ಬ್ರೇಕಿಂಗ್ ನ್ಯೂಸ್
18-03-23 11:47 pm Headline Karnataka Staffer ಕ್ರೈಂ
ನವದೆಹಲಿ, ಮಾ.18: ಭಾರತವನ್ನು ಇಸ್ಲಾಮಿಕ್ ದೇಶ ಮಾಡಬೇಕೆಂಬ ಏಕೈಕ ಅಜೆಂಡಾ ಇಟ್ಟುಕೊಂಡು ದೇಶಾದ್ಯಂತ ಗಲಭೆ ಎಬ್ಬಿಸುವುದಲ್ಲದೆ, ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಭಯೋತ್ಪಾದಕರ ಜೊತೆಗೆ ನೇರ ನಂಟು ಹೊಂದಿದ್ದಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪಿಎಫ್ಐ ನಿಷೇಧ ತರುವಾಯ ಎನ್ಐಎ ದೇಶಾದ್ಯಂತ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಮುಖ ಪದಾಧಿಕಾರಿಗಳನ್ನು ಬಂಧಿಸಲಾಗಿತ್ತು. ಇದೀಗ ಒಟ್ಟು ಕಾರ್ಯಾಚರಣೆಗೆ ಸಂಬಂಧಿಸಿ ಎನ್ಐಎ ದೆಹಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, 12 ಮಂದಿ ರಾಷ್ಟ್ರೀಯ ಪದಾಧಿಕಾರಿಗಳು ಸೇರಿ 19 ಮಂದಿಯ ವಿರುದ್ಧ ಮೊದಲ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದೆ.
ಎನ್ಐಎ ತನಿಖೆಯಲ್ಲಿ ದೇಶಾದ್ಯಂತ ಪಿಎಫ್ಐ ಬೇರೂರಿದ್ದ ನೆಟ್ವರ್ಕ್, ಭಯೋತ್ಪಾದನೆಗೆ ನಿಧಿ ಸಂಗ್ರಹಿಸುತ್ತಿರುವುದು, ಭಯೋತ್ಪಾದಕ ಚಟುವಟಿಕೆಗಳಿಗೆ ಹಣವನ್ನು ರವಾನೆ ಮಾಡುತ್ತಿದ್ದ ವಿಚಾರವನ್ನು ಪತ್ತೆ ಮಾಡಲಾಗಿದೆ. ಇದಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪಿಎಫ್ಐ ಸಂಘಟನೆ ಹೊಂದಿದ್ದ 37 ಬ್ಯಾಂಕ್ ಖಾತೆಗಳು ಸೇರಿದಂತೆ ಆರೋಪಿಗಳು ಹೊಂದಿದ್ದ ಒಟ್ಟು 77 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ. ಅಲ್ಲದೆ, ದೇಶದ ಹಲವು ರಾಜ್ಯಗಳ ನಿಗೂಢ ಪ್ರದೇಶಗಳಲ್ಲಿ ಪಿಎಫ್ಐ ನಡೆಸುತ್ತಿದ್ದ ಭಯೋತ್ಪಾದಕ ತರಬೇತಿಗಳು, ದೇಶ ವಿರೋಧಿ ಕೃತ್ಯಗಳನ್ನೂ ಪತ್ತೆ ಮಾಡಲಾಗಿದೆ.
ಅಸ್ಸಾಂ ರಾಜ್ಯದ ಗುವಾಹಟಿ, ಪಶ್ಚಿಮ ಬಂಗಾಳದ ಸುಂಡಿಪುರ್, ಮಣಿಪುರದ ಇಂಫಾಲ್, ಕೇರಳದ ಕೋಜಿಕ್ಕೋಡ್, ತಮಿಳುನಾಡಿನ ಚೆನ್ನೈ, ನವದೆಹಲಿ, ರಾಜಸ್ಥಾನದ ಜೈಪುರ್, ಕರ್ನಾಟಕದ ಬೆಂಗಳೂರು, ತೆಲಂಗಾಣದ ಹೈದರಾಬಾದ್, ಆಂಧ್ರ ಪ್ರದೇಶದ ಕರ್ನೂಲ್ ನಗರಗಳಲ್ಲಿ ಪಿಎಫ್ಐ ಪರವಾಗಿ ಹೊಂದಿದ್ದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. 2022ರ ಎಪ್ರಿಲ್ ತಿಂಗಳಲ್ಲಿ ಪಿಎಫ್ಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ದೇಶವನ್ನು ಇಸ್ಲಾಮಿಕ್ ಆಗಿ ಪರಿವರ್ತಿಸುವುದು, ಇದಕ್ಕಾಗಿ ದೇಶದ ಜಾತ್ಯತೀತ ಬುನಾದಿಯನ್ನು ತಪ್ಪಿಸಿ ಜನರನ್ನು ಹಿಂದು- ಮುಸ್ಲಿಂ ಆಗಿ ಭೇದ ಉಂಟಾಗುವಂತೆ ಕಿಡಿ ಹೊತ್ತಿಸುವುದು, ದೇಶದಲ್ಲಿ ಷರಿಯಾ ಕಾನೂನು ಹೇರುವ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ಪತ್ತೆಯಾಗಿತ್ತು.
