ಬ್ರೇಕಿಂಗ್ ನ್ಯೂಸ್
03-05-23 10:04 pm HK News Desk ಕ್ರೈಂ
ಮುಂಬೈ, ಮೇ 3 : 12ನೇ ತರಗತಿಗೇ ಕ್ಲಾಸಿಗೆ ಚಕ್ಕರ್ ಹೊಡೆದು ಆನಂತರ ಸೈಬರ್ ಅಪರಾಧವನ್ನೇ ಕಸುಬಾಗಿಸ್ಕೊಂಡ ವ್ಯಕ್ತಿಯೊಬ್ಬ ಕೋಟ್ಯಧಿಪತಿ ಆಗಿದ್ದಲ್ಲದೆ, ದಿನಕ್ಕೆ 5 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದ ಎನ್ನುವ ಮಾಹಿತಿಯನ್ನು ಮುಂಬೈ ಪೊಲೀಸರು ಪತ್ತೆಹಚ್ಚಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಸೋಗಿನಲ್ಲಿ ದೇಶಾದ್ಯಂತ ಜನಸಾಮಾನ್ಯರ ಹಣ ದೋಚುತ್ತಿದ್ದ ಸೈಬರ್ ಕಳ್ಳರ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಜಾಲದ ಮಾಸ್ಟರ್ ಮೈಂಡ್ 49 ವರ್ಷದ ಶ್ರೀನಿವಾಸ್ ರಾವ್ ದಾದಿ ಎಂಬಾತನನ್ನು ಪೊಲೀಸರು ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ನಿಂದ ಕಸ್ಟಡಿಗೆ ಪಡೆದಿದ್ದಾರೆ.
ಶ್ರೀನಿವಾಸ್ ರಾವ್ ದಾದಿ ಜೊತೆಗೆ ಥಾಣೆಯಲ್ಲಿ ಇಬ್ಬರು ಮತ್ತು ಕೋಲ್ಕತ್ತಾದಲ್ಲಿ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದಾದಿ ಮೇಲ್ನೋಟಕ್ಕೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತೆ ನಟಿಸುತ್ತಿದ್ದ. ತನ್ನ ಇನ್ನಿತರ ಜಾಲದ ಸದಸ್ಯರ ಜೊತೆಗೆ ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದ. ಶ್ರೀನಿವಾಸ ರಾವ್ ಬಳಸುತ್ತಿದ್ದ ಸುಮಾರು 40 ಬ್ಯಾಂಕ್ ಖಾತೆಗಳನ್ನು ಈವರೆಗೆ ಪೊಲೀಸರು ಜಪ್ತಿ ಮಾಡಿದ್ದು, 1.5 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಹೆಚ್ಚಾಗಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದರು. ಪೋಲೀಸ್ ಅಧಿಕಾರಿಗಳಂತೆ ನಟಿಸಿ ಕೊರಿಯರ್ ನಲ್ಲಿ ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾಗಿ ಹೇಳಿ, ಬ್ಯಾಂಕ್ ಅಥವಾ ಆದಾಯ ತೆರಿಗೆ ಸಂಬಂಧಿತ ವಿವರಗಳನ್ನು ಕೇಳುತ್ತಾರೆ. ಪೊಲೀಸರಿಂದ ಕರೆ ಬಂದಿದೆ ಎಂದರೆ ಹೆಚ್ಚಾಗಿ ಜನರು ಭಯಗೊಂಡು ತಮ್ಮ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುತ್ತಾರೆ. ಸಂತ್ರಸ್ತರಿಂದ OTP ನಂಬರ್ ಪಡೆದು ಖಾತೆಯಿಂದಲೇ ಹಣ ಕೀಳುತ್ತಿದ್ದರು. ಇವರ ಸೈಬರ್ ಗ್ಯಾಂಗ್ ದೇಶಾದ್ಯಂತ ಸಾವಿರಾರು ಮಂದಿಗೆ ವಂಚಿಸಿದ್ದಲ್ಲದೆ, ಕೋಟ್ಯಂತರ ರೂಪಾಯಿ ಹಣ ಗಳಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಗ್ಯಾಂಗ್ ಸದಸ್ಯರು ದೋಚಿದ ಎಲ್ಲಾ ಹಣವನ್ನು ಶ್ರೀನಿವಾಸ ರಾವ್ ಖಾತೆಗಳಿಗೆ ಕಳುಹಿಸುತ್ತಿದ್ದರು. ಈ ಖಾತೆಗಳಲ್ಲಿ ದಿನಕ್ಕೆ 5 ಕೋಟಿಯಿಂದ 10 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆನಂತರ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ, ವ್ಯಾಲೆಟ್ ರೂಪದಲ್ಲಿ ವಿದೇಶಕ್ಕೆ ರವಾನೆ ಮಾಡುತ್ತಿದ್ದರು.
Mumbai police have exposed a ring of cybercriminals that stole money from people from across the country by posing as police personnel and arrested its kingpin, who has studied till Class 12 and used to do transactions of more than Rs 5 crore a day in his accounts, an official said on Wednesday.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm