ಬ್ರೇಕಿಂಗ್ ನ್ಯೂಸ್
06-03-23 08:46 pm HK News Desk ಕ್ರೈಂ
ಮುಂಬೈ, ಮಾ.6 : ಪ್ರೀತಿ ನೆಪದಲ್ಲಿ ಗರ್ಭಿಣಿಯಾಗಿದ್ದ 15ರ ಹರೆಯದ ಬಾಲಕಿಯೊಬ್ಬಳು ಮನೆಯವರಿಗೆ ತಿಳಿಯದಂತೆ ಮುಚ್ಚಿಟ್ಟಿದ್ದಲ್ಲದೆ, ಕೊನೆಗೆ ಯೂಟ್ಯೂಬ್ ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಂಡು, ನವಜಾತ ಶಿಶುವನ್ನು ಕತ್ತು ಹಿಸುಕಿ ಕೊಂದ ಭಯಾನಕ ಘಟನೆ ಮಹಾರಾಷ್ಟದಲ್ಲಿ ನಡೆದಿದೆ.
ನಾಗ್ಪುರದ ಅಂಬಾಜಾರಿ ಪ್ರದೇಶದ ಅಪ್ರಾಪ್ತ ಬಾಲಕಿ ಕೃತ್ಯ ಎಸಗಿರುವಾಕೆ. ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ್ದ ಬಾಲಕಿ ಬಳಿಕ ಹುಡುಗನ ಜೊತೆಗೆ ದೈಹಿಕ ಸಂಬಂಧ ಇರಿಸಿಕೊಂಡಿದ್ದಳು. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಲ್ಲದೆ 9 ತಿಂಗಳ ಕಾಲವೂ ಮನೆಯವರಿಗೆ ತಿಳಿಸದೆ ಮುಚ್ಚಿಟ್ಟಿದ್ದಳು.
ಆರೋಗ್ಯ ಸಮಸ್ಯೆ ಎಂದು ಮನೆಯವರಿಗೆ ಸುಳ್ಳು
ಬಾಲಕಿಯ ಹೊಟ್ಟೆ ನೋಡಿ ತಾಯಿ ಕೇಳಿದಾಗಲೆಲ್ಲಾ ಹುಡುಗಿ ತನಗೆ ಆರೋಗ್ಯ ಸಮಸ್ಯೆ ಇದೆ ಎಂದು ಸುಳ್ಳು ಹೇಳುತ್ತ ಬಂದಿದ್ದಳು. ಮನೆಯವರಿಂದ ವಿಷಯವನ್ನು ಮುಚ್ಚಿಟ್ಟಿದ್ದ ಬಾಲಕಿ, ವಿಷಯ ಯಾರಿಗೂ ತಿಳಿಯದಂತೆ ತಾನೇ ಹೆರಿಗೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದಾಳೆ. ಅದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿದ್ದು ಯೂಟ್ಯೂಬ್. ಪ್ರತಿದಿನ ಹೆರಿಗೆ ಮಾಡಿಸುವ ವಿಡಿಯೋಗಳನ್ನು ನೋಡಲು ಶುರು ಮಾಡಿದ್ದಳು. ಸ್ವತಃ ಹೆರಿಗೆ ಮಾಡಿಕೊಳ್ಳುವ ಬಗ್ಗೆ ವಿಡಿಯೋಗಳ ಮೂಲಕ ತಿಳಿದುಕೊಂಡ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆರಿಗೆ ಮಾಡಿಕೊಂಡಿದ್ದಾಳೆ.
ಕತ್ತು ಹಿಸುಕಿ ನವಜಾತ ಶಿಶು ಹತ್ಯೆ
ಯೂಟ್ಯೂಬ್ ನೋಡಿಕೊಂಡೇ ಮಾರ್ಚ್ 2ರಂದು ಹೆರಿಗೆ ಮಾಡಿದ್ದ ಬಾಲಕಿ, ಗರ್ಭದಿಂದ ಹೊರಬಂದ ಮಗು ಚೇತರಿಸಿಕೊಳ್ಳುವ ಮುನ್ನವೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಮನೆಯಲ್ಲಿದ್ದ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದಾಳೆ. ತಾಯಿ ಹೊರ ಹೋಗಿದ್ದಾಗ ಘಟನೆ ನಡೆದಿದ್ದು ಬಳಿಕ ಬಂದ ತಾಯಿ ತೀವ್ರ ಆಘಾತಗೊಂಡು ಮಲಗಿದ್ದ ಬಾಲಕಿಯನ್ನು ವಿಚಾರಿಸಿದ್ದಾರೆ. ತೀವ್ರ ವಿಚಾರಣೆ ನಡೆಸಿದಾಗ ಬಾಲಕಿ ಸಂಪೂರ್ಣ ತಿಳಿಸಿದ್ದಾಳೆ. ನಂತರ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವಿಷಯ ತಿಳಿದ ಪೊಲೀಸರು ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ, ಅಪ್ರಾಪ್ತ ಬಾಲಕಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
A 15-year-old pregnant victim of sexual exploitation watched YouTube videos to train herself and delivered her own baby, and thereafter killed it. Police said after delivery, the girl, who was home alone, strangled the baby with a belt so that the cries would not alert the neighbours.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm