ದೆಹಲಿ ಮೂಲದ ಮಹಿಳೆಯನ್ನ ಚೂರಿಯಿಂದ ಇರಿದು ಹತ್ಯೆ ; ಉಳ್ಳಾಲದ ಕೋಟೆಪುರದಲ್ಲಿ ಕೃತ್ಯ 

16-03-23 08:08 pm       Mangalore Correspondent   ಕ್ರೈಂ

ಚೂರಿಯಿಂದ ಇರಿಯಲ್ಪಟ್ಟು ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.

ಉಳ್ಳಾಲ, ಮಾ.16 : ಚೂರಿಯಿಂದ ಇರಿಯಲ್ಪಟ್ಟು ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.

ದೆಹಲಿ ಮೂಲದ 40-45 ರ ಹರೆಯದ ಮಹಿಳೆಯ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ. ಮೂರು ದಿವಸಗಳ ಹಿಂದಷ್ಟೆ ಕೋಟೆಪುರಕ್ಕೆ ಬಂದಿದ್ದ ಈ ಜೋಡಿ ಸ್ಥಳೀಯ ಸೆಲೂನ್ ಮಾಲೀಕರ ಪರಿಚಯ ಬೆಳೆಸಿ ಅವರ ಮೂಲಕ ಬಾಡಿಗೆ ಮನೆಯನ್ನು ಪಡೆದಿದ್ದರು. ಜೋಡಿಗಳು ಕೋಟೆಪುರದ ಹಮೀದ್ ಎಂಬವರ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದರು. 

ಮನೆ ಮಾಲೀಕರಲ್ಲಿ ತಾವು ಬಟ್ಟೆ ವ್ಯಾಪಾರ ನಡೆಸುವವರು, ಇನ್ನೇನು ವ್ಯಾಪಾರ ನಡೆಸಲು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿದ್ದರಂತೆ. ಇಂದು ಸಂಜೆ ವೇಳೆ ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಗಮನಿಸಿ ಸ್ಥಳೀಯ ಯುವಕನೋರ್ವ ಮನೆಯನ್ನು ಗಮನಿಸಿದಾಗ ಶೌಚಾಲಯದೊಳಗೆ ಮಹಿಳೆ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಹೆಸರು, ವಿವರ ಪತ್ತೆಯಾಗಿಲ್ಲ. ಆಕೆಯ ಜೊತೆಗಿದ್ದ ಯುವಕ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು, ವಿಧಿ ವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Mangalore Woman body found, murder suspected in kotepura in Ullal. The deceased has been identified as Nayami (35).