ಬ್ರೇಕಿಂಗ್ ನ್ಯೂಸ್
09-03-23 02:38 pm Mangalore Correspondent ಕ್ರೈಂ
ಮಂಗಳೂರು, ಮಾ.9: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಅಮಾಯಕರನ್ನು ಮೋಸ ಮಾಡಿರುವ ಬಗ್ಗೆ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಬೀದರ್ ಮೂಲದ ವ್ಯಕ್ತಿ ಮತ್ತು ವಿಶಾಖಪಟ್ಟಣದ ವ್ಯಕ್ತಿ ತಮಗೆ ಮೋಸ ಆಗಿರುವ ಬಗ್ಗೆ ದೂರು ನೀಡಿದ್ದಾರೆ.
ಒಂದು ಪ್ರಕರಣದಲ್ಲಿ ಬೀದರ್ ಮೂಲದ ಶಶಿಕಾಂತ್ ದೀಕ್ಷಿತ್ ಎಂಬವರು ತನ್ನ ಮಗನಿಗೆ ಮೆಡಿಕಲ್ ಸೀಟು ದೊರಕಿಸುವುದಾಗಿ ಹೇಳಿ ಇಫ್ತಿಕಾರ್ ಅಹ್ಮದ್ ಮತ್ತಿತರರು ಸೇರಿ 22.5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಆ ಕುರಿತ ಎಫ್ಐಆರ್ ನಲ್ಲಿ ಇಫ್ತಿಕಾರ್ ಅಹ್ಮದ್, ನೇಹಾ, ಪಾಯಲ್, ಯಶ್, ರಾಹುಲ್ ಮತ್ತು ಇತರರು ಮೋಸ ಮಾಡಿದ್ದಾಗಿ ಉಲ್ಲೇಖ ಮಾಡಲಾಗಿದೆ. ಕಳೆದ ಡಿಸೆಂಬರ್ 16ರಂದು ಶಶಿಕಾಂತ್ ದೀಕ್ಷಿತ್ ಅವರನ್ನು ಸಂಪರ್ಕಿಸಿದ್ದ ವ್ಯಕ್ತಿಗಳು 50 ಲಕ್ಷದಲ್ಲಿ ಎಂಬಿಬಿಎಸ್ ಸೀಟು ದೊರಕಿಸುವುದಾಗಿ ಹೇಳಿದ್ದರು. ಮೊದಲ ವರ್ಷಕ್ಕೆ 15 ವರ್ಷ ಕ್ಯಾಪಿಟೇಶನ್ ಫೀಸ್ ಮತ್ತು 7.5 ಲಕ್ಷ ಟ್ಯೂಶನ್ ಫೀಸ್ ಕೊಡಬೇಕು ಎಂದು ತಿಳಿಸಿದ್ದರು.
ಅದಕ್ಕೆ ಒಪ್ಪಿದ್ದ ಶಶಿಕಾಂತ್ ದೀಕ್ಷಿತ್ ಮತ್ತು ಅವರ ಮಗ ಉತ್ತಮ್ ದೀಕ್ಷಿತ್ ಡಿ.21ರಂದು ದೇರಳಕಟ್ಟೆಯ ಮೆಡಿಕಲ್ ಕಾಲೇಜಿನ ಎಡ್ಮಿನಿಸ್ಟ್ರೇಶನ್ ವಿಭಾಗಕ್ಕೆ ಬಂದಿದ್ದರು. ಜೊತೆಗೆ ಬೀದರಿನ ಕೆನರಾ ಬ್ಯಾಂಕಿನಿಂದ 7.5 ಲಕ್ಷ ರೂ. ಡಿಡಿ ಮತ್ತು 15 ಲಕ್ಷ ರೂ. ನಗದು ಹಣವನ್ನು ತಂದಿದ್ದರು. ಈ ವೇಳೆ, ಅಲ್ಲಿ ಸಿಕ್ಕಿದ್ದ ಇಫ್ತಿಕಾರ್ ಅಹ್ಮದ್ ಎಂಬವರು ನಿಮ್ಮ ಮೆಡಿಕಲ್ ಸೀಟು ಕನ್ಫರ್ಮ್ ಆಗಿದೆಯೆಂದು ಹೇಳಿದ್ದರು. ಆನಂತರ ಸ್ವತಃ ಇಫ್ತಿಕಾರ್ ಅಹ್ಮದ್ ಅಡ್ಮಿಶನ್ ಲೆಟರ್ ಕೊಟ್ಟು 15 ಲಕ್ಷ ನಗದು ಹಣವನ್ನು ಪಡೆದುಕೊಂಡಿದ್ದರು. ಟ್ಯೂಶನ್ ಶುಲ್ಕದ 7.5 ಲಕ್ಷ ರೂ.ಗಳ ಡಿಡಿ ಮೊತ್ತದ ಚೀಟಿ ಕ್ಲೀಯರ್ ಇಲ್ಲವೆಂದು ಹೇಳಿ, ಈ ಮೊತ್ತವನ್ನು ನಗದು ರೂಪದಲ್ಲಿಯೇ ಕೊಡಿ. ಅದನ್ನು ಹೈದರಾಬಾದಿನಲ್ಲಿ ಅಶೋಕ್ ಸಿಂಗ್ ಎಂಬವರ ಮೂಲಕ ತಲುಪಿಸುವಂತೆ ಇಫ್ತಿಕಾರ್ ತಿಳಿಸಿದ್ದ.
ಆನಂತರ, ದೂರುದಾರ ಶಶಿಕಾಂತ್ ದೀಕ್ಷಿತ್ ಡಿ.29ರಂದು ಹೈದರಾಬಾದ್ ಏರ್ಪೋರ್ಟ್ ಬಳಿಗೆ ಹೋಗಿ ಅಲ್ಲಿ ಇಫ್ತಿಕಾರ್ ತಿಳಿಸಿದ್ದ ಅಶೋಕ್ ಸಿಂಗ್ ಎಂಬಾತನಿಗೆ 7.5 ಲಕ್ಷ ರೂಪಾಯಿ ನಗದನ್ನು ತಲುಪಿಸಿದ್ದರು. ಇದೇ ವೇಳೆ, ಜನವರಿ 5ರಂದು ಈ ಸಾಲಿನ ಕ್ಲಾಸ್ ಆರಂಭಗೊಳ್ಳುತ್ತದೆ, ನೀವು ಅಡ್ಮಿಶನ್ ಆಗಲು ಬನ್ನಿ ಎಂದು ಇಫ್ತಿಕಾರ್ ತಿಳಿಸಿದ್ದರು. ಆದರೆ, ಶಶಿಕಾಂತ್ ದೀಕ್ಷಿತ್ ಮತ್ತು ಅವರ ಮಗ ಉತ್ತಮ್ ದೀಕ್ಷಿತ್ ಜನವರಿ 5ರಂದು ಕಣಚೂರು ಮೆಡಿಕಲ್ ಕಾಲೇಜಿಗೆ ಬಂದು ಅಡ್ಮಿಶನ್ ಬಗ್ಗೆ ಕೇಳಿದಾಗ, ನಾವು ನಿಮ್ಮನ್ನು ಅಡ್ಮಿಶನ್ ಮಾಡಿಲ್ಲ. ಯಾರೋ ಬ್ರೋಕರ್ ನಿಮಗೆ ಮೋಸ ಮಾಡಿದ್ದಾರೆಂದು ತಿಳಿಸಿದ್ದಾರೆ. ಇತ್ತ ಇಫ್ತಿಕಾರ್ ಅಹ್ಮದ್ ಅವರಲ್ಲಿ ಕೇಳಿದಾಗ, ಏನೋ ಎಡವಟ್ಟು ಆಗಿದೆ, ಜ.13ರಂದು ಅಡ್ಮಿಶನ್ ಮಾಡಿಸುತ್ತೇನೆ ಎಂದು ಸಮಜಾಯಿಷಿ ನೀಡಿದ್ದ. ಆದರೆ ಅಡ್ಮಿಶನ್ ಆಗದೇ ಇದ್ದುದಲ್ಲದೆ, ಅಲ್ಲಿವರೆಗೂ ಮಾತನಾಡುತ್ತಿದ್ದ ಇಫ್ತಿಕಾರ್ ಅವರ ಮೊಬೈಲ್ ನಂಬರ್(7304082371) ಸ್ವಿಚ್ ಆಫ್ ಆಗಿರುವುದರಿಂದ ತಾವು ಮೋಸ ಹೋಗಿರುವುದು ತಿಳಿದುಬಂದಿದೆ.
ಜನವರಿಯಲ್ಲೇ ದೂರು, ಮಾರ್ಚ್ ನಲ್ಲಿ ಎಫ್ಐಆರ್ !
ಜನವರಿ ಮೊದಲ ವಾರದಲ್ಲಿಯೇ ಶಶಿಕಾಂತ್ ದೀಕ್ಷಿತ್ ಅವರಿಗೆ ತಾವು ಮೋಸ ಹೋಗಿರುವುದು ಅರಿವಾಗಿದ್ದು, ಉಳ್ಳಾಲ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಅಲ್ಲದೆ, ಆಗ ಪೊಲೀಸ್ ಕಮಿಷನರ್ ಆಗಿದ್ದ ಶಶಿಕುಮಾರ್ ಅವರನ್ನೂ ಭೇಟಿಯಾಗಿ ದೂರು ಹೇಳಿದ್ದಾರೆ. ಆದರೆ ಪೊಲೀಸ್ ಕಮಿಷನರ್ ಮತ್ತು ಉಳ್ಳಾಲ ಪೊಲೀಸರು ದೂರು ದಾಖಲಿಸುತ್ತೇವೆಂದು ಕಾಲ ತಳ್ಳಿದ್ದಾರೆ. ಇಫ್ತಿಕಾರ್ ಅಹ್ಮದ್ ಅನ್ನುವ ವ್ಯಕ್ತಿ ಪ್ರಭಾವಿ ಆಗಿದ್ದರಿಂದಲೋ ಏನೋ ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ. ಮೂರು ತಿಂಗಳ ಬಳಿಕ ಉಳ್ಳಾಲ ಠಾಣೆಯಲ್ಲಿ ಮಾ.6ರಂದು ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ದೂರುದಾರ ಶಶಿಕಾಂತ್ ಅವರಲ್ಲಿ ಕೇಳಿದಾಗ, ಮೂರು ತಿಂಗಳಿನಿಂದ ದೂರು ದಾಖಲಿಸಿಕೊಂಡಿಲ್ಲ ಯಾಕೆ ಎನ್ನುವುದು ಗೊತ್ತಿಲ್ಲ. ತನಿಖೆ ಮಾಡುತ್ತಿದ್ದೇವೆಂದು ಹೇಳುತ್ತಾ ಬಂದಿದ್ದರು. ಈಗ ದಿಢೀರ್ ಆಗಿ ಎಫ್ಐಆರ್ ದಾಖಲು ಮಾಡಿದ್ದಾರೆ. ಇಫ್ತಿಕಾರ್ ಅನ್ನುವ ಯಾರೋ ವ್ಯಕ್ತಿ ಮುಂಬೈನಲ್ಲಿ ಅರೆಸ್ಟ್ ಆಗಿದ್ದಾನಂತೆ. ಆನಂತರ ಕೇಸು ದಾಖಲು ಮಾಡಿದ್ದಾರೆ ಎಂದು ಹೇಳಿದರು.
