ಬ್ರೇಕಿಂಗ್ ನ್ಯೂಸ್
30-10-20 04:06 pm Headline Karnataka News Network ಕ್ರೈಂ
ಲಕ್ನೋ, ಅಕ್ಟೋಬರ್ 30: ಅಪ್ರಾಪ್ತ ವಯಸ್ಸಿನ ತರುಣ ಸಿಟ್ಟಿನ ಭರದಲ್ಲಿ ತಂದೆಯನ್ನೇ ಕೊಲೆಗೈದ ಘಟನೆ ಮಥುರಾದಲ್ಲಿ ನಡೆದಿದೆ.
ಮನೋಜ್ ಮಿಶ್ರಾ ಮಗನಿಂದಲೇ ಕೊಲೆಯಾದ ತಂದೆ. 12ನೇ ತರಗತಿ ಓದುತ್ತಿದ್ದ ಯುವಕ ತಂದೆ ಗದರಿದ ಎಂಬ ಕಾರಣಕ್ಕೆ ಅಸಮಾಧಾನಗೊಂಡು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದಿದ್ದಾನೆ. ಅಲ್ಲದೇ ತಂದೆ ಸತ್ತ ವಿಷಯ ಖಚಿತ ಪಡಿಸಿಕೊಳ್ಳಲು ಬಟ್ಟೆಯಿಂದ ಕತ್ತು ಹಿಸುಕಿದ್ದಾನೆ.
ಮೇ 2 ರಂದು ತಂದೆಯನ್ನು ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸಲು ತಾಯಿಯ ನೆರವು ಪಡೆದಿದ್ದ. ಸ್ಕೂಟಿಯಲ್ಲಿ ಮನೆಯಿಂದ ಕೆಲವು ಕಿಮೀ ದೂರಕ್ಕೆ ಶವ ಹೊತ್ತೊಯ್ದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ. ಬಳಿಕ ಏನೂ ತಿಳಿಯದಂತೆ ಮನೆಗೆ ವಾಪಸ್ ಆಗಿದ್ದ.
ಮೇ 3ರಂದು ಪೊಲೀಸರಿಗೆ ಅರ್ಧ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಇತ್ತ ಮೇ 27 ರಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಮನೋಜ್ ನಾಪತ್ತೆ ಕೇಸು ದಾಖಲಿಸಿದ್ದರು. ಬಳಿಕ ಅನಾಥವಾಗಿ ಪತ್ತೆಯಾಗಿದ್ದ ಮೃತದೇಹವನ್ನು ಆತನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಗುರುತಿಸಿದ್ದರು. ಕೂಡಲೇ ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು, ಕೊಲೆಗಾರ ಮೃತ ವ್ಯಕ್ತಿಯ ಮಗನೇ ಎಂದು ಸಾಬೀತು ಮಾಡಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಪೊಲೀಸರ ಬಗ್ಗೆ ಸಂಶಯಪಟ್ಟ ಪುತ್ರ, ಯಾವ ಹಿನ್ನೆಲೆಯಲ್ಲಿ ತನ್ನನ್ನು ವಿಚಾರಣೆ ಮಾಡುತ್ತಿದ್ದಾಗಿ ಪ್ರಶ್ನೆ ಮಾಡಿದ್ದಾನೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶವನ್ನು ಹೇಳಿದ್ದ ಎಂದು ಮಥುರಾ ಎಸ್ಪಿ ಉದಯ್ ಶಂಕರ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸದ್ಯ ಪೊಲೀಸರು ಅಪ್ರಾಪ್ತ ಬಾಲಕ ಹಾಗೂ ಆತನ ತಾಯಿ 49 ವರ್ಷದ ಸಂಗೀತಾ ಮಿಶ್ರಾಳನ್ನು ಕೊಲೆ ಆರೋಪದ ಅಡಿ ಬಂಧಿಸಿದ್ದಾರೆ. ಕೊಲೆಯ ಬಳಿಕ ತಂದೆಯ ದೇಹವನ್ನು ನಾಶಪಡಿಸಲು ಬಾಲಕ ಗೂಗಲ್ ಹುಡುಕಾಡಿದ್ದ. 100 ಕ್ಕೂ ಹೆಚ್ಚು ಬಾರಿ ಕ್ರೈಂ ಪ್ಯಾಟ್ರೋಲ್ ಎಂಬ ಹಿಂದಿ ಧಾರಾವಾಹಿಯನ್ನು ನೋಡಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.
In a shocking incident, a 17-year-old boy in Mathura killed his father in a fit of rage and later watched TV serial 'Crime Patrol' to learn how to destroy any evidence of the murder. Also Read 17-Year Old Boy Kills His Father, Watches 'Crime Patrol' 100 Times to Learn How to Destroy Evidence
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm