ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟ ಜಾಲ ಪತ್ತೆ ;  8 ಮಂದಿ ತ್ರಿಶೂರ್, ಕಣ್ಣೂರು ಮೂಲದ ಯುವಕರ ಬಂಧನ 

26-02-23 03:48 pm       Bangalore Correspondent   ಕ್ರೈಂ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಡ್ರಗ್ ಪೆಡ್ಲರ್‌ಗಳ ಜಾಲವನ್ನು ಬೇಧಿಸಿ ಭರ್ಜರಿ ಬೇಟೆಯಾಡಿರುವ ಅಮೃತಹಳ್ಳಿ ಪೊಲೀಸರು 8 ಮಂದಿಯನ್ನು ಬಂಧಿಸಿ 50 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು, ಫೆ.26: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಡ್ರಗ್ ಪೆಡ್ಲರ್‌ಗಳ ಜಾಲವನ್ನು ಬೇಧಿಸಿ ಭರ್ಜರಿ ಬೇಟೆಯಾಡಿರುವ ಅಮೃತಹಳ್ಳಿ ಪೊಲೀಸರು 8 ಮಂದಿಯನ್ನು ಬಂಧಿಸಿ 50 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯ ಮಪೀನ್ ಅಲಿಯಾಸ್ ಮಬಿನ್(೩೨) ಮನ್ಸೂರ್ (36) ಎಲೆಕ್ಟ್ರಾನಿಕ್ ಸಿಟಿಯ ಗಾರ್ಡನ್ ಲೇಔಟ್ ನ ಅಭಿಷೇಕ್(27) ಅಕ್ಷಯ್ ಶಿವನ್ ಅಲಿಯಾಸ್ ಅಕ್ಕಿ(28) ಅರ್ಜುನ್ ಅಲಿಯಾಸ್ ಮೋನಿಕಿಮ್ (26) ಅಖಿಲ್(26)ಜೋಯಲ್ ಜೋಶ್ ಅಲಿಯಾಸ್ ಜೋಯಸ್(21) ಹಾಗೂ ಪೃಥ್ವಿನ್.ಪಿ ಅಲಿಯಾಸ್ ಪೃಥ್ವಿ(23) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರೆಲ್ಲರೂ ಕೇರಳದ ತ್ರಿಶೂರ್, ಕಣ್ಣೂರು ಮೂಲದವರಾಗಿದ್ದು ಹಲವು ವರ್ಷಗಳಿಂದ ಮಾದಕವಸ್ತು ಸರಬರಾಜು ಮಾರಾಟ ಜಾಲವನ್ನು ನಡೆಸುತ್ತಿದ್ದರು ಎಂದು ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಮಾದಕವಸ್ತುಗಳನ್ನು ಪಡೆದು ಸೇವನೆ ಮಾಡುತ್ತಿದ್ದ 20 ಮಂದಿ ಗ್ರಾಹಕರುಗಳನ್ನು ವಶಕ್ಕೆ ಪಡೆದು 27(ಬಿ) ಎನ್‌ಡಿಪಿಎಸ್ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಂಧಿತರಿಂದ 740 ಗ್ರಾಂ ಮೆಥಕ್ಯೂಲನ್, 200 ಗ್ರಾಂ ಗಾಂಜಾ, 165 ಗ್ರಾಂ ಚರಸ್ ಹಾಗು 20 ಗ್ರಾಂ ಎಂಡಿಎಂಎ ಮಾದಕವಸ್ತುಗಳನ್ನು ಹಾಗು ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನ, 1 ಕಾರು, 7 ಮೊಬೈಲ್ ಪೋನ್‌ಗಳು, ವೇಯಿಂಗ್ ಮಿಷನ್ ಹಾಗು ಖಾಲಿ ಜಿಪ್‌ಲಾಕ್ ಪ್ಲಾಸ್ಟಿಕ್ ಕವರ್ ಸೇರಿ 50 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

Eight youths of Kerala arrested for drug peddling by Bangalore Police, 50 lakhs worth item seized.