ಬ್ರೇಕಿಂಗ್ ನ್ಯೂಸ್
04-03-23 05:04 pm Mangaluru Correspondent ಕ್ರೈಂ
ಮಂಗಳೂರು, ಮಾ.4: ಕೊಣಾಜೆ ಠಾಣೆ ವ್ಯಾಪ್ತಿಯ ಪಾವೂರಿನ ಮಲಾರ್ ಗ್ರಾಮದ ಪಲ್ಲಿಯಬ್ಬ ಕೊಲೆ ಪ್ರಕರಣದಲ್ಲಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಎಲ್ಲ ಐದು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಲಾರ್ ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಹಂಝ(47), ಅಜರುದ್ದೀನ್ ಅಲಿಯಾಸ್ ಅಜರ್ (29), ಸಜಿಪ ನಡು ನಿವಾಸಿಗಳಾದ ಅಮೀರ್ ಅಲಿಯಾಸ್ ಅಮ್ಮಿ(29), ಮೊಹಮ್ಮದ್ ಅಫ್ರಾಜ್(23), ಅತ್ತಾವುಲ್ಲಾ ಅಲಿಯಾಸ್ ಅಲ್ತಾಫ್(23) ಜೀವಾವಧಿ ಶಿಕ್ಷೆಗೊಳಗಾದವರು.
2020ರ ಅಕ್ಟೋಬರ್ 20ರಂದು ಮಲಾರ್ ಗ್ರಾಮದ ಪಲ್ಲಿಯಬ್ಬ ನಾಪತ್ತೆ ಬಗ್ಗೆ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ, ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದರು. ಪಲ್ಲಿಯಬ್ಬ ಅದೇ ಗ್ರಾಮದ ಮೊಹಮ್ಮದ್ ಹಂಝನಿಗೆ 72 ಸಾವಿರ ರೂ. ನೀಡಿದ್ದರು. ಹಣ ಮರಳಿಸುವಂತೆ ಒತ್ತಡ ಹೇರುತ್ತಿದ್ದರು. ಹಣದ ವಿಚಾರದಲ್ಲಿ ವಾಗ್ವಾದವೂ ನಡೆದಿತ್ತು. ಆನಂತರ, ಹಂಝ ಮತ್ತು ಅಜರ್ ಹಣವನ್ನು ಕೊಣಾಜೆಯಲ್ಲಿ ಕೊಡಿಸುತ್ತೇನೆಂದು ಆಟೋದಲ್ಲಿ ಕರೆದೊಯ್ದಿದ್ದು, ಇರಾ ಪದವಿನ ನಿರ್ಜನ ಪ್ರದೇಶದಲ್ಲಿ ಇನ್ನಿತರ ಯುವಕರ ಜೊತೆಗೆ ಸೇರಿ ಪಲ್ಲಿಯಬ್ಬ ಅವರನ್ನು ಕೊಲೆಗೈದು ಸುಟ್ಟು ಹಾಕಿದ್ದರು.
ಪಲ್ಲಿಯಬ್ಬ ಅವರ ಸೋದರ ನಾಪತ್ತೆ ಕೇಸು ನೀಡಿದ್ದು ಮತ್ತು ಹಣದ ವಿಚಾರದಲ್ಲಿ ಜಗಳ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರಿಂದ ತನಿಖೆ ನಡೆಸಿದ ಪೊಲೀಸರು ಕೊಲೆ ಕೃತ್ಯ ಪತ್ತೆ ಮಾಡಿದ್ದರು. ಕೊಣಾಜೆ ಇನ್ಸ್ ಪೆಕ್ಟರ್ ಮಧುಸೂದನ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಿಬಿ ಜಕಾತಿ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ್ದಲ್ಲದೆ, 3 ಲಕ್ಷ ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಪಲ್ಲಿಯಬ್ಬ ಅವರ ಪುತ್ರಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಸಂತ್ರಸ್ತರ ಪರವಾಗಿ ಸರಕಾರಿ ವಕೀಲ ನಾರಾಯಣ ಶೇರಿಗಾರ್ ವಾದಿಸಿದ್ದರು.
The city court has sentenced the persons involved in the Palliabba murder case to life imprisonment. The accused who were convicted are Mohammed Hamza (47), Azharuddin alias Azhar (29), residents of Malar, Ameer alias Ammi (29), Mohammed Afraz (23) and Ataullah alias Altaf (23), residents of Sajipa Nadu village. Palliabba was running a finance business, and his brother registered a missing complaint with the police on October 29, 2020. The investigation revealed that Palliabba had gone in an autorickshaw with Hamza, Afraz, Ameer, and Altaf.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm