ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ರೋಹನ್ ರೆಡ್ಡಿ ಹೆಸರಲ್ಲಿ ಅವಿತುಕೊಂಡಿದ್ದ ಜಪಾನ್ ಮಂಗ ಪೊಲೀಸ್ ಬಲೆಗೆ

14-03-23 09:40 pm       Mangalore Correspondent   ಕ್ರೈಂ

ಕೊಲೆ, ಕೊಲೆಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಜಪಾನ್ ಮಂಗ ಅಲಿಯಾಸ್ ರೋಹನ್ ರೆಡ್ಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ.

ಮಂಗಳೂರು, ಮಾ.14: ಕೊಲೆ, ಕೊಲೆಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಜಪಾನ್ ಮಂಗ ಅಲಿಯಾಸ್ ರೋಹನ್ ರೆಡ್ಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ.

2013ರಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ನಡೆದ ಬಸ್ ಚಾಲಕ ಪ್ರಸನ್ನ ಕೊಲೆ ಪ್ರಕರಣ, ಸುರತ್ಕಲ್ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ, ಕದ್ರಿಯಲ್ಲಿ ಉದ್ಯಮಿಯೊಬ್ಬರ ಕೊಲೆಯತ್ನ, ಮಂಗಳೂರು ಜೈಲಿನಲ್ಲಿ ಹಲ್ಲೆ ಪ್ರಕರಣ, ನ್ಯಾಯಾಲಯ ಆವರಣದಲ್ಲಿ ಯುವಕನ ಅಟ್ಟಾಡಿಸಿ ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ಪತ್ತೆಗೆ ನ್ಯಾಯಾಲಯದಿಂದ ವಾರಂಟ್ ಹೊರಡಿಸಲಾಗಿತ್ತು.

ಮಂಗಳೂರಿನಿಂದ ತಪ್ಪಿಸಿಕೊಂಡು ಬೆಂಗಳೂರು ತೆರಳಿದ್ದ ಆರೋಪಿ ಜಪಾನ್ ಮಂಗ ಅಲ್ಲಿ ತಲೆಮರೆಸಿಕೊಂಡು ಬೇರೆ ಹೆಸರಿನಲ್ಲಿ ನೆಲೆಸಿದ್ದ. ತನ್ನ ಹೆಸರನ್ನು ರೋಹನ್ ರೆಡ್ಡಿ ಎಂಬುದಾಗಿ ಬದಲಿಸಿ ನಕಲಿ ದಾಖಲೆಯನ್ನು ಸೃಷ್ಟಿಸಿದ್ದಲ್ಲದೆ, ಅದೇ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದ. ಆಧಾರ್ ಕಾರ್ಡ್ ತೋರಿಸಿ ಹೊಸತಾಗಿ ಮೊಬೈಲ್ ಸಿಮ್ ಖರೀದಿಸಿದ್ದ. 2017ರಲ್ಲಿ ಮಂಗಳೂರಿನ ಕೋರ್ಟಿಗೆ ಕೊನೆಯ ಬಾರಿಗೆ ಹಾಜರಾಗಿದ್ದು, ಆನಂತರ ನಾಪತ್ತೆಯಾಗಿದ್ದ.

2022ರಲ್ಲಿ ಬೆಂಗಳೂರು ನಗರದ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವುದಲ್ಲದೆ, ಪೊಲೀಸ್ ಸಿಬಂದಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ವಿಭಾಗದ ಎಸಿಪಿ ಪಿ.ಎ. ಹೆಗಡೆ ನೇತೃತ್ವದಲ್ಲಿ ಸಿಬಂದಿ ಪಾಲ್ಗೊಂಡಿದ್ದರು.

Mangalore Notorious criminal Japan Manga absconding since years arrested by police in Bangalore. Japan Manga was wanted in several criminal cases. Commissioner Kuldeep kumar jain who was closely monitoring old cases have succeeded in nabbing the many accused in Mangalore.