2047ರ ವೇಳೆಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿ ಪರಿವರ್ತಿಸುವ ದೂರಗಾಮಿ ದುರುದ್ದೇಶ ಇಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿರುವುದು, ಇದಕ್ಕಾಗಿ ಯುವಜನರನ್ನು ತೀವ್ರಗಾಮಿಗಳನ್ನಾಗಿಸುವುದು, ಅವರಿಗೆ ಸಾಮಾಜಿಕ ಸಂಘಟನೆ ಹೆಸರಲ್ಲಿ ಬ್ರೇನ್ ವಾಷ್ ಮಾಡುವುದು, ನಿಶ್ಚಿತ ಧ್ಯೇಯ ಇಟ್ಟುಕೊಂಡು ದೊಡ್ಡ ಸಮೂಹವನ್ನು ಅದಕ್ಕಾಗಿ ಸಜ್ಜುಗೊಳಿಸುವ ಕೃತ್ಯವನ್ನು ಮಾಡುತ್ತಿದ್ದರು. ಇದಲ್ಲದೆ, ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಯುವಕರನ್ನು ರೆಡಿ ಮಾಡುತ್ತಿದ್ದರು. ಅವರಿಗೆ ಸಶಸ್ತ್ರ ತರಬೇತಿಗೊಳಿಸುವುದಲ್ಲದೆ, ಅವರ ಕುಟುಂಬಕ್ಕೆ ಯುವಕರ ಪರವಾಗಿ ನಿಗದಿತ ವೇತನ ಕೊಡಿಸುವ ಕೆಲಸವನ್ನೂ ಮಾಡುತ್ತಿದ್ದರು. ಭಾರತ ಪ್ರಜಾಪ್ರಭುತ್ವ ರಾಷ್ಟ್ರಕ್ಕೆದುರಾಗಿ ಪ್ರತ್ಯೇಕ ಸೇನೆ ಕಟ್ಟುವುದು, ಅದಕ್ಕೆ ಸೇರುವ ಯುವಕರನ್ನು ನಿಶ್ಚಿತ ಗುರಿಗಾಗಿ ಪ್ರೇರಣೆ ನೀಡುತ್ತಿದ್ದರು. ಇವೆಲ್ಲ ದುರುದ್ದೇಶ ಇಟ್ಟುಕೊಂಡಿದ್ದಕ್ಕಾಗಿ ಪಿಎಫ್ಐ ಸಂಘಟನೆಯನ್ನು ದೇಶ ವಿರೋಧಿ ಕೃತ್ಯಕ್ಕಾಗಿ ನಿಷೇಧ ಮಾಡಲಾಗಿತ್ತು ಎಂದು ಎನ್ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.
ಎನ್ಐಎ ದೇಶದ್ರೋಹ ಕಾಯ್ದೆಯಡಿ ಕೇಸು ದಾಖಲಿಸಿದ್ದು, ಇದೀಗ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ನಲ್ಲಿ ಪಿಎಫ್ಐ ಪ್ರಮುಖ ಪದಾಧಿಕಾರಿಗಳಾದ ಓಎಂಎ ಸಲಾಂ, ಇ.ಎಂ. ಅಬ್ದುಲ್ ರಹಿಮಾನ್, ಅನೀಸ್ ಅಹ್ಮದ್, ಅಫ್ಸರ್ ಪಾಷಾ, ವಿ.ಪಿ ನಝರುದ್ದೀನ್, ಇ. ಅಬುಬಕ್ಕರ್, ಪ್ರೊ.ಪಿ. ಕೋಯಾ, ಮಹಮ್ಮದ್ ಅಲಿ ಜಿನ್ನಾ, ಅಬ್ದುಲ್ ವಹೀದ್ ಸೇಟ್, ಎ.ಎಸ್. ಇಸ್ಮಾಯಿಲ್. ಅಡ್ವಕೇಟ್ ಮಹಮ್ಮದ್ ಯೂಸುಫ್, ಮಹಮ್ಮದ್ ಬಶೀರ್, ಶಫೀರ್ ಕೆ.ಪಿ, ಜಾಸೀರ್ ಕೆ.ಪಿ, ಶಹೀದ್ ನಾಸಿರ್, ವಾಸಿಂ ಅಹ್ಮದ್, ಮಹ್ಮದ್ ಶಕೀಫ್, ಮಹಮ್ಮದ್ ಫಾರೂಕ್ ಉರ್ ರೆಹ್ಮಾನ್ ಮತ್ತು ಯಾಸಿರ್ ಅರಾಫತ್ ಅಲಿಯಾಸ್ ಯಾಸಿರ್ ಹಸನ್ ಅವರ ಹೆಸರನ್ನು ಉಲ್ಲೇಖಿಸಿದೆ. ಕಳೆದ ಸೆಪ್ಟಂಬರ್ ತಿಂಗಳ ಕೊನೆಯಲ್ಲಿ ದೇಶದ 39 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಎನ್ಐಎ ಇವರನ್ನು ಬಂಧಿಸಿತ್ತು.
ಪಿಎಫ್ಐ ಸಂಘಟನೆಯನ್ನು 2006ರಲ್ಲಿ ಆರಂಭಿಸಲಾಗಿತ್ತು. ಕರ್ನಾಟಕದಲ್ಲಿದ್ದ ಫಾರಂ ಫಾರ್ ಡಿಗ್ನಿಟಿ (ಕೆಎಫ್ ಡಿ) ಮತ್ತು ಕೇರಳದ ನೇಶನಲ್ ಡೆಮಾಕ್ರಟಿಕ್ ಫ್ರಂಟ್ (ಎನ್ ಡಿಎಫ್) ಇವೆರಡನ್ನು ಒಟ್ಟುಗೂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಡಲಾಗಿತ್ತು. ಓಎಂಎ ಸಲಾಂ ಅಧ್ಯಕ್ಷ ಮತ್ತು ಇಎಂ ಅಬ್ದುಲ್ ರಹಿಮಾನ್ ಉಪಾಧ್ಯಕ್ಷರಾಗಿ ಇನ್ನಿತರರನ್ನು ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿ ಮಾಡಲಾಗಿತ್ತು. ಎನ್ಐಎ ಕಳೆದ ಎರಡು ವರ್ಷಗಳಲ್ಲಿ ಸಂಗ್ರಹಿಸಿದ ಪ್ರಬಲ ಸಾಕ್ಷ್ಯ ಪರಿಗಣಿಸಿ ಇವರ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. (ಚಾರ್ಜ್ ಶೀಟ್ ನಲ್ಲಿ ಪಿಎಫ್ಐ ಸಂಚು ಬಯಲಾಗಿದ್ದು ಹೇಗೆ ಎನ್ನುವ ಬಗ್ಗೆಯೂ ಮಾಹಿತಿ ಇದೆ, ಅದನ್ನು ಎರಡನೇ ಕಂತಿನಲ್ಲಿ ನೀಡಲಾಗುವುದು.
NIA has frozen 37 bank accounts of the PFI as well as 40 bank accounts belonging to 19 individuals associated with the group. The crackdown on these banks took place in multiple cities across the country, including Guwahati, Chennai, New Delhi, Jaipur, Bangalore, and Hyderabad. The National Investigation Agency (NIA) has charged 19 senior leaders of the banned Popular Front of India (PFI) in connection with a criminal conspiracy aimed at destabilising and dis-membering India. The crackdown on these banks took place in multiple cities across the country, including Guwahati, Chennai, New Delhi, Jaipur, Bangalore, and Hyderabad.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am