ಪಕ್ಕದ ಮನೆ ಆಂಟಿ ಸ್ನಾನ ಮಾಡುವುದನ್ನು ಆಗಾಗ ಇಣುಕಿ ನೋಡುತ್ತಿದ್ದ ವಿಕೃತಕಾಮಿ ಬಂಧನ 

11-06-23 01:46 pm       Bangalore Correspondent   ಕ್ರೈಂ

ಸಿಲಿಕಾನ್ ಸಿಟಿಯಲ್ಲಿ ಕಾಮುಕರ ದುರ್ವತನೆ ಎಲ್ಲೆ ಮೀರುತ್ತಿದೆ. ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಸ್ನಾನಗೃಹದಲ್ಲಿ ಇಣುಕಿ ನೋಡುತ್ತಿದ್ದ ವಿಕೃತ ಮನಸ್ಥಿತಿಯ ಕಾಮುಕನನ್ನು ಮಾರತ್ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌.

ಬೆಂಗಳೂರು, ಜೂನ್