ಬ್ರೇಕಿಂಗ್ ನ್ಯೂಸ್
28-02-23 10:16 pm HK News Desk ಕ್ರೈಂ
ಹೈದರಾಬಾದ್, ಫೆ.28: ತಾನು ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾನೆ ಎಂಬ ಕಾರಣಕ್ಕೆ ತನ್ನ ಸಹಪಾಠಿ ಗೆಳೆಯನನ್ನೇ ವಿದ್ಯಾರ್ಥಿಯೊಬ್ಬ ಕುತ್ತಿಗೆ ಸೀಳಿ ಕೊಂದು ಹಾಕಿದ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನವೀನ್ ಎಂಬ ವಿದ್ಯಾರ್ಥಿಯನ್ನು ಅದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ಹರಿಹರ ಕೃಷ್ಣ ಎಂಬ 22 ವಿದ್ಯಾರ್ಥಿ ಕ್ರೂರವಾಗಿ ಕೊಂದು ಹಾಕಿದ್ದು, ಆನಂತರ ಗೆಳೆಯನ ಹೃದಯ ಮತ್ತು ಗುಪ್ತಾಂಗ, ಬೆರಳುಗಳನ್ನು ಕತ್ತರಿಸಿ ವಿಕೃತವಾಗಿ ವರ್ತಿಸಿದ್ದಾನೆ. ಕೃತ್ಯದ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ನವೀನ್, ಹರಿಹರ ಕೃಷ್ಣ ಮತ್ತು ಹುಡುಗಿ ಒಂದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದರು. ಒಂದೇ ಹುಡುಗಿಯನ್ನು ನವೀನ್ ಮತ್ತು ಹರಿಹರ ಕೃಷ್ಣ ಪ್ರೀತಿಸುತ್ತಿದ್ದರು. ಮೊದಲಿಗೆ ನವೀನ್ ಹುಡುಗಿಯೊಂದಿಗೆ ಕನೆಕ್ಟ್ ಆಗಿದ್ದು ಸುತ್ತಾಟ ನಡೆಸುತ್ತಿದ್ದ. ಆನಂತರ, ಕೃಷ್ಣ ಕೂಡ ಅದೇ ಹುಡುಗಿಯ ಹಿಂದೆ ಬಿದ್ದಿದ್ದು ಸುತ್ತಾಟ ಶುರು ಹಚ್ಚಿದ್ದ. ಹುಡುಗಿ ಇಬ್ಬರನ್ನೂ ಮ್ಯಾನೇಜ್ ಮಾಡುತ್ತಿದ್ದಳು. ಇದೇ ವೇಳೆ, ಹಳೆ ಪ್ರಿಯಕರ ನವೀನ್ ಅದೇ ಹುಡುಗಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಲ್ಲದೆ, ಮೆಸೇಜ್ ಮಾಡುವುದು, ಫೋನಲ್ಲಿ ಮಾತಾಡುವುದನ್ನು ಮಾಡ್ತಿದ್ದ. ಇದರಿಂದ ಸಿಟ್ಟಿನಲ್ಲಿದ್ದ ಹರಿಹರ ಕೃಷ್ಣ, ನವೀನನ್ನು ನಿಗೂಢ ಜಾಗಕ್ಕೆ ಕರೆದೊಯ್ದು ಜಗಳವಾಡಿ ಕತ್ತು ಸೀಳಿ ಹಾಕಿದ್ದಾನೆ.
ಫೆ.17ರಂದು ಘಟನೆ ನಡೆದಿದ್ದು, ಕೃತ್ಯದ ಬಳಿಕ ಸತ್ತು ಬಿದ್ದಿರುವ ನವೀನ್ ಮೃತದೇಹದ ಚಿತ್ರವನ್ನು ಹುಡುಗಿಗೆ ವಾಟ್ಸಪ್ ಮಾಡಿದ್ದಾನೆ. ಅಲ್ಲದೆ, ಕೃತ್ಯ ಎಸಗಿರುವ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ತಿಳಿಸಿದ್ದು, ಶರಣಾಗಿದ್ದಾನೆ.
A 22-year-old man in Hyderabad allegedly killed his friend for messaging and talking to his girlfriend, police said on Saturday. The accused allegedly beheaded the deceased, removed his friend's heart and chopped off his private parts and fingers. He later walked into the police station to surrender himself on Friday, ANI reported.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 04:43 pm
Mangalore Correspondent
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm