ಪಾರ್ಟ್ ಟೈಮ್ ಜಾಬ್, ಹಣ ಡಬಲ್, ಬಜಾಜ್ ಲೋನ್ ಆಮಿಷ ; ವ್ಯಕ್ತಿಯಿಂದಲೇ 8.78 ಲಕ್ಷ ಪೀಕಿಸಿದ ಖದೀಮರು

10-04-23 10:44 am       Mangalore Correspondent   ಕ್ರೈಂ

ಹಣ ಡಬಲ್ ಆಗುತ್ತೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 8.78 ಲಕ್ಷ ರೂಪಾಯಿ ಪೀಕಿಸಿದ ಘಟನೆ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು, ಎ.10: ಹಣ ಡಬಲ್ ಆಗುತ್ತೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 8.78 ಲಕ್ಷ ರೂಪಾಯಿ ಪೀಕಿಸಿದ ಘಟನೆ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾರ್ಚ್ 13ರಂದು ವಾಟ್ಸಪ್ ನಂಬರ್ ನಲ್ಲಿ ಪಾರ್ ಟೈಮ್ ಜಾಬ್ ಇದೆಯೆಂದು ಹೇಳಿ ಮೆಸೇಜ್ ಬಂದಿತ್ತು. ಮೊದಲಿಗೆ ನೂರು ರೂಪಾಯಿ ರಿಜಿಸ್ಟ್ರೇಶನ್ ಶುಲ್ಕವೆಂದು ಫೋನ್ ಪೇ ಮೂಲಕ ಹಣ ಕೇಳಿದ್ದರು. ಅದನ್ನು ದೂರುದಾರ ವ್ಯಕ್ತಿ ಆಗಲೇ ಹಾಕಿದ್ದು, ಆನಂತರ ಟೆಲಿಗ್ರಾಮ್ ಲಿಂಕ್ ಕಳುಹಿಸಿ ಅದರಲ್ಲಿ ಸಂವಹನ ನಡೆಸುವುದಾಗಿ ಅಪರಿಚಿತರು ತಿಳಿಸಿದ್ದರು.

ಟೆಲಿಗ್ರಾಮ್ ಲಿಂಕ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಡಬಲ್ ಆಗುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸ್ಕೀಮಿಗೆ ವ್ಯಕ್ತಿಗಳನ್ನು ಸೇರಿಸಿದಲ್ಲಿ ಕಮಿಷನ್ ನೀಡುವುದಾಗಿಯೂ ಹೇಳಿದ್ದ. ಎಷ್ಟೇ ಮೊತ್ತ ಹಾಕಿದರೂ, ಅದು ಡಬಲ್ ಆಗುತ್ತೆ ಎಂದು ನಂಬಿಸಿದ್ದರಿಂದ ಅಪರಿಚಿತನ ಮಾತು ನಂಬಿ ಈ ವ್ಯಕ್ತಿಯೇ ಹಣ ಹೂಡಿಕೆ ಮಾಡಿದ್ದಾರೆ. 15-20 ಸಾವಿರ ಎಂದು ಮೊದಲು ಹೂಡಿಕೆ ಮಾಡಿದ್ದು, ಡಬಲ್ ಆಗಿರುವಂತೆ ಅವರದೇ ಖಾತೆಯಲ್ಲಿ ತೋರಿಸಲಾಗುತ್ತಿತ್ತು. ಮತ್ತಷ್ಟು ಹಣ ಹಾಕಿ, ಎಂಟು ಟಾಸ್ಕ್ ಪೂರೈಸಿದರೆ ಪೂರ್ತಿ ಹಣ ಡಬಲ್ ಆಗುವುದೆಂದು ಹೇಳಿದ್ದರಿಂದ ವ್ಯಕ್ತಿ ಸರದಿಯಂತೆ 4,25,068 ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ.

ಇದೇ ವೇಳೆ, ಬಜಾಜ್ ಫೈನಾನ್ಸ್ ಕಂಪನಿಯಿಂದ ಲೋನ್ ಕೊಡಿಸುವುದಾಗಿಯೂ ಆ ಕಡೆಯಿಂದ ನಂಬಿಸಿದ್ದ. ಆದರೆ ಪ್ರೊಸೆಸ್ಸಿಂಗ್ ಚಾರ್ಜ್, ಟಿಡಿಎಸ್, ಜಿಎಸ್ಟಿ ಎಂದು ಹೇಳಿದ್ದು, ಅದಕ್ಕಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ದೂರುದಾರ ವ್ಯಕ್ತಿ 4,53,638 ರೂ. ಹಣವನ್ನು ಹಾಕಿದ್ದಾರೆ. ಒಟ್ಟು 8,78,706 ರೂಪಾಯಿ ಹಣವನ್ನು ಅಪರಿಚಿತ ವ್ಯಕ್ತಿಗೆ ಹಾಕಿದ್ದು, ಇತ್ತ ಡಬಲ್ ಆದ ಹಣವೂ ಸಿಕ್ಕಿಲ್ಲ. ಲೋನ್ ಹಣವೂ ಸಿಕ್ಕಿಲ್ಲ. ಇದರಿಂದ ಇಂಗು ತಿಂದ ಮಂಗನಂತಾದ ವ್ಯಕ್ತಿ ತಾನು ಮೋಸ ಹೋದ ಅರಿವಾಗುತ್ತಲೇ ಉರ್ವಾದಲ್ಲಿ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾರ್ಚ್ 13ರಿಂದ ಎಪ್ರಿಲ್ 3ರ ನಡುವೆ ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

A person who has been cheated of Rs 8.78 lac in an online money doubling ponzi scheme has filed a complaint in this regard with the police. On March 13, an unidentified person from the number +447468726354 sent the complainant a WhatsApp message regarding a part-time job opening.