ಬ್ರೇಕಿಂಗ್ ನ್ಯೂಸ್
02-05-23 07:30 pm HK News Desk ಕ್ರೈಂ
ಹೊಸದಿಲ್ಲಿ, ಮೇ. 2: ದಿಲ್ಲಿಯ ತಿಹಾರ್ ಜೈಲಿನ ಒಳಗೇ ನಡೆದ ಗ್ಯಾಂಗ್‌ವಾರ್‌ನಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಟಿಲ್ಲು ತಾಜ್‌ಪುರಿಯಾನನ್ನು ಆತನ ಎದುರಾಳಿ ಗ್ಯಾಂಗ್ ಸದಸ್ಯರು ಮಂಗಳವಾರ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆತನ ದೇಹದ ಮೇಲೆ 92 ಗಾಯದ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ.
ಟಿಲ್ಲು ತಾಜ್‌ಪುರಿಯಾ ಅಲಿಯಾಸ್ ಸುನೀಲ್ ಮಾನ್ ಮೇಲೆ ಗ್ಯಾಂಗ್‌ಸ್ಟರ್ ಯೋಗೇಶ್ ತುಂಡಾ ಹಾಗೂ ಆತನ ಸಹಚರರು ಹರಿತವಾದ ಆಯುಧಗಳಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ. ಭಾರಿ ಭದ್ರತೆಯ ಕಾರಾಗೃಹದಲ್ಲಿ ನಡೆದ ಈ ಘಟನೆಯ ಜೈಲಿನ ಒಳಗಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.
ಮತ್ತೊಬ್ಬ ಕೈದಿ ರೋಹಿತ್ ಎಂಬಾತ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಆತ ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.
ಯೋಗೇಶ್ ತುಂಡಾ, ದೀಪಲ್ ತೀತರ್, ರಿಯಾಜ್ ಖಾನ್ ಮತ್ತು ರಾಜೇಶ್, ಕಾರಾಗೃಹದ ಮೊದಲ ಮಹಡಿಯಲ್ಲಿನ ತಮ್ಮ ವಾರ್ಡ್‌ನ ಕಬ್ಬಿಣದ ಕಂಬಿಗಳನ್ನು ಕಿತ್ತಿದ್ದರು. ತನ್ನ ಗ್ಯಾಂಗ್‌ನ ಇತರೆ ಸದಸ್ಯರ ಜತೆ ಕೆಳ ಮಹಡಿಯಲ್ಲಿ ಕುಳಿತಿದ್ದ ಟಿಲ್ಲು ಮೇಲೆ ಆ ಕಬ್ಬಿಣದ ರಾಡುಗಳಿಂದ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡೀ ಘಟನೆ ಸಿನಿಮೀಯ ರೀತಿಯಲ್ಲಿ ನಡೆದಿದೆ. ಟಿಲ್ಲುವಿನ ಎದುರಾಳಿ ಗ್ಯಾಂಗ್‌ನ ನಾಲ್ವರು ಸದಸ್ಯರು ಬೆಡ್‌ಶೀಟ್ ಬಳಸಿ ಕೆಳಮಹಡಿಗೆ ಇಳಿದಿದ್ದರು.
ಜಿತೇಂದರ್ ಗೋಗಿಯ ಹತ್ಯೆಗೆ ಪ್ರತೀಕಾರವಾಗಿ ಟಿಲ್ಲುವನ್ನು ಕೊಲ್ಲಲಾಗಿದೆ ಎಂದು ಜೈಲಿನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಗೋಗಿ ಗ್ಯಾಂಗ್‌ನ ಈ ನಾಲ್ವರು ಗ್ಯಾಂಗ್‌ಸ್ಟರ್‌ಗಳನ್ನು ಮೊದಲ ಮಹಡಿಯ ಜೈಲು ಸಂಖ್ಯೆ 9ರಲ್ಲಿ ಇರಿಸಲಾಗಿತ್ತು.
ಟಿಲ್ಲು ಹತ್ಯೆಯಲ್ಲಿ ರೋಹಿತ್ ಮೋಯಿ ಕೈವಾಡದ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ರೋಹಿತ್ ಮೋಯಿ, ಕೊಲೆಯಾದ ಗೋಗಿಯ ಬಲಗೈ ಬಂಟನಾಗಿದ್ದ. ಗೋಗಿ ಗ್ಯಾಂಗ್‌ನ ಅನೇಕ ಗ್ಯಾಂಗ್‌ಸ್ಟರ್‌ಗಳು ತಿಹಾರ ಜೈಲಿನಲ್ಲಿದ್ದಾರೆ. ಗೋಗಿಯ ಗ್ಯಾಂಗ್ ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಪರವಾಗಿ ಕೆಲಸ ಮಾಡುತ್ತದೆ ಎಂದೂ ಹೇಳಲಾಗುತ್ತಿದೆ.
ಗೋಗಿ ಗ್ಯಾಂಗ್‌ನ ನೇತೃತ್ವವನ್ನು ದೀಪಕ್ ಬಾಕ್ಸರ್ ವಹಿಸಿದ್ದಾನೆ. ಈತನನ್ನು ದಿಲ್ಲಿ ಪೊಲೀಸ್ ವಿಶೇಷ ಘಟಕ ಮೆಕ್ಸಿಕೋದಲ್ಲಿ ಬಂಧಿಸಿತ್ತು. ಪ್ರಸ್ತುತ ಆತ ಕೂಡ ತಿಹಾರ್ ಜೈಲಿನಲ್ಲಿದ್ದಾನೆ. ಕಳೆದ ವರ್ಷದ ಆಗಸ್ಟ್ 26ರಂದು ಟಿಲ್ಲು ಸೇರಿದಂತೆ ಅನೇಕ ಗ್ಯಾಂಗ್‌ಸ್ಟರ್‌ಗಳ ವಿರುದ್ಧ ಎನ್‌ಐಎ ಎಫ್‌ಐಆರ್ ದಾಖಲಿಸಿತ್ತು. ವಿದೇಶದಲ್ಲಿರುವ ಗ್ಯಾಂಗ್‌ಸ್ಟರ್‌ಗಳ ಸಂಚಿನೊಂದಿಗೆ ಈ ಗ್ಯಾಂಗ್‌ಸ್ಟರ್ ದೇಶದ ಒಳಗೆ ಉಗ್ರ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿತ್ತು.
Jailed gangster Sunil Balyan alias Tillu Tajpuriya who was accused in a Delhi shootout case was beaten to death by rival gangsters inside Tihar Jail Tuesday morning, the police said. The police have named four inmates – gangster Yogesh Tonda and his associates Deepak Titar, Rajesh Singh, and Riyaz Khan – as accused who thrashed the gangster with iron rods, officials said.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm