ಬ್ರೇಕಿಂಗ್ ನ್ಯೂಸ್
28-03-23 05:40 pm Mangalore Correspondent ಕ್ರೈಂ
ಉಳ್ಳಾಲ, ಮಾ.28 : ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕನ್ನ ನಸುಕಿನ ವೇಳೆ ಇಬ್ಬರು ಐನಾತಿ ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಈ ಬಗ್ಗೆ ಬೈಕ್ ಮಾಲಕ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೆಕಾರಿನ ಸಾರ್ವಜನಿಕ ಕೊರಗಜ್ಜನ ಕಟ್ಟೆಯ ಬಳಿಯಲ್ಲಿ ಸ್ಥಳೀಯ ವಿನಾಯಕ ಇಲೆಕ್ಟ್ರಿಕಲ್ಸ್ ನ ಡಿಜೆ ಪ್ಲೇಯರ್ ರಾಜೇಶ್ ಎಂಬವರು ಒಳ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನ ಕಳವು ಮಾಡಲಾಗಿದೆ. ಮಂಗಳವಾರ ಮುಂಜಾನೆ ನಸುಕಿನ 1.42 ರ ವೇಳೆ ಇಬ್ಬರು ಐನಾತಿ ಕಳ್ಳರು ಬೈಕನ್ನ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳರ ಕರಾಮತ್ತಿನ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬೈಕ್ ಮಾಲಕ ರಾಜೇಶ್ ಅವರು ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ತಲವಾರು ಜಳಪಿಸಿ ಬೈಕ್ ದೋಚುತ್ತಾರೆ !
ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿಯ ಉದ್ಯಮಿಯೋರ್ವರ ಮನೆಯಿಂದ ಐದು ವರುಷದ ಹಿಂದೆಯೇ ಬುಲೆಟ್ ಒಂದನ್ನ ಕಳ್ಳರು ಎಗರಿಸಿದ್ದರು. ನಂತರ ಮಡಿಕೇರಿಯಲ್ಲಿ ನಂಬರ್ ಪ್ಲೇಟ್ ಬದಲಿಸಿ ತಿರುಗುತ್ತಿದ್ದ ಅದೇ ಬುಲೆಟ್ ಪತ್ತೆಯಾಗಿತ್ತು. ಎರಡು ವರ್ಷದ ಹಿಂದೆ ಮತ್ತೆ ಅವರದೇ ಮನೆಯಿಂದ ಬೈಕನ್ನ ಕದ್ದು ರಸ್ತೆಯಲ್ಲಿ ಇರಿಸಲಾಗಿತ್ತು. ಇದೇ ಸಂದರ್ಭ ಕೊಲ್ಯದ ಮನೆಯೊಂದರಿಂದಲೂ ಬುಲೆಟ್ ಒಂದನ್ನ ಕದ್ದು ರಸ್ತೆಯಲ್ಲಿರಿಸಿದ ಕಳ್ಳರು ದೋಚಲು ಪ್ಲಾನ್ ಹಾಕಿದ್ದಾಗ ಅವರ ಪಿಕ್ ಅಪ್ ವಾಹನವೇ ಕೆಟ್ಟು ಕೈಕೊಟ್ಟಿತ್ತಂತೆ. ಓಮಿನಿಯಲ್ಲಿ ತಲವಾರು ಹಿಡಿದ ಗ್ಯಾಂಗ್ ಒಂದು ಮನೆಗಳ ಒಳಗಡೆ, ಬಾರ್, ಮಳಿಗೆಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನ ಕದ್ದು ರಸ್ತೆ ಬದಿ ತಂದು ನಿಲ್ಲಿಸುತ್ತದೆ. ಹಿಂದಿನಿಂದ ಬರುವ ಪಿಕ್ ಅಪ್ ವಾಹನದಲ್ಲಿ ಕದ್ದ ಬೈಕ್ ಗಳನ್ನ ವ್ಯವಸ್ಥಿತವಾಗಿ ಕೇರಳಕ್ಕೆ ಸಾಗಿಸುವ ಜಾಲವನ್ನ ಸ್ಥಳೀಯ ಉದ್ಯಮಿ ಈ ಹಿಂದೆಯೇ ಸಿಸಿಟಿವಿ ದಾಖಲೆಗಳಿಂದ ಕಂಡು ಹಿಡಿದಿದ್ದರಂತೆ.
ಇದೀಗ ಕೋಟೆಕಾರಲ್ಲಿ ಮತ್ತೆ ಬೈಕ್ ಕಳ್ಳತನ ನಡೆದಿದ್ದು ಸಿಸಿಟಿವಿಯಲ್ಲಿ ಬೈಕ್ ಕಳ್ಳರ ಚಹರೆ ಸರಿಯಾಗಿ ಕಾಣುತ್ತಿದ್ದು ಉಳ್ಳಾಲ ಪೊಲೀಸರು ಇವರ ಹೆಡೆಮುರಿ ಕಟ್ಟ ಬೇಕಿದೆ.
ಸರಣಿ ಬೈಕ್ ಕಳ್ಳತನ ..?
ಕಳೆದ ಶನಿವಾರ ನರಿಂಗಾನದಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ಬಂದಿದ್ದ ವ್ಯಕ್ತಿಯೋರ್ವರ ಬೈಕ್ ಕಳವಾಗಿದೆ. ಕಂಬಳ ಉತ್ಸವದಲ್ಲಿ ಸಾವಿರಾರು ವಾಹನ ಜಮಾಯಿಸಿದ್ದರಿಂದ ಎಲ್ಲೋ ಬೈಕ್ ಮಿಸ್ ಆಗಿರಬಹುದೆಂದು ಕೊಣಾಜೆ ಪೊಲೀಸರು ಇನ್ನೂ ದೂರು ಸ್ವೀಕರಿಸಿಲ್ಲ ಎಂದು ಬೈಕ್ ಕಳವಾದ ವ್ಯಕ್ತಿ ತಿಳಿಸಿದ್ದಾರೆ. ತೊಕ್ಕೊಟ್ಟಿನ ಬೈಕ್ ಶೋರೂಮಲ್ಲಿ ದುರಸ್ತಿಗೆ ಇರಿಸಿದ್ದ ಬೈಕ್ ಕಳವಾಗಿದ್ದು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀಗಾಗಿ ಬೈಕ್ ಎಗರಿಸುವ ಕೃತ್ಯದಲ್ಲಿ ಒಂದೇ ತಂಡ ಇರುವ ಶಂಕೆಯಿದೆ.
#Mangalore #Kotekar #bikerobbery video goes viral #breakingnews pic.twitter.com/mLzUa1Dfay
— Headline Karnataka (@hknewsonline) March 28, 2023
Mangalore Kotekar bike robbery video goes viral. Bike parked near Koragajja Katte goes missing. Cctv footages reveal how the robber haa stolen the bike. Kotekar has been witnessing rise in bike robbery showing talwar.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 11:46 am
HK News Staffer
Mangalore, Police, criminial escapes: ಪಾಂಡೇಶ್...
27-06-26 10:54 am
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm