ಕನ್ಯಾಕುಮಾರಿಯಲ್ಲಿ ಮಂಗಳೂರಿನ ಮೀನುಗಾರರಿಗೆ ಸಮುದ್ರ ಮಧ್ಯದಲ್ಲೇ ಕಲ್ಲು ತೂರಾಟ, ಹಲ್ಲೆ ಯತ್ನ ; ವಿಡಿಯೋ ಸೆರೆ 

11-02-23 12:19 pm       Mangalore Correspondent   ಕ್ರೈಂ

ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆ ತೆರಳಿದ್ದ ಬೋಟ್ ಗಳನ್ನು ಅಡ್ಡಗಟ್ಟಿ ತಮಿಳು ಮೀನುಗಾರರು ಕಲ್ಲೆಸೆದು ಹಾನಿಗೊಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ. 

ಮಂಗಳೂರು, ಫೆ.11: ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆ ತೆರಳಿದ್ದ ಬೋಟ್ ಗಳನ್ನು ಅಡ್ಡಗಟ್ಟಿ ತಮಿಳು ಮೀನುಗಾರರು ಕಲ್ಲೆಸೆದು ಹಾನಿಗೊಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ. 

ನಾಲ್ಕು ಬೋಟ್ ಗಳಲ್ಲಿದ್ದ ಕನ್ನಡಿಗರ ಮೀನುಗಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಐದಾರು ದೊಡ್ಡ ಬೋಟ್ ಗಳಲ್ಲಿ ಸುತ್ತುವರಿದ ತಮಿಳಿಗರು ಕಲ್ಲು ತೂರಿರುವ ದೃಶ್ಯ ಸೆರೆಯಾಗಿದೆ. ತಮಿಳು ಮೀನುಗಾರರು ತಮ್ಮ ಬೋಟಿನಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬಂದು ಎಸೆದಿದ್ದು ಹಲವರು ಗಾಯಗೊಂಡಿದ್ದಾರೆ. 

ನಾಲ್ಕು ಬೋಟುಗಳಿಗೂ ಹಾನಿಯಾಗಿದ್ದು ಮೀನುಗಾರರು ಅಲ್ಲಿಂದ ತಪ್ಪಿಸಿಕೊಂಡು ಮಂಗಳೂರಿಗೆ ಹಿಂತಿರುಗಿದ್ದಾರೆ. ಬೋಟ್ ಒಳಗಿನ ಕಿಟಕಿ, ಗ್ಲಾಸ್ ಒಡೆದು ಹೋಗಿದೆ. ಅಲ್ಲದೆ, ಕಲ್ಲು ತೂರಾಟ ಸಂದರ್ಭದಲ್ಲಿ ಮೀನುಗಾರರು ಬೋಟ್ ಒಳಗಡೆ ಅವಿತುಕೊಂಡಿದ್ದರು. ಭಾರತೀಯ ಕರಾವಳಿಯಲ್ಲಿ ಯಾವುದೇ ಕಡೆ ಭಾರತೀಯರಿಗೆ ಮೀನುಗಾರಿಕೆ ನಡೆಸಲು ಅವಕಾಶ ಇದೆ. ಅದಕ್ಕೆ ರಾಜ್ಯವಾರು, ಭಾಷಾವಾರು ವಿಂಗಡಣೆ ಇಲ್ಲ. ಹಾಗಿದ್ದರೂ, ಕನ್ನಡಿಗ ಮೀನುಗಾರರ ಮೇಲೆ ತಮಿಳರು ಹಲ್ಲೆಗೆ ಮುಂದಾಗಿರುವುದು ಆತಂಕ ಮೂಡಿಸಿದೆ.

Stones were pelted at kannadigas fishermen in four boats. Tamilians surrounded by five or six big boats were seen pelting stones. Tamil fishermen loaded stones in their boats and threw them away, injuring several others.