ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಗುಂಡೇಟಿಗೆ ಬಲಿ, ಪತ್ರಕರ್ತರ ಸೋಗಿನಲ್ಲಿ ಶೂಟೌಟ್ ! 

16-04-23 02:00 pm       HK News Desk   ಕ್ರೈಂ

ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಗುಂಡೇಟಿಗೆ ಬಲಿಯಾಗಿದ್ದಾನೆ. ಪೊಲೀಸ್ ಭದ್ರತೆಯಲ್ಲಿ ಸೋದರ ಅಶ್ರಫ್ ಅಹ್ಮದ್ ಜೊತೆಗೆ ಅತೀಕ್ ಅಹ್ಮದ್ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದಾಗಲೇ ಮಾಧ್ಯಮದ ಸೋಗಿನಲ್ಲಿ ಹತ್ತಿರ ಬಂದಿದ್ದ ಆಗಂತುಕರು ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ. 

ಲಕ್ನೋ, ಎ.16 : ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಗುಂಡೇಟಿಗೆ ಬಲಿಯಾಗಿದ್ದಾನೆ. ಪೊಲೀಸ್ ಭದ್ರತೆಯಲ್ಲಿ ಸೋದರ ಅಶ್ರಫ್ ಅಹ್ಮದ್ ಜೊತೆಗೆ ಅತೀಕ್ ಅಹ್ಮದ್ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದಾಗಲೇ ಮಾಧ್ಯಮದ ಸೋಗಿನಲ್ಲಿ ಹತ್ತಿರ ಬಂದಿದ್ದ ಆಗಂತುಕರು ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ. 

ಇಬ್ಬರನ್ನು ಬಂಧಿಸಿ ಪೊಲೀಸರು ವೈದ್ಯಕೀಯ ಚಿಕಿತ್ಸೆಗಾಗಿ ಆರೋಪಿಗಳನ್ನು ಪ್ರಯಾಗರಾಜ್‌ಗೆ ಕರೆದೊಯ್ಯುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಗಿದೆ. ಕಳೆದ ಫೆಬ್ರವರಿಯಲ್ಲಿ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್‌ ಮಗ ಅಸದ್ ಅಹ್ಮದ್‌ನನ್ನು ಮೊನ್ನೆಯಷ್ಟೇ ಹತ್ಯೆ ಮಾಡಲಾಗಿತ್ತು. ಒಂದು ದಿನದ ನಂತರದಲ್ಲಿ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತೀವ್ರ ಸುದ್ದಿ ಮಾಡಿದ್ದ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಇವರಿಬ್ಬರು ಆರೋಪಿಗಳಾಗಿದ್ದರು. 

ಪೊಲೀಸರ ಎದುರಲ್ಲೇ ಹತ್ಯೆ 

ಪ್ರಯಾಗರಾಜ್‌ ನಗರದಲ್ಲಿರುವ ವೈದ್ಯಕೀಯ ಕಾಲೇಜು ಬಳಿ ಗುಂಡಿನ ದಾಳಿ ನಡೆದಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮದ ವ್ಯಕ್ತಿಗಳು ಅಡ್ಡಗಟ್ಟಿದ್ದಾರೆ. ಈ ವೇಳೆ, ಪೊಲೀಸರ ಸರ್ಪಗಾವಲು ಇದ್ದಂತೆಯೇ ಅತೀಕ್ ಅಹ್ಮದ್ ಮಾಧ್ಯಮಕ್ಕೆ ಹೇಳಿಕೆ ನೀಡತೊಡಗಿದ್ದ. ಮಾಧ್ಯಮದ ಮಂದಿ ಸುತ್ತುವರಿದಿರುವಾಗಲೇ ಮೂವರು ಬೈಕಿನಲ್ಲಿ ಬಂದು ಗುಂಪಿನೊಳಗೆ ನುಸುಳಿದ್ದು ಹಿಂಬದಿಯಿಂದ ಇಬ್ಬರ ತಲೆಗೆ ಗುರಿಯಿಟ್ಟು ಶೂಟ್ ಮಾಡಿದ್ದಾರೆ. ಒಂದ್ಕಡೆ ಅತೀಕ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಅಹ್ಮದ್‌ ಮುಂದೆ ಮೈಕ್ ಹಿಡಿದು ಮಾಧ್ಯಮದವರು, ಪ್ರಶ್ನೆ ಕೇಳುತ್ತಿದ್ದರು. ಅವರನ್ನು ಪೊಲೀಸರು ಸುತ್ತುವರೆದಿದ್ದಾಗಲೇ ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಸನ್ನಿ, ಲವ್ಲೇಶ್ ಮತ್ತು ಅರುಣ್ ಎಂಬವರನ್ನು ಬಂಧಿಸಲಾಗಿದೆ. 

