ಬ್ರೇಕಿಂಗ್ ನ್ಯೂಸ್
14-02-23 09:52 pm HK News Desk ಕ್ರೈಂ
ನವದೆಹಲಿ, ಫೆ.14: ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ರೀತಿಯಲ್ಲೇ ಮತ್ತೊಬ್ಬ ಯುವತಿಯನ್ನು ಕೊಂದು ಫ್ರಿಡ್ಜ್ ನಲ್ಲಿ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದ ಹರ್ಯಾಣ ಮೂಲದ ಯುವತಿಯನ್ನು ಪ್ರೀತಿಸಿ ಲಿವಿಂಗ್ ರಿಲೇಶನ್ ಶಿಪ್ ಇರಿಸಿಕೊಂಡಿದ್ದ ಸಾಹಿಲ್ ಗೆಹ್ಲೋಟ್ ಎಂಬಾತ ಮೊಬೈಲ್ ಚಾರ್ಜರ್ ಕೇಬಲ್ ನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ದೆಹಲಿಯ ನಜಾಫ್ ಗರ್ ನಗರದ ಮಿತ್ರಾಂವ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ನಿಕ್ಕಿ ಯಾದವ್ ಎಂದು ಗುರುತಿಸಲಾಗಿದೆ. ಸಾಹಿಲ್ ಗೆಹ್ಲೋಟ್ (24) ಎಂಬಾತ ಆರೋಪಿಯಾಗಿದ್ದು, ಫೆ.9ರಂದು ರಾತ್ರಿ ತನ್ನದೇ ಕಾರಿನಲ್ಲಿ ಯುವತಿಯ ಕುತ್ತಿಗೆಯನ್ನು ಕೇಬಲ್ ನಲ್ಲಿ ಬಿಗಿದು ಕೊಲೆ ಮಾಡಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, 2018ರಲ್ಲಿ ಇವರು ಪರಸ್ಪರ ಪರಿಚಯವಾಗಿದ್ದು, ಬಳಿಕ ಜೊತೆಯಾಗಿದ್ದರು. ಹರ್ಯಾಣ ಮೂಲದ ಯುವತಿಯಾಗಿರುವ ನಿಕ್ಕಿ ಯಾದವ್ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದಳು. ಇಬ್ಬರು ಕೂಡ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಸಂದರ್ಭದಲ್ಲಿ ಪರಿಚಯ ಆಗಿದ್ದು, ಬಳಿಕ ನೋಯ್ಡಾದ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು.

ಅಲ್ಲಿ ಓದುತ್ತಿರುವಾಗಲೇ ಅವರು ಒಂದೇ ಕೊಠಡಿ ಪಡೆದು ಲಿವಿಂಗ್ ರಿಲೇಶನ್ ಇಟ್ಟುಕೊಂಡಿದ್ದರು. ಸಾಹಿಲ್ ದೆಹಲಿಯ ಮಿತ್ರಾಂವ್ ಗ್ರಾಮದ ನಿವಾಸಿಯಾಗಿದ್ದು, 2020ರಲ್ಲಿ ಕೋವಿಡ್ ಲಾಕ್ಡೌನ್ ಎದುರಾದ ವೇಳೆ ಇಬ್ಬರು ಕೂಡ ತಮ್ಮ ಮನೆ ಸೇರಿದ್ದರು. ಆನಂತರ ಲಾಕ್ಡೌನ್ ಬಳಿಕ ದೆಹಲಿಗೆ ಬಂದಿದ್ದು, ದ್ವಾರಕಾ ನಗರದಲ್ಲಿ ಈ ಹಿಂದಿನ ರೀತಿಯಲ್ಲೇ ಮನೆ ಬಾಡಿಗೆ ಪಡೆದು ಜೊತೆಯಾಗಿ ನೆಲೆಸಿದ್ದರು. ತಾವು ಜೊತೆಗೆ ವಾಸಿಸುವುದು, ಪ್ರೀತಿಸುತ್ತಿದ್ದುದನ್ನು ಇವರು ತಮ್ಮ ಮನೆಯಲ್ಲಿ ತಿಳಿಸಿರಲಿಲ್ಲ. ಇದೇ ವೇಳೆ, ಆರೋಪಿ ಸಾಹಿಲ್ ಮನೆಯಲ್ಲಿ ಮದುವೆಗೆ ಒತ್ತಾಯ ಪಡಿಸತೊಡಗಿದ್ದರು.
ಇತ್ತೀಚೆಗೆ ಆತನ ಹೆತ್ತವರೇ ಯುವತಿಯನ್ನು ನೋಡಿ, ಫೆ.10ರಂದು ಮದುವೆಗೆ ದಿನ ನಿಗದಿ ಮಾಡಿದ್ದರು. ಈ ವಿಚಾರ ತಿಳಿದ ನಿಕ್ಕಿ ಯಾದವ್, ಸಾಹಿಲ್ ಜೊತೆಗೆ ಜಗಳ ಮಾಡಿದ್ದಳು. ಫೆ.9ರಂದು ರಾತ್ರಿ ಇವರು ಕಾರಿನಲ್ಲಿ ತೆರಳುತ್ತಿದ್ದಾಗಲೇ ಮಾತಿಗೆ ಮಾತು ಬೆಳೆಸಿ ಜಗಳ ಮಾಡಿದ್ದು, ಆರೋಪಿ ಸಾಹಿಲ್ ಯುವತಿಯನ್ನು ತನ್ನ ಕಾರಿನಲ್ಲಿ ಮೊಬೈಲ್ ಚಾರ್ಜರ್ ಕೇಬಲ್ ನಲ್ಲಿಯೇ ಕುತ್ತಿಗೆ ಬಿಗಿದು ಕೊಂದಿದ್ದಾನೆ. ಬಳಿಕ ತಾನು ನಡೆಸುತ್ತಿದ್ದ ಢಾಬಾ ಸೆಂಟರಿಗೆ ಯುವತಿಯ ಶವವನ್ನು ಸಾಗಿಸಿ, ಫ್ರಿಡ್ಜ್ ಒಂದರಲ್ಲಿ ಬಚ್ಚಿಟ್ಟಿದ್ದಾನೆ. ಆನಂತರ ತನ್ನ ಊರಿಗೆ ತೆರಳಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.
ಇದೇ ವೇಳೆ, ಇತ್ತ ಡಾಬಾ ಸೆಂಟರಿನಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದರು. ಮಿತ್ರಾಂವ್ ಗ್ರಾಮದಲ್ಲಿ ಹುಡುಕಾಟ ನಡೆಸಿದಾಗ ಸಾಹಿಲ್ ನಾಪತ್ತೆಯಾಗಿದ್ದ. ಅಲ್ಲದೆ, ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಪೊಲೀಸರಿಗೆ ಸಾಹಿಲ್ ಕೊಲೆ ನಡೆಸಿದ್ದಾನೆಂದು ಅನುಮಾನದಲ್ಲಿ ಹುಡುಕಾಟ ನಡೆಸಿದ್ದಾರೆ. ದೆಹಲಿ ಗಡಿಭಾಗದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಮೇಲ್ನೋಟಕ್ಕೆ ಶ್ರದ್ಧಾ ವಾಲ್ಕರ್ ರೀತಿಯಲ್ಲೇ ಕೊಲೆ ಕೃತ್ಯ ನಡೆದಿದೆ. ಜೊತೆಗೆ ವಾಸಿಸುತ್ತಿದ್ದ ಶ್ರದ್ಧಾಳನ್ನು ಆಕೆಯ ಪ್ರಿಯಕರನೇ ಕೊಲೆಗೈದು ಬಳಿಕ 35 ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ಬಚ್ಚಿಟ್ಟಿದ್ದ. ಈ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು.
Delhi Police has arrested a man for allegedly killing his 22-year-old live-in partner and storing her body in a fridge in a dhaba on the outskirts of Mitraon village in Najafgarh. According to sources, the deceased, identified as Nikki Yadav, was strangulated to death by her boyfriend, Sahil Gehlot (24), near Kashmiri Gate ISBT on the intervening night of February 9 and 10. The accused allegedly used the data cable of his mobile in his car to strangulate the woman.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm