ಬ್ರೇಕಿಂಗ್ ನ್ಯೂಸ್
20-10-20 03:21 pm Mangalore Correspondent ಕ್ರೈಂ
ಮಂಗಳೂರು, ಅಕ್ಟೋಬರ್ 20: ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ತಂಡವೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ನೈತಿಕ ಪೊಲೀಸ್ ಗಿರಿ ತೋರಿದ ಘಟನೆಯ ವಿಡಿಯೋ ಮಂಗಳೂರಿನಲ್ಲಿ ವೈರಲ್ ಆಗಿದೆ.
ಎರಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ನೊಂದು ವಿಡಿಯೋದಲ್ಲಿ ಯುವಕ ತಾನು ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ತಪ್ಪೊಪ್ಪಿಕೊಳ್ಳುತ್ತಿದ್ದಾನೆ. ನೈತಿಕ ಪೊಲೀಸ್ ಗಿರಿ ಘಟನೆ ಎಲ್ಲಿ ನಡೆದಿದೆ ಎನ್ನುವುದು ತಿಳಿದುಬಂದಿಲ್ಲ. ಗುಡ್ಡ ಪ್ರದೇಶದಲ್ಲಿ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು ಬೆತ್ತದಿಂದ ಹೊಡೆಯುವ ವಿಡಿಯೋ ಚಿತ್ರೀಕರಿಸಲಾಗಿದೆ.
ಅದರಲ್ಲಿ ತುಳು ಭಾಷೆಯಲ್ಲಿ “ಪೊಣ್ಣು ಬೋಡ ನಿಕ್ಕ್? ರೇಪ್ ಮಲ್ಪುವನ?” (ಹೆಣ್ಣು ಬೇಕಾ ನಿಂಗೆ.. ರೇಪ್ ಮಾಡ್ತೀಯಾ..) ಎಂದು ಪ್ರಶ್ನಿಸಿ ಮುಖ ಮೂತಿ ನೋಡದೆ ಹೊಡೆಯುತ್ತಾನೆ. ಮತ್ತೊಂದು ವಿಡಿಯೋದಲ್ಲಿ ಯುವಕ ತಾನು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದೆ. ಮುಟ್ಟಬಾರದ ಜಾಗ ಮುಟ್ಟಿ ಕಿಸ್ ಕೊಟ್ಟೆ, ಈ ವೇಳೆ ಆಕೆ ಬೊಬ್ಬೆ ಹಾಕಿದ್ದರಿಂದ ಓಡಿಹೋದೆ ಎಂದು ಹೇಳುತ್ತಿದ್ದಾನೆ.


ಯಾರು ಹೊಡೆಯುತ್ತಿದ್ದಾರೆ, ಒದೆ ತಿಂದ ಯುವಕ ಯಾರೆಂಬ ವಿಚಾರ ಗೊತ್ತಿಲ್ಲ. ಯುವತಿಯರಿಗೆ ಕಿರುಕುಳ ನೀಡಿದ ವಿಚಾರಕ್ಕೆ ಸಂಘಟನೆಯವರು ಹಿಡಿದು ಥಳಿಸಿದ್ದಾರೆ ಎನ್ನಲಾಗುತ್ತಿದೆ. ಮಂಗಳೂರಿನ ಹೊರವಲಯದಲ್ಲಿ ಎಲ್ಲೋ ಘಟನೆ ನಡೆದಿರುವ ಸಾಧ್ಯತೆಯಿದೆ.
Video:
The Hindu extremists have thrashed a youth horribly alleging of sexual assault in Mangalore. The video of this has gone viral on social media.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 10:47 pm
Mangalore Correspondent
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm