ಸೆಲ್ಫಿ ವಿಚಾರಕ್ಕೆ ಗಲಾಟೆ ; ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದ ಮೇಲೆ ದಾಳಿ 

22-02-23 12:00 pm       HK News Desk   ಕ್ರೈಂ

ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಕಳೆದ ರಾತ್ರಿ ಮುಂಬೈಯ ಚೆಂಬೂರು ಎಂಬಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಹಲ್ಲೆಯಾಗಿದೆ. 

ಮುಂಬೈ, ಫೆ.22: ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಕಳೆದ ರಾತ್ರಿ ಮುಂಬೈಯ ಚೆಂಬೂರು ಎಂಬಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಹಲ್ಲೆಯಾಗಿದೆ. 

ವ್ಯಕ್ತಿಯೊಬ್ಬ ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಮಾಡಿ ಅವರನ್ನು ವೇದಿಕೆಯಿಂದ ತಳ್ಳುತ್ತಿರುವ ವಿಡಿಯೋ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಬಣದ ಶಾಸಕ ಪ್ರಕಾಶ್​ ಫರ್ತೆಪೇಕರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಘಟನೆ ಸಂಬಂಧ ಮುಂಬೈಯ ಚೆಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

Sonu Nigam assault case: Singer visits Zen Hospital to attend to his  injured colleague [WATCH]

ನಡೆದ ಘಟನೆಯೇನು?:

ಚೆಂಬೂರು ಉತ್ಸವದಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದು ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಶಾಸಕರ ಭೇಟಿಗೆ ಅವಕಾಶ ನೀಡದ್ದಕ್ಕೆ ಅವರ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಸೋನು ನಿಗಮ್ ಭದ್ರತಾ ಸಿಬ್ಬಂದಿ, ಶಾಸಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಸೋನು ನಿಗಮ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ. 

ಘಟನೆ ಬಗ್ಗೆ ಶಾಸಕ ಪ್ರಕಾಶ್​ ಫರ್ತೆಪೇಕರ್ ಪ್ರತಿಕ್ರಿಯಿಸಿದ್ದು, ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಕೆಲವರು ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು. ಆ ಸಮಯದಲ್ಲಿ ಅವರ ಅಂಗರಕ್ಷಕರು ಅಭಿಮಾನಿಗಳನ್ನು ದೂರ ತಳ್ಳಲು ಪ್ರಯತ್ನಿಸುತ್ತಿದ್ದರು. ಆ ಸಂದರ್ಭ ಸೋನು ನಿಗಮ್ ತಂಡದ ಒಬ್ಬ ವ್ಯಕ್ತಿಯನ್ನು ತಪ್ಪಾಗಿ ತಳ್ಳಲಾಯಿತು. ಸೋನು ನಿಗಮ್‌ಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.

ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದ ಮೇಲೆ ಮುಂಬೈನ ಚೆಂಬೂರಿನಲ್ಲಿ ದಾಳಿ: ಕೇಸು ದಾಖಲು-  Kannada Prabha

ಫೋಟೋಗೆ ಅನುಮತಿ ನಿರಾಕರಣೆ: ಗಾಯಕ ಸೋನು ನಿಗಮ್ ಮೇಲೆ ಹಲ್ಲೆ | Prasthutha

ಪ್ರಕಾಶ್​ ಫರ್ತೆಪೇಕರ್ ಮಗನ ಮೇಲೆ ಆರೋಪ:

ಪ್ರಕಾಶ್​ ಫರ್ತೆಪೇಕರ್ ಮಗ ವೇದಿಕೆಯಿಂದ ಹೊರಹೋಗುವಂತೆ ಸೋನು ನಿಗಮ್ ಮ್ಯಾನೇಜರ್​ಗೆ ಸೂಚಿಸಿದ್ದಲ್ಲದೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸೋನು ನಿಗಮ್ ತಂಡದವರು ದೂರಿದ್ದಾರೆ. ಸೋನು ನಿಗಮ್ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಶಾಸಕರ ಪುತ್ರ ಮೊದಲು ಸೋನು ಅಂಗರಕ್ಷಕ ಹರಿ ಅವರನ್ನು ತಳ್ಳಿ ನಂತರ ಸೋನು ಅವರನ್ನು ತಳ್ಳಿದ್ದಾರೆ. ಈ ಸಮಾರಂಭದಲ್ಲಿ ಸೋನು ನಿಗಮ್ ಅವರ ಗುರು ದಿವಂಗತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರ ಪುತ್ರ ರಬ್ಬಾನಿ ಖಾನ್ ಕೂಡ ಉಪಸ್ಥಿತರಿದ್ದರು. ಇವರು ಘರ್ಷಣೆ ವೇಳೆ ವೇದಿಕೆಯಿಂದ ಕೆಳಗೆ ಬಿದ್ದರು. ಅವರಿಗೆ ಗಾಯಗಳಾಗಿದ್ದು, ಚೆಂಬೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Soni nigam has resurfaced on social media to share videos from the controversial concert where he was assaulted for a selfie. The popular singer shared a series of videos which featured him energetically belting out big hits on the stage. “Happier times from last night..” Sonu Nigam had captioned the videos.