ಸಿಇಎನ್ ಗೆ ದೂರು ಕೊಟ್ಟಿದ್ದೇವೆಂದ ಕಣಚೂರು
ಮೋಸ ಎಸಗಿರುವ ಇಫ್ತಿಕಾರ್ ಅಹ್ಮದ್ ಅವರನ್ನು ನೋಡಿದರೆ ಗುರುತು ಹಿಡಿಯಬಹುದು. ತಲೆಯಲ್ಲಿ ಕೂದಲಿರಲಿಲ್ಲ ಹೌದು. ಈಗ ಮುಂಬೈನಲ್ಲಿ ಸೆರೆಸಿಕ್ಕಿರುವ ವ್ಯಕ್ತಿ ಯಾರು ಅನ್ನುವುದು ನೋಡಬೇಕು ಎಂದಿದ್ದಾರೆ. ಈ ಬಗ್ಗೆ ಕಣಚೂರು ಎಜುಕೇಶನ್ ಸೆಂಟರಿನ ರಹಿಮಾನ್ ಅವರನ್ನು ಕೇಳಿದಾಗ, ಇಫ್ತಿಕಾರ್ ಅನ್ನುವ ವ್ಯಕ್ತಿ ಒಬ್ಬರೇ ಇರೋದು ಅಲ್ವಲ್ಲಾ ಎಂದಿದ್ದಾರೆ. ನಮ್ಮ ಸಂಸ್ಥೆಯ ಹೆಸರಲ್ಲಿ ಮೋಸ ಆಗಿರುವ ಬಗ್ಗೆ ನಾವು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದರು. ಯಾವಾಗ ದೂರು ನೀಡಿದ್ದೀರಿ ಎಂದು ಕೇಳಿದಾಗ, ನಮಗೆ ಯಾವಾಗ ಮೋಸ ಆಗಿರುವ ವಿಚಾರ ಗೊತ್ತಾಯಿತೋ ಆವಾಗಲೇ ದೂರು ಕೊಟ್ಟಿದ್ದೇವೆ ಎಂದಿದ್ದಾರೆ. ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಕೇಳಿದರೆ, ಆ ರೀತಿಯ ದೂರು ಕಣಚೂರು ಮೆಡಿಕಲ್ ಕಾಲೇಜು ಕಡೆಯಿಂದ ಬಂದಿಲ್ಲ ಎಂದಿದ್ದಾರೆ.
ಎಂಡಿ ಸೀಟು ಹೆಸರಲ್ಲಿ 50 ಲಕ್ಷ ಹಣ ಪಡೆದು ಮೋಸ
ಇನ್ನೊಂದು ಪ್ರಕರಣದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಚಪ್ಪಗಾಡಿ ಎರುಕ್ಕು ನಾಯ್ಡು ಎಂಬವರಿಗೆ ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಡರ್ಮಟಾಲಜಿ ಸೀಟು ದೊರಕಿಸುವುದಾಗಿ ಹೇಳಿ 50 ಲಕ್ಷ ಹಣ ಪಡೆದು ಮೋಸ ಎಸಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಲ್ಲಿ ಕೊಲ್ಕತ್ತಾದ ಸಾಯಿ ಕನ್ಸಲ್ಟೆಂಟ್ ಹೆಸರಿನಲ್ಲಿ ಸುಪ್ರಿಯಾ ಎಂಬವರು
ಒಂದು ಕೋಟಿ ರೂಪಾಯಿಗೆ ಎಂಡಿ ಸೀಟು ಕೊಡಿಸುವ ಬಗ್ಗೆ ಮಾತನಾಡಿದ್ದರು. ಅದರಂತೆ, 2022ರ ಡಿ.2ರಂದು ಎರುಕ್ಕು ನಾಯ್ಡು ಮತ್ತು ಅವರ ಮಗ ರವಿಕುಮಾರ್ ದೇರಳಕಟ್ಟೆಯ ಅವೆನ್ಯು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಗೆ ಏಜಂಟ್ ಮನೋಜ್ ಮತ್ತು ಕಣಚೂರು ಸಂಸ್ಥೆಯ ಉದ್ಯೋಗಿ ಎನ್ನಲಾದ ಜಯಂತಿ ಎಂಬವರು ಬಂದು ಮಾತುಕತೆ ನಡೆಸಿದ್ದಾರೆ. ದಾಖಲಾತಿಗಳನ್ನು ಪಡೆದು ಕೆಇಎ ವೆಬ್ ನಲ್ಲಿ ಅಪ್ಡೇಡ್ ಮಾಡುವುದಾಗಿ ಹೇಳಿ 50 ಸಾವಿರ ಟೋಕನ್ ಪಡೆದಿದ್ದರು.
ಕಣಚೂರು ಉದ್ಯೋಗಿ ಹೆಸರಲ್ಲೇ ಮೋಸ
ಮರುದಿನ ಡಿ.3ರಂದು ಹೊಟೇಲಿಗೆ ಬಂದಿದ್ದ ಮನೋಜ್, ಜಯಂತಿ ಮತ್ತು ಇನ್ನೊಬ್ಬ ವ್ಯಕ್ತಿ ಎರುಕ್ಕು ನಾಯ್ಡು ಅವರಿಂದ 49.5 ಲಕ್ಷ ನಗದು ಮೊತ್ತ ಹಾಗೂ 12.64 ಲಕ್ಷ ಮೊತ್ತದ ಡಿಡಿಯನ್ನು ಪಡೆದುಕೊಂಡಿದ್ದಾರೆ. ಉಳಿದ 50 ಲಕ್ಷ ಮೊತ್ತವನ್ನು ಕಂತಿನಲ್ಲಿ ನೀಡುವಂತೆ ತಿಳಿಸಿದ್ದಾರೆ. ಸೀಟು ಅಲಾಟ್ ಆಗಿರುವ ಬಗ್ಗೆ ಕಾಲೇಜು ಸೀಲ್ ಮತ್ತು ಡೀನ್ ಅವರ ಸಹಿಯಿರುವ ಪ್ರತಿಯನ್ನು ನೀಡಿದ್ದರು. ಅಲ್ಲದೆ, ಕಣಚೂರು ಮೆಡಿಕಲ್ ಕಾಲೇಜು ಹೆಸರಲ್ಲಿ ಇಮೇಲ್ ಐಡಿಯಿಂದ, ರವಿಕುಮಾರ್ ಇ-ಮೇಲ್ ಖಾತೆಗೆ ನೀವು ಎಂಡಿ ಡರ್ಮಟಾಲಜಿ ಸೀಟಿಗೆ ಆಯ್ಕೆ ಆಗಿದ್ದೀರಿ ಎಂದು ಇಂಗ್ಲಿಷ್ ನಲ್ಲಿ ಸಂದೇಶ ರವಾನಿಸಿದ್ದರು. ಆದರೆ ಈ ಬಗ್ಗೆ ಜನವರಿ 11ರಂದು ಕಣಚೂರು ಸಂಸ್ಥೆಯ ಕನ್ಸಲ್ಟೆಂಟ್ ಜಯಂತಿ ಅವರಲ್ಲಿ ದೂರುದಾರರು ವಿಚಾರಿಸಿದಾಗ, ನಿಮ್ಮ ಸೀಟು ಕ್ಯಾನ್ಸಲ್ ಆಗಿದೆ, ನಿಮ್ಮ ಹಣವನ್ನು ಕೆಲವೇ ದಿನಗಳಲ್ಲಿ ವಾಪಸ್ ಮಾಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಬೆಂಗಳೂರಿನ ಕೆಇಎ ಕಚೇರಿಯಲ್ಲಿ ವಿಚಾರಿಸಿದಾಗ, ಅಲ್ಲಿಂದ ಯಾವುದೇ ಸಂದೇಶ ಕಳುಹಿಸಿಲ್ಲ ಎಂದು ತಿಳಿಸಿದ್ದಾರೆ. ಫೆ.20ರಂದು ದೇರಳಕಟ್ಟೆ ಕಣಚೂರು ಸಂಸ್ಥೆಯಲ್ಲಿ ವಿಚಾರಿಸಿದಾಗ, ನಿಮಗೆ ಸಿಕ್ಕಿರುವುದು ನಕಲಿ ಅಲಾಟ್ ಮೆಂಟ್ ಪತ್ರ ಎಂದು ತಿಳಿಸಿದ್ದಾರೆ. ಹೀಗಾಗಿ 50 ಲಕ್ಷ ಹಣ ಪಡೆದು ಮೆಡಿಕಲ್ ಸೀಟು ನೀಡುವುದಾಗಿ ವಂಚಿಸಿದ್ದಾರೆಂದು ಎರುಕ್ಕು ನಾಯ್ಡು ನೀಡಿರುವ ದೂರಿನ ಬಗ್ಗೆ ಮಾ.5ರಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Medical seat fraud for MBBS students in the name of Kanachur Medical college, FIR lodged at Ullal police station. Two medical students who have been cheated of issing MBBS seat at Kanachur have lost lakhs of money. FIR has been lodged against IFTI and many others.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm