಕಿರುಕುಳ ಮುಂದುವರಿಸಿದ್ದ. ಇದರಿಂದ ಬೇಸತ್ತ ಹುಡುಗಿಯ ತಂದೆ, ಮಗಳನ್ನು ಆತನಿಗೇ ಕೊಟ್ಟು ಮದುವೆ ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಆಕೆಯ ಶಾಲೆಗೆ ಹೋಗುವುದನ್ನು ನಿಲ್ಲಿಸುವಂತೆ ಮಾಡಿದ್ದಾರೆ. ಮೊನ್ನೆ ಜನವರಿ 18ರಂದು ಹುಡುಗಿಯನ್ನು ಅಮೀರನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಆದರೆ ಹುಡುಗಿ ಹಲವು ದಿನಗಳಿಂದ ಶಾಲೆಗೆ ಬಾರದೇ ಇದ್ದುದರಿಂದ ಶಿಕ್ಷಕರು ಮಾಹಿತಿ ಕೆದಕಿದಾಗ ಮದುವೆ ಮಾಡಿಸಿದ್ದು ಗೊತ್ತಾಗಿದೆ. ಅಪ್ರಾಪ್ತ ಹುಡುಗಿಯನ್ನು ಮದುವೆ ಮಾಡಿಸಿದ್ದಕ್ಕೆ ಪೊಲೀಸರ ಗಮನಕ್ಕೆ ತಂದಿದ್ದರು.

ಕೂಡಲೇ ಪೊಲೀಸರು ಆರೋಪಿ ಅಲ್ ಅಮೀರ್, ಮದುವೆ ಮಾಡಿಸಿದ ಉಸ್ತಾದ್ ಮತ್ತು ಹುಡುಗಿಯ ತಂದೆಯನ್ನು ಬಂಧಿಸಿದ್ದಾರೆ. ಅಮೀರ್ ವಿರುದ್ಧ ಈ ಹಿಂದೆಯೂ ಹಲವು ಪೊಲೀಸ್ ಕೇಸು ದಾಖಲಾಗಿದ್ದು, ಹಲವು ಕೇಸು ಎದುರಿಸುತ್ತಿದ್ದ. ಆದರೆ, ಆತನ ವರ್ತನೆಯಿಂದ ಬೇಸತ್ತಿದ್ದ ಹುಡುಗಿ ಮನೆಯವರು ಆಕೆಯನ್ನೇ ಕೊಟ್ಟು ಮದುವೆ ಮಾಡಿಸಿದ್ದು ಈಗ ಇವರಿಗೇ ಮುಳುವಾಗಿ ಪರಿಣಮಿಸಿದೆ. 

Three people were arrested after a 16-year-old girl was married off to a man, who repeatedly raped her in 2021, at a private function held on January 18 in Kerala's Thiruvananthapuram. Among those arrested are 23-year-old Ameer--the man to whom the girl was married off, Ustad Anwar Sadath (39), who solemnized the marriage, and the girl's father.