ಬ್ರೇಕಿಂಗ್ ನ್ಯೂಸ್
26-07-26 09:57 pm HK News Desk ಕರಾವಳಿ
ಮಂಗಳೂರು, ಜುಲೈ 26: ದುಬೈನಿಂದ ಬಂದಿದ್ದ ಯುವಕನೊಬ್ಬ ತನ್ನ ಪರ್ಸ್ ಒಂದನ್ನು ಏರ್ಪೋರ್ಟ್ ಪಾರ್ಕಿಂಗ್ ಏರಿಯಾದಲ್ಲಿ ಬಿಟ್ಟು ಹೋಗಿದ್ದು, ಬಳಿಕ ಅದನ್ನು ಗಮನಿಸಿದ ಸಿಐಎಸ್ಎಫ್ ಸಿಬಂದಿ ಪ್ರಯಾಣಿಕನ ಮಾಹಿತಿ ಕಲೆಹಾಕಿ ಬೆಲೆಬಾಳುವ ಸೊತ್ತುಗಳಿದ್ದ ಪರ್ಸ್ ಅನ್ನು ಹಿಂದಿರುಗಿಸಿದ ಘಟನೆ ನಡೆದಿದೆ.
ಜುಲೈ 26ರ ಭಾನುವಾರ ಬೆಳಗ್ಗೆ 6.15ರ ವೇಳೆಗೆ ಸಿಐಎಸ್ಎಫ್ ಸಿಬಂದಿ ವಿಠಲ್ ಹೊಸಮನಿ ಅವರು ಪಾರ್ಕಿಂಗ್ ಏರಿಯಾದಲ್ಲಿ ಕಪ್ಪು ಬಣ್ಣದ ಪರ್ಸ್ ಒಂದು ಟ್ರಾಲಿಯಲ್ಲಿ ಉಳಿದಿರುವುದನ್ನು ಗಮನಿಸಿದ್ದರು. ಕೆಳ ಅಂತಸ್ತಿನ ಮಹಡಿಯಲ್ಲಿ ಈ ಪರ್ಸ್ ಸಿಕ್ಕಿದ್ದು ಯಾರೋ ಪ್ರಯಾಣಿಕರು ಬಿಟ್ಟು ಹೋಗಿದ್ದಿರಬೇಕೆಂಬ ಅನುಮಾನ ಇತ್ತು.
ಆದರೂ ಶ್ವಾನ ದಳವನ್ನು ಕರೆಸಿ ತಪಾಸಣೆ ನಡೆಸಿದ್ದು ಯಾವುದೇ ಸ್ಫೋಟಕ ವಸ್ತು ಇಲ್ಲವೆಂದು ಖಚಿತ ಪಡಿಸಿದ ಬಳಿಕ ಪರ್ಸ್ ತೆರೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ, ಅದರೊಳಗೆ ನಿಶಾಲ್ ಶಾಹಿಕ್ ಹೆಸರಿನ ಪಾಸ್ ಪೋರ್ಟ್, ಐಫೋನ್ ಮೊಬೈಲ್, ಒಂದು ಗೋಲ್ಡ್ ರಿಂಗ್, 500 ದಿರ್ಹಮ್ (ಅಂದಾಜು 11 ಸಾವಿರ ರೂ.), 10 ಸಾವಿರ ಡಾಲರ್ (9 ಲಕ್ಷ ರೂ. ಮೌಲ್ಯ), ಒಂದು ಬೋರ್ಡಿಂಗ್ ಪಾಸ್ ಮತ್ತು ಬ್ಯಾಂಕ್ ಸಂಬಂಧಪಟ್ಟ ಕಾರ್ಡುಗಳು ಇದ್ದವು. ಸಿಸಿಟಿವಿ ಪರಿಶೀಲನೆ ವೇಳೆಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿರುವುದು ಪತ್ತೆಯಾಗಿತ್ತು. ಅಲ್ಲದೆ, ಆ ವ್ಯಕ್ತಿ ಅದಾಗಲೇ ಏರ್ಪೋರ್ಟ್ ನಿಂದ ಹೊರಕ್ಕೆ ತೆರಳಿರುವುದು ತಿಳಿದುಬಂತು.
ಆನಂತರ, ಬೋರ್ಡಿಂಗ್ ಪಾಸ್ ನಲ್ಲಿದ್ದ ಮೊಬೈಲ್ ನಂಬರ್ ಆಧರಿಸಿ ಕರೆ ಮಾಡಿ ಪ್ರಯಾಣಿಕನಿಗೆ ಪರ್ಸ್ ಬಿಟ್ಟು ಹೋಗಿರುವುದನ್ನು ತಿಳಿಸಲಾಯಿತು. ನಿಶಾಲ್ ಶಾಹಿಕ್ ಎನ್ನುವ ಯುವಕ ದುಬೈನಿಂದ ಮಂಗಳೂರಿಗೆ ಬಂದಿದ್ದು, ತನ್ನ ಬ್ಯಾಗಿನೊಂದಿಗೆ ಟ್ರಾಲಿ ಬಿಟ್ಟು ತೆರಳುವಾಗ ಪರ್ಸ್ ಉಳಿದುಕೊಂಡಿತ್ತು. ಬಳಿಕ ನಿಶಾಲ್ ಮರಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದು ಸಿಐಎಸ್ಎಫ್ ಸಿಬಂದಿ ನಿಗದಿತ ಪರಿಶೀಲನೆ ಮುಗಿಸಿ ಪರ್ಸ್ ಹಿಂತಿರುಗಿಸಿದರು. ಪ್ರಾಮಾಣಿಕತೆ ತೋರಿದ ಸಿಬಂದಿಯ ಬಗ್ಗೆ ಪ್ರಯಾಣಿಕ ಪ್ರಶಂಸೆ ವ್ಯಕ್ತಪಡಿಸಿದರು.
19-08-26 09:55 pm
HK News Staffer
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
ಆಹಾರ ಸುರಕ್ಷತೆಗೆ ಖಾದರ್ ಹೊಸ ಪ್ಲ್ಯಾನ್; ಹೋಟೆಲ್ ಆ...
17-08-26 02:26 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
19-08-26 08:40 pm
HK News Staffer
ಜೈಲಿನ ಜಾಮರ್ ಸಮಸ್ಯೆ ಇತ್ಯರ್ಥಕ್ಕೆ ಕಾಲಮಿತಿ ನಿಗದಿಪ...
19-08-26 04:19 pm
ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ ; ನಾಗಬನ, ನಾಗ ಸ...
17-08-26 05:07 pm
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
20-08-26 01:58 pm
HK News Staffer
4.91 ಕೋಟಿ ರೂ. ಮೌಲ್ಯದ ನಕಲಿ ಔಷಧಿ ದಂಧೆ ಬಯಲು; ಆಸ...
19-08-26 07:25 pm
ಆಸ್ತಿ ವಿವಾದ ; ಪ್ರಿಯಕರನ ಜೊತೆ ಸೇರಿ ಅಪ್ಪನನ್ನ ಕಲಿ...
18-08-26 10:06 pm
ಮೊಬೈಲ್ ಗೀಳು ಬೇಡ ಎಂದಿದ್ದ ಅಜ್ಜನನ್ನೇ ಕೊಲ್ಲಿಸಿದ 1...
18-08-26 06:02 pm
ಚಿಕ್ಕಬಾಣಾವರ ತಂದೆ, ಮಗು ಸಾವಿಗೆ ರೋಚಕ ಟ್ವಿಸ್ಟ್ ;...
18-08-26 03:00 pm