ಮಂಗಳೂರು ನಗರ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದ 11 ಕೇಜಿ ಗಾಂಜಾ, ಎಂಡಿಎಂಎ ಡ್ರಗ್ಸ್ ನಾಶ  

24-03-23 10:51 pm       Mangalore Correspondent   ಕ್ರೈಂ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ವಶಕ್ಕೆ ಪಡೆದಿದ್ದ 11 ಕೇಜಿ 194 ಗ್ರಾಮ್ ಗಾಂಜಾ ಮತ್ತು 14 ಮಿಲ್ಲಿ ಗ್ರಾಮ್ ಎಂಡಿಎಂಎ ಮಾದಕ ವಸ್ತುವನ್ನು ಮಾ.24ರಂದು ಕಿನ್ನಿಗೋಳಿಯ ಕೊಪ್ಪಲಕಾಡಿನ ರಾಮ್ಕೇ ಎನರ್ಜಿ ಸಂಸ್ಥೆಯಲ್ಲಿ ಸುಟ್ಟು ಭಸ್ಮ ಮಾಡಲಾಯಿತು.

ಮಂಗಳೂರು, ಮಾ.24: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ವಶಕ್ಕೆ ಪಡೆದಿದ್ದ 11 ಕೇಜಿ 194 ಗ್ರಾಮ್ ಗಾಂಜಾ ಮತ್ತು 14 ಮಿಲ್ಲಿ ಗ್ರಾಮ್ ಎಂಡಿಎಂಎ ಮಾದಕ ವಸ್ತುವನ್ನು ಮಾ.24ರಂದು ಕಿನ್ನಿಗೋಳಿಯ ಕೊಪ್ಪಲಕಾಡಿನ ರಾಮ್ಕೇ ಎನರ್ಜಿ ಸಂಸ್ಥೆಯಲ್ಲಿ ಸುಟ್ಟು ಭಸ್ಮ ಮಾಡಲಾಯಿತು.

ಸೆನ್ ಪೊಲೀಸ್ ಠಾಣೆಯಲ್ಲಿ 6 ಪ್ರಕರಣಗಳಲ್ಲಿ ಒಟ್ಟು 1 ಕೇಜಿ 802 ಗ್ರಾಮ್ ಗಾಂಜಾ, ಕೊಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳಲ್ಲಿ 1 ಕೇಜಿ 520 ಗ್ರಾಮ್, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ 1 ಕೇಜಿ 218 ಗ್ರಾಮ್ ಗಾಂಜಾ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 6 ಪ್ರಕರಣಗಳಲ್ಲಿ ಒಟ್ಟು 2 ಕೇಜಿ 456 ಗ್ರಾಮ್ ಗಾಂಜಾ, 14 ಮಿಲ್ಲಿ ಗ್ರಾಮ್ ಎಂಡಿಎಂಎ ಡ್ರಗ್ಸ್ ಅನ್ನು ವಿಲೇವಾರಿ ಮಾಡಲಾಯಿತು.

ಸುರತ್ಕಲ್ ಠಾಣೆಯಲ್ಲಿ 2 ಪ್ರಕರಣಗಳಲ್ಲಿ 1 ಕೇಜಿ 660 ಗ್ರಾಮ್ ಗಾಂಜಾ, ಕಂಕನಾಡಿ ನಗರ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ 700 ಗ್ರಾಮ್ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ವರ್ಷದಲ್ಲಿ ಎರಡು ಬಾರಿ ಪೊಲೀಸರು ವಶಕ್ಕೆ ಪಡೆದ ಗಾಂಜಾ ಇನ್ನಿತರ ಮಾದಕ ವಸ್ತುಗಳನ್ನು ನಾಶಪಡಿಸಲಾಗುತ್ತದೆ. ಹೊಸ ಕಮಿಷನರ್ ಬಂದ ಬಳಿಕ ಮೊದಲ ಬಾರಿಗೆ ಈ ರೀತಿಯ ಪ್ರಕ್ರಿಯೆ ನಡೆದಿದೆ.

11 kilos of Ganja seized burnt by Mangalore Police.