ಮಣಿಪಾಲ ಪೊಲೀಸರ ಹೆಸರಿನಲ್ಲಿ ಹಣ ವಸೂಲಿ ; ಆರೋಪಿಗಳು ವಶಕ್ಕೆ 

28-05-23 02:26 pm       Udupi Correspondent   ಕ್ರೈಂ

ಪೊಲೀಸರ ಹೆಸರಿನಲ್ಲಿ ಹಣ ವಸೂಲು ಮಾಡುತ್ತಿದ್ದ ಆರೋಪಿಗಳನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಡುಪಿ, ಮೇ 28 : ಪೊಲೀಸರ ಹೆಸರಿನಲ್ಲಿ ಹಣ ವಸೂಲು ಮಾಡುತ್ತಿದ್ದ ಆರೋಪಿಗಳನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಶಿರ್ವ ಮೂಲದ ಮಂಜುನಾಥ ಅವರು ಮಣಿಪಾಲದ ಅರ್ಬಿ ಫಾಲ್ಸ್‌ ಬಳಿ ಸ್ನೇಹಿತರೊಂದಿಗೆ ಮೇ 26ರಂದು ಮಾತನಾಡುತ್ತಿರುವ ವೇಳೆ ಆರೋಪಿಗಳಾದ ಹನುಮಂತಪ್ಪ ಹಾಗೂ ಮಹಾದೇವಪ್ಪ ಅವರು ಸ್ಥಳಕ್ಕೆ ಆಗಮಿಸಿ, ನಾವು ಮಣಿಪಾಲ ಠಾಣೆಯ ಪೊಲೀಸ್, ನೀವು ಇಲ್ಲಿ ಯಾಕೆ ಕುಳಿತಿದ್ದೀರಿ? ನಿಮ್ಮ ಮೇಲೆ ಕೇಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಮಣಿಪಾಲ ಠಾಣೆಯ ಎಸ್‌ಐ ಅವರಿಗೆ ಫೋನ್ ಮಾಡುತ್ತೇನೆ ಅವರು ಹೇಳಿದರೆ ಬಿಡುತ್ತೇನೆ ಎಂದು ಹೇಳಿ ಮತ್ತೋರ್ವ ಆರೋಪಿ ಲಕ್ಷ್ಮಣ ಕುಪ್ಪಗೊಂಡ ಅವರಿಗೆ ಕರೆ ಮಾಡಿ ಲೌಡ್‌ ಸ್ಪೀಕರ್ ಇಟ್ಟು ಮಾತನಾಡಿದ್ದಾರೆ. 

ಈ ವೇಳೆ ಆ ವ್ಯಕ್ತಿ ತಾನು ಮಣಿಪಾಲ ಠಾಣೆಯ ಎಸ್‌ಐ ಮಾತನಾಡುತ್ತಿದ್ದೇನೆ. 5 ಸಾವಿರ ರೂ. ಅವರಿಗೆ ನೀಡು, ಇಲ್ಲವಾದರೆ ಜೀಪು ಕಳುಹಿಸಿ ಪೊಲೀಸ್ ಠಾಣೆಗೆ ಕರೆಸಿಕೊಳ್ಳುತ್ತೇನೆ ಎಂದು ಬೆದರಿಸಿದ್ದಾನೆ. ಬಳಿಕ ಮಂಜುನಾಥ ಅವರು ಆರೋಪಿಗಳು ಸೂಚಿಸಿದ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಅನುಮಾನಗೊಂಡ ಮಂಜುನಾಥ ಅವರು ಮಣಿಪಾಲ ಠಾಣೆಗೆ ಬಂದು ದೂರು ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Udupi Two arrested for looting money posing as Manipal Police. The duo also threatned the victims of arresting and have transferred Rs 5000 via google pay to thier account.