ಬ್ರೇಕಿಂಗ್ ನ್ಯೂಸ್
07-03-23 10:00 pm Mangaluru Correspondent ಕ್ರೈಂ
ಮಂಗಳೂರು, ಮಾ.7: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಕ್ಷಿಣ ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆ ಮಾಡಿದ್ದಾರೆ. ಗಲ್ಫ್ ರಾಷ್ಟ್ರಗಳಿಂದ ಕರ್ನಾಟಕ, ಕೇರಳಕ್ಕೆ ಪೂರೈಕೆಯಾಗುತ್ತಿದ್ದ ಹಣವನ್ನು ಸದ್ದಿಲ್ಲದೆ ವಿಧ್ವಂಸಕ ಕೃತ್ಯಗಳ ಉದ್ದೇಶಕ್ಕಾಗಿ ಇಸ್ಲಾಮಿಕ್ ಭಯೋತ್ಪಾದಕರಿಗೆ ಪೂರೈಸುತ್ತಿದ್ದ ಭಯಾನಕ ಜಾಲವನ್ನು ಎನ್ಐಎ ಅಧಿಕಾರಿಗಳು ಪತ್ತೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಮತ್ತು ಕಾಸರಗೋಡಿನ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕಳೆದ 2022ರ ಜುಲೈ ತಿಂಗಳಲ್ಲಿ ಪತ್ತೆಯಾಗಿದ್ದ ಫುಲ್ವಾರಿ ಶರೀಫ್ ಎಂಬಲ್ಲಿನ ಘಾತುಕ ಸಂಚುಕೋರ ಕೃತ್ಯದ ಹಿಂದೆ ಬಿದ್ದ ಅಧಿಕಾರಿಗಳು ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಪಾಣೆಮಂಗಳೂರಿನ ಇಕ್ಬಾಲ್, ಪುತ್ತೂರಿನ ಇರ್ದೆ ನಿವಾಸಿ ಅಬ್ದುಲ್ ರಫೀಕ್ ಮತ್ತು ಕಾಸರಗೋಡು ಜಿಲ್ಲೆಯ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬವರನ್ನು ಬಂದಿಸಿದ್ದಾರೆ.
ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಆರೋಪಿಗಳು ಹೊರ ದೇಶಗಳಿಂದ ಪೂರೈಕೆ ಆಗುತ್ತಿದ್ದ ಅಕ್ರಮ ಫಂಡನ್ನು ಸದ್ದಿಲ್ಲದೆ ವಿವಿಧ ಮೂಲಗಳ ಮೂಲಕ ಪಿಎಪ್ಐ ನಾಯಕರಿಗೆ ಮತ್ತು ದೇಶದ್ರೋಹಿ ಕೃತ್ಯಗಳಿಗೆ ಸರಬರಾಜು ಮಾಡುತ್ತಿದ್ದರು. ಮೊನ್ನೆ ಮಾ.4ರ ಶನಿವಾರ ಮತ್ತು ಭಾನುವಾರ ಎನ್ಐಎ ಅಧಿಕಾರಿಗಳು ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಮಂಜೇಶ್ವರದಲ್ಲಿ ಕಾರ್ಯಾಚರಣೆ ನಡೆಸಿದ್ದು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಎರಡು ಜಿಲ್ಲೆಗಳ ಎಂಟು ಕಡೆಗಳಲ್ಲಿ ದಾಳಿ ಕಾರ್ಯ ನಡೆದಿದ್ದು, ಈ ವೇಳೆ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು.
ಪಾಟ್ನಾದ ಫುಲ್ವಾರಿ ಶರೀಫ್ ಮತ್ತು ಮೋತಿಹಾರಿ ಪ್ರದೇಶದಲ್ಲಿ ಸೆರೆಸಿಕ್ಕಿದ್ದ ಪಿಎಫ್ಐ ಕಾರ್ಯಕರ್ತರನ್ನು ವಿಚಾರಣೆ ನಡೆಸಿದಾಗ ಭಯಾನಕ ವಿಚಾರಗಳು ಹೊರಬಂದಿದ್ದವು. ಭಯೋತ್ಪಾದಕ ಕೃತ್ಯ ಎಸಗಲು ತರಬೇತಿ ನೀಡುತ್ತಿದ್ದ ವಿಚಾರವೂ ಹೊರಬಂದಿತ್ತು. ಇದಕ್ಕೆ ಸಂಬಂಧಿಸಿ ಫುಲ್ವಾರಿ ಶರೀಫ್ ನಲ್ಲಿ ಏಳು ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳಿಗೆ ಹಣಕಾಸು ಪೂರೈಕೆ ಸಂಬಂಧಿಸಿ ಕೇರಳ, ತಮಿಳುನಾಡಿನಲ್ಲಿ ಈ ಹಿಂದೆ ಎನ್ಐಎ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ, ಬೇನಾಮಿ ಬ್ಯಾಂಕ್ ಖಾತೆಗಳಿಗೆ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನಿಂದ ಹಣ ಪೂರೈಕೆ ಆಗುತ್ತಿರುವುದನ್ನು ಬೆನ್ನತ್ತಿದ ಅಧಿಕಾರಿಗಳಿಗೆ ಪಾಣೆಮಂಗಳೂರಿನ ನಂದಾವರದ ನಾಲ್ವರು ಯುವಕರ ಕೃತ್ಯದ ಬಗ್ಗೆ ಶಂಕೆ ಮೂಡಿತ್ತು.
ಇದರ ಬಗ್ಗೆ ನಿಗೂಢವಾಗಿ ತನಿಖೆ ನಡೆಸುತ್ತಿದ್ದ ಎನ್ಐಎ ಅಧಿಕಾರಿಗಳಿಗೆ ಇಕ್ಬಾಲ್ ಎಂಬಾತ ದುಬೈನಲ್ಲಿದ್ದು ಹಣ ಸಂಗ್ರಹ ಮಾಡುತ್ತಿರುವುದು ಮತ್ತು ಅದನ್ನು ತನ್ನ ಇತರ ನಾಲ್ವರು ಸಹಚರರಿಗೆ ಪೂರೈಕೆ ಮಾಡುತ್ತಿದ್ದುದು ತಿಳಿದುಬಂದಿತ್ತು. ಮೊನ್ನೆ ಇಕ್ಬಾಲ್ ಎಂದಿನಂತೆ ದುಬೈನಿಂದ ಊರಿಗೆ ಮರಳಿರುವುದು ತಿಳಿಯುತ್ತಲೇ ಎನ್ಐಎ ಅಧಿಕಾರಿಗಳು ಬೆನ್ನು ಬಿದ್ದಿದ್ದು ಶನಿವಾರ ರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಬಳಿಕ ನಾಲ್ವರನ್ನು ಬಂಟ್ವಾಳದ ಐಬಿಯಲ್ಲಿರಿಸಿ ವಿಚಾರಣೆ ನಡೆಸಿದ್ದು, ಆನಂತರ ಖಚಿತ ಸಾಕ್ಷ್ಯಗಳೊಂದಿಗೆ ದೆಹಲಿಗೆ ಒಯ್ದಿದ್ದಾರೆ. ಇದೇ ವೇಳೆ, ಇನ್ನೊಂದು ತನಿಖಾ ತಂಡ ಕಾಸರಗೋಡಿನ ಮಂಜೇಶ್ವರದಲ್ಲಿ ದಾಳಿ ನಡೆಸಿದ್ದು, ಕುಂಜತ್ತೂರಿನ ಅಬೀದ್ ಕೆಎಂ ಎಂಬಾತನನ್ನು ಬಂಧಿಸಿದೆ. ಇವರನ್ನು ಸದ್ಯದಲ್ಲೇ ಪಾಟ್ನಾ ಎನ್ಐಎ ವಿಶೇಷ ನ್ಯಾಯಾಲಯದದಲ್ಲಿ ಹಾಜರುಪಡಿಸುವುದಾಗಿ ದೆಹಲಿ ವಿಭಾಗದ ಎನ್ಐಎ ಪತ್ರಿಕಾ ಹೇಳಿಕೆ ನೀಡಿದೆ.
ಇಕ್ಬಾಲ್ ಮತ್ತು ಇತರ ಸಹಚರರು ದುಬೈನಲ್ಲಿ ಅಕ್ರಮವಾಗಿ ಸಂಗ್ರಹ ಮಾಡುತ್ತಿದ್ದ ನಿಧಿಯನ್ನು ಮಹಮ್ಮದ್ ಸಿನಾನ್, ಸರ್ಫ್ರಾಜ್ ನವಾಜ್, ಅಬ್ದುಲ್ ರಫೀಕ್ ಮತ್ತು ಅಬೀದ್ ಮೂಲಕ ಭಾರತಕ್ಕೆ ಕಳಿಸಿಕೊಡುತ್ತಿದ್ದರು. ಅವರು ಈ ಹಣವನ್ನು ಭಾರತದಲ್ಲಿ ವಿವಿಧ ಬ್ಯಾಂಕುಗಳ ಮೂಲಕ ಪಿಎಫ್ಐ ನಾಯಕರು ಮತ್ತು ಬಿಹಾರದಲ್ಲಿ ಸೆರೆಸಿಕ್ಕಿರುವ ಆರೋಪಿಗಳ ಖಾತೆಗಳಿಗೆ ರವಾನೆ ಮಾಡುತ್ತಿರುವುದನ್ನು ಎನ್ಐಎ ಪತ್ತೆ ಮಾಡಿತ್ತು. ಹಲವು ಬೇನಾಮಿ ಖಾತೆಗಳಿಗೆ ಹಣದ ರವಾನೆ ಆಗಿರುವುದು ಪತ್ತೆಯಾಗಿದ್ದು, ಅದರ ಬಗ್ಗೆ ಖಚಿತ ಸಾಕ್ಷ್ಯಗಳೊಂದಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಕಳೆದ ಜುಲೈ 12ರಂದು ಪಾಟ್ನಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾಗ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದಾಗ ಫುಲ್ವಾರಿ ಶರೀಫ್ ನಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವುದು, ದೇಶ ವಿರೋಧಿ ಚಟುವಟಿಕೆಯಲ್ಲಿ ನಿರತರಾಗಿರುವುದು ಮತ್ತು 2047ರಲ್ಲಿ ದೇಶವನ್ನು ಇಸ್ಲಾಮಿಕ್ ಆಗಿಸುವ ಹುನ್ನಾರ ಹೊಂದಿರುವ ಪುಸ್ತಕ, ಕರಪತ್ರಗಳು ಸಿಕ್ಕಿದ್ದವು. ಇದರ ಬೆನ್ನು ಹಿಡಿದ ಎನ್ಐಎ ಮತ್ತು ಬಿಹಾರದ ಎಟಿಎಸ್ ದೇಶಾದ್ಯಂತ ದಾಳಿ ಕಾರ್ಯ ನಡೆಸುತ್ತಿದ್ದು, ಪಿಎಫ್ಐ ನಾಯಕರಿಗೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಹಣದ ಪೂರೈಕೆ ಮಾಡುತ್ತಿರುವ ಜಾಲವನ್ನು ಪತ್ತೆ ಮಾಡುತ್ತಿದ್ದಾರೆ
Multi State Hawala network funding PFI terror activity busted, among five four from Bantwal in Mangalore arrested by NIA. NIA arrests 5 Hawala operatives in Phulwarisharif PFI case. While tracing and tracking the funds being moved by the PFI across the country, especially the States of Kerala, Karnataka, Bihar etc., NIA investigations into the Phulwarisharif PFI case of Bihar have led to the un-earthing of a large network of hawala operatives in South India and their arrest from Karnataka. Mahammad Sinan, s/o Hamad, r/o Panepmanglore, Dakshin Kannada, Karnataka b) Sarfraz Nawaz, s/o Abdul Rahman r/o Sajipamuda, Dakshin Kannada, Karnataka c) Iqbal, s/o Abdul Khadar r/o Panepmanglore, Dakshin Kannada, Karnataka d) Abdul Rafeek M, s/o Mahammad Byari R/o Puttur Talluk, Dakshin Kannada, Karnataka e) Abid K M, S/o late Abu Hazi K, r/o Kunjuthur, Kasaragod, Kerala
10-01-25 07:03 pm
Bangalore Correspondent
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
S T Somashekar, Yatnal, DK Shivakumar temple:...
09-01-25 04:54 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 06:23 pm
Mangalore Correspondent
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am