ಹಾವೇರಿ ; 6.90 ಕೋಟಿ ಮೌಲ್ಯದ 11 ಕೇಜಿ ಚಿನ್ನ, 70 ಕೇಜಿ ಬೆಳ್ಳಿ ಜಪ್ತಿ , ದಾಖಲೆ ಇಲ್ಲದೆ ಸಾಗಿಸುತ್ತಿದ್ದಾಗ ವಶಕ್ಕೆ  

19-04-23 11:11 am       HK News Desk   ಕ್ರೈಂ

ಸಿಎಂ ಬೊಮ್ಮಾಯಿ ತವರು ಕ್ಷೇತ್ರ, ಹಾವೇರಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರು. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾವೇರಿ, ಎ.19: ಸಿಎಂ ಬೊಮ್ಮಾಯಿ ತವರು ಕ್ಷೇತ್ರ, ಹಾವೇರಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರು. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿ ನಗರದ ಹೊರವಲಯದ ಅಜ್ಜಯ್ಯ ಗುಡಿ ಚೆಕ್ ಪೋಸ್ಟ್  ಬಳಿ 6 ಕೋಟಿ 90 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಚೆಕ್ ಪೊಸ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. 

ಹುಬ್ಬಳ್ಳಿಯಿಂದ ಹಾವೇರಿ ಮತ್ತು ದಾವಣಗೆರೆಯ ಚಿನ್ನದ ಅಂಗಡಿಗಳಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪೂರೈಸುತ್ತಿದ್ದ  ವಾಹನ ವಶಕ್ಕೆ ಪಡೆಯಲಾಗಿದೆ. 11 ಕೆಜೆಯಷ್ಟು ಚಿನ್ನ, 70 ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನ ವಾಹನದಲ್ಲಿ ಸಾಗಿಸುತ್ತಿದ್ದರು. 

ಖರೀದಿಸಿದ ಬಿಲ್ ಗಳು ಇದ್ದರೂ, ನಿಖರವಾಗಿ ಚಿನ್ನಾಭರಣಗಳನ್ನ ಯಾವ ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನೋ ದಾಖಲೆ ಇರಲಿಲ್ಲ. ಹಾವೇರಿ ಎಸ್.ಎಸ್.ಟಿ ತಂಡದ ಅಧಿಕಾರಿಗಳು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. 

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮಿತಿಗೆ ಚಿನ್ನಾಭರಣ ವರ್ಗಾವಣೆ ಮಾಡಲಾಗಿದೆ. ಹಾವೇರಿ ಗ್ರಾಮೀಣ ಠಾಣೆಯ  ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Haveri 6.90 crores worth 11 kilo gold seized without documents