ಕಂಡಕ್ಟರ್ ಆಗೋಕೆ ಕಿಲಾಡಿಗಳ ಮಾಸ್ಟರ್ ಪ್ಲಾನ್ ;  ಶರ್ಟ್ ನಲ್ಲಿ ಕಬ್ಬಿಣ, ಅಂಡರ್​ವೇರ್ ನಲ್ಲಿ ಕೆಜಿ ಕಲ್ಲು , ನಾಲ್ವರ ಚಾಲಾಕಿತನ ಬಯಲು 

10-02-23 01:53 pm       HK News Desk   ಕ್ರೈಂ

ಪಿಎಸ್​​ಐ ಹಾಗು ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಮಾಸುವ ಮುನ್ನವೇ‌ ಮಗದೊಂದು ಪರೀಕ್ಷೆಯ ಗೋಲ್ಮಾಲ್​ ಬೆಳಕಿಗೆ ಬಂದಿದೆ. ಕೆಕೆಆರ್​ಟಿಸಿ ಡ್ರೈವರ್​ ಕಂ ಕಂಡಕ್ಟರ್​ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಪಾಸ್​ ಮಾಡಲು ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಬಹಿರಂಗವಾಗಿದೆ.

ಕಲಬುರ್ಗಿ, ಫೆ.10 : ಪಿಎಸ್​​ಐ ಹಾಗು ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಮಾಸುವ ಮುನ್ನವೇ‌ ಮಗದೊಂದು ಪರೀಕ್ಷೆಯ ಗೋಲ್ಮಾಲ್​ ಬೆಳಕಿಗೆ ಬಂದಿದೆ. ಕೆಕೆಆರ್​ಟಿಸಿ ಡ್ರೈವರ್​ ಕಂ ಕಂಡಕ್ಟರ್​ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಪಾಸ್​ ಮಾಡಲು ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಬಹಿರಂಗವಾಗಿದೆ.

ಕೆಕೆಆರ್‌ಟಿಸಿ ಡ್ರೈವರ್ ಕಂ ಕಂಡಕ್ಟರ್ ಹುದ್ದೆ ಗಿಟ್ಟಿಸಲು ಅಭ್ಯರ್ಥಿಗಳು ಕಬ್ಬಿಣ ಹೊತ್ತು ಬಂದಿದ್ದರು. ಹೇಗಾದರೂ ಮಾಡಿ ಕೆಲಸ ಗಿಟ್ಟಿಸಲೇಬೇಕೆಂದು ಅಡ್ಡದಾರಿ ಹಿಡಿದಿದ್ದ ಅಭ್ಯರ್ಥಿಗಳ ಅಕ್ರಮವನ್ನು ಜಾಗೃತ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಬೇಕಾದರೆ 55 ಕೆ.ಜಿ. ತೂಕ ಕಡ್ಡಾಯವಾಗಿದೆ. ಹೀಗಾಗಿ ಕೆಲ ಅಭ್ಯರ್ಥಿಗಳು ತೂಕ ಹೆಚ್ಚಳಕ್ಕಾಗಿ ವಿನೂತನ ಮಾರ್ಗ ಅನುಸರಿಸಿ ಇದೀಗ ಸಿಕ್ಕಿಬಿದ್ದಿದ್ದಾರೆ.

ಒಳಉಡುಪುಗಳಲ್ಲಿ ಭಾರವಾದ ಕಬ್ಬಿಣದ ರಾಡ್‌ಗಳು, ತಕ್ಕಡಿಯಲ್ಲಿ ಬಳಸುವ ಕಬ್ಬಿಣದ ಕಲ್ಲುಗಳನ್ನು ಇಟ್ಟುಕೊಂಡು ಬಂದು ಕಣ್ಣಿಗೆ ಮಣ್ಣೆರಚಲು ಅಭ್ಯರ್ಥಿಗಳು ಯತ್ನಿಸಿದ್ದರು. ಆದರೆ ಅವರ ಪ್ರಯತ್ನ ಜಾಗೃತ ದಳದ ಅಧಿಕಾರಿಗಳಿಂದ ವಿಫಲವಾಗಿದೆ. ಒಳಉಡುಪಿನಲ್ಲಿ 5 ರಿಂದ 10 ಕೆಜಿ ತೂಕದ ಕಲ್ಲುಗಳನ್ನು ಅಭ್ಯರ್ಥಿಗಳು ಹಲವು ಗಂಟೆಗಳ ಕಾಲ ಇಟ್ಟುಕೊಂಡಿದ್ದರು ಎಂಬ ಸಂಗತಿ ಬಯಲಾಗಿದೆ. ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Kkrtc fraud in Kalaburgi, 4 held for cheating physical fitness test of Bus Conductor job.