ಹೆಣ್ಣಿನ ಸ್ವರದಲ್ಲಿ ಕರೆ ಮಾಡಿ ಹಣಕ್ಕಾಗಿ ಬ್ಲಾಕ್ಮೇಲ್ ; ಮೂಡುಬಿದ್ರೆ ನಿವಾಸಿಯ ಬಂಧಿಸಿದ ಪೊಲೀಸರು 

25-02-23 01:21 pm       Mangalore Correspondent   ಕ್ರೈಂ

ಮಹಿಳೆಯ ಧ್ವನಿಯನ್ನು ಅನುಕರಿಸಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮೂಲಕ ಹಣ ಪೀಕಿಸಿದ ಘಟನೆ ನಡೆದಿದ್ದು ಆರೋಪಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೂಡುಬಿದಿರೆ ಸಮೀಪದ ಬಿರಾವು ನಿವಾಸಿ ಧನಂಜಯ ಎಂದು ಗುರುತಿಸಲಾಗಿದೆ. 

ಮಂಗಳೂರು, ಫೆ.25 : ಮಹಿಳೆಯ ಧ್ವನಿಯನ್ನು ಅನುಕರಿಸಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮೂಲಕ ಹಣ ಪೀಕಿಸಿದ ಘಟನೆ ನಡೆದಿದ್ದು ಆರೋಪಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೂಡುಬಿದಿರೆ ಸಮೀಪದ ಬಿರಾವು ನಿವಾಸಿ ಧನಂಜಯ ಎಂದು ಗುರುತಿಸಲಾಗಿದೆ. 

ಬೈಕಂಪಾಡಿ ಕೈಗಾರಿಕಾ ಸಂಕೀರ್ಣದಲ್ಲಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಹೊಸಬೆಟ್ಟು ನಿವಾಸಿ ನವೀನ್‌ಚಂದ್ರ ಎಂಬವರಿಗೆ “ಉಷಾ’ ಎನ್ನುವ ಹೆಸರಿನಲ್ಲಿ ಪರಿಚಯ ಹೇಳಿಕೊಂಡು ಹೆಣ್ಣಿನ ಸ್ವರದಲ್ಲಿ ಕರೆ ಮಾಡಿದ್ದ. ಅಲ್ಲದೆ, ಬೇರೆ ಯಾರದ್ದೋ ಹುಡುಗಿಯ ಖಾಸಗಿ ಅಂಗದ ಫೋಟೊ ಕಳಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದ. 

25 ಸಾವಿರ ಹಣ ಕೊಡಬೇಕು, ಇಲ್ಲವಾದಲ್ಲಿ ಕರೆ ಮಾಡಿದ ಫೋನ್ ರೆಕಾರ್ಡ್ ಮತ್ತು ಫೋಟೋಗಳನ್ನು ಲೀಕ್ ಮಾಡುವುದಾಗಿ ಹೇಳಿ ಬೆದರಿಸಿದ್ದ. ಇದರಿಂದ ಕಂಗಾಲಾದ ನವೀನ್‌ಚಂದ್ರ ಅವರು ಒಮ್ಮೆ 2 ಸಾವಿರ ರೂ. ಗೂಗಲ್‌ ಪೇ ಮಾಡಿದ್ದರು. ಬಳಿಕವೂ ಪದೇ ಪದೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರಿಂದ ರೋಸಿ ಹೋಗಿ ಪೊಲೀಸರಿಗೆ ದೂರು ನೀಡಿದ್ದರು.  

ಸುರತ್ಕಲ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಉಷಾ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯ ಬೆನ್ನತ್ತಿದಾಗ ಅಸಲಿ ವಿಚಾರ ಬಯಲಾಗಿದೆ. ಆರೋಪಿ ಧನಂಜಯ ಎಂಬ ವ್ಯಕ್ತಿಯೇ ಹೆಣ್ಣಿನ ಸ್ವರದಲ್ಲಿ ಫೋನ್ ಕಿರುಕುಳ ನೀಡಿದ್ದು ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Mangalore Man arrested for creating fake profile, blackmailing with womans voice in Surathkal.