ಮೀಯಪದವಿನಲ್ಲಿ ಲಾರಿ ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ದರೋಡೆ ; ನಾಲ್ವರನ್ನು ಬಂಧಿಸಿದ ಪೊಲೀಸರು

23-02-23 10:16 pm       HK News Desk   ಕ್ರೈಂ

ಇಲ್ಲಿನ ಮೀಯಪದವಿನಲ್ಲಿ ಬುಧವಾರ ರಾತ್ರಿ ಎರಡು ಲಾರಿಗಳನ್ನು ಅಡ್ಡಗಟ್ಟಿದ ತಂಡವೊಂದು ಪಿಸ್ತೂಲ್ ತೋರಿಸಿ ದರೋಡೆಗೈದ ಘಟನೆ ನಡೆದಿದ್ದು, ಮಂಜೇಶ್ವರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಜೇಶ್ವರ, ಫೆ.23: ಇಲ್ಲಿನ ಮೀಯಪದವಿನಲ್ಲಿ ಬುಧವಾರ ರಾತ್ರಿ ಎರಡು ಲಾರಿಗಳನ್ನು ಅಡ್ಡಗಟ್ಟಿದ ತಂಡವೊಂದು ಪಿಸ್ತೂಲ್ ತೋರಿಸಿ ದರೋಡೆಗೈದ ಘಟನೆ ನಡೆದಿದ್ದು, ಮಂಜೇಶ್ವರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಒಂದು ಪಿಸ್ತೂಲ್, ನಾಲ್ಕು ಜೀವಂತ ಗುಂಡು ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಬುಧವಾರ ಸಂಜೆ ಆರೋಪಿಗಳ ತಂಡ ಎರಡು ಲಾರಿಯನ್ನು ತಡೆದು ನಿಲ್ಲಿಸಿ, ಚಾಲಕರನ್ನು ಬಲವಂತದಿಂದ ಕೆಳಕ್ಕಿಳಿಸಿ ಬಳಿಕ ಲಾರಿಯನ್ನು ಡ್ರೈವ್ ಮಾಡಿಕೊಂಡು ಹೋಗಿದ್ದರು. ಲಾರಿಯ ಚಾಲಕರಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡು ದರೋಡೆಗೈದು ತಂಡ ಪರಾರಿಯಾಗಿತ್ತು.

ಮಂಜೇಶ್ವರ ಪೊಲೀಸರು ವಿಷಯ ತಿಳಿದು ಆರೋಪಿಗಳಿದ್ದ ಲಾರಿಯನ್ನು ಬೆನ್ನಟ್ಟಿದ್ದರು. ಆರೋಪಿಗಳು ಲಾರಿಯನ್ನು ಪೈವಳಿಕೆ- ಕೊಮ್ಮಂಗಲ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಆನಂತರ, ಕಾರು ಮತ್ತು ಇನ್ನಿಬ್ಬರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ನಾಸಿಕ್ ಮೂಲದ ರಾಕೇಶ್ ಕಿಶೋರ್ (25), ಸೋಂಕಾಲ್ ನಿವಾಸಿ ಹೈದರ್ ಆಲಿ(26), ಪೈವಳಿಕೆ ಕಲಾಯಿ ನಿವಾಸಿ ಸಯಾಫ್(22) ಮತ್ತು ಮೀಯಪದವು ನಿವಾಸಿ ಮೊಹಮ್ಮದ್ ಸಫ್ವಾನ್(24) ಎಂದು ಗುರುತಿಸಲಾಗಿದೆ.

ಮೀಯಪದವು ನಿವಾಸಿ, ನಟೋರಿಯಸ್ ರೌಡಿಶೀಟರ್ ಅಬ್ದುಲ್ ರಹಿಮಾನ್ ನೇತೃತ್ವದಲ್ಲಿ ದರೋಡೆಗೆ ಸಂಚು ರೂಪಿಸಲಾಗಿತ್ತು. ರಹಿಮಾನ್ 25ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಪ್ರಕರಣದಲ್ಲಿ ಅಬ್ದುಲ್ ರಹಿಮಾನ್ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದಾನೆ.

A gang brandished a revolver and drove away two lorries at Miyapadavu on Wednesday, February 22 in the evening. Police have arrested four accused in this connection. A pistol, four live bullets and a car were confiscated by the police from the arrested persons. The gang was demanding hafta at Miyapadavu at about 6 pm on Wednesday. They brandished a pistol, threatened and forced the drivers to get down from the lorry, robbed them of mobile and cash and drove away the lorries.