Atiq Ahmed killing LIVE: Three accused 'wanted to become big mafias',  stayed in Prayagraj hotel for 48 hours

Atiq, Ashraf murder: Shooters posed as mediapersons, high alert across UP |  What we know so far - India Today

ಅತೀಕ್ ಅಹ್ಮದ್​ ಯಾರು?

ಆಗಸ್ಟ್ 10, 1962 ರಂದು ಜನಿಸಿದ್ದ ಅತೀಕ್​ ಅಹ್ಮದ್​ ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಸಂಸದನಾಗಿದ್ದ. ರಾಜಕೀಯಕ್ಕೆ ಬರುವ ಮುನ್ನ ಗ್ಯಾಂಗ್​ಸ್ಟರ್ ಆಗಿ ಗುರುತಿಸಿಕೊಂಡಿದ್ದ. ಅತೀಕ್ ಅಹ್ಮದ್​ ಅಲಹಾಬಾದ್ ಪಶ್ಚಿಮ ಕ್ಷೇತ್ರದಿಂದ ಸತತ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ದಾಖಲೆ ಸೃಷ್ಟಿಸಿದ್ದ. ಜೊತೆಗೆ 2004 ರಿಂದ 2009ರ ವರೆಗೆ ಎಸ್​ಪಿ ಪಕ್ಷದಿಂದಲೇ ಸಂಸದನಾಗಿದ್ದ.

Gangster-turned-politician Atiq Ahmad, brother shot dead; 3 held , Atiq  Ahmad shot dead, UP, encounter killing

ಮೂರೇ ತಿಂಗಳಿಗೆ ರಾಜು ಪಾಲ್ ಕೊಲೆ

ಅಲಹಾಬಾದ್ (ಪಶ್ಚಿಮ) ಈ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಆತೀಕ್, ಫುಲ್ಬಾರ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಅಲಹಾಬಾದ್​ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಉಪ ಚುನಾವಣೆಯಲ್ಲಿ ಆತೀಕ್ ಅಹ್ಮದ್ ಸಹೋದರ  ಅಶ್ರಫ್ ಸ್ಪರ್ಧಿಸಿದ್ದರು. ಆದರೆ ರಾಜು ಪಾಲ್​ ತಮ್ಮ ಮೊದಲ ಚುನಾವಣೆಯಲ್ಲಿಯೇ ಅಶ್ರಫ್ ನನ್ನು ಸೋಲಿಸಿದ್ದರು. ಕ್ಷೇತ್ರದ ಶಾಸಕರಾಗಿ ಗೆಲುವು ಕಂಡ ಮೂರೇ ತಿಂಗಳಿಗೆ ರಾಜು ಪಾಲ್ ಕೊಲೆ ನಡೆದಿತ್ತು. ಅತೀಕ್ ಅಹ್ಮದ್ ಸೋದರರು ಸೇರಿ ಕೊಲೆ ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು

Atiq Ahmed, the Uttar Pradesh gangster who faced at least 100 criminal cases, and his brother Ashraf Ahmed were shot dead on camera while they were being taken for a medical check-up in Uttar Pradesh's Prayagraj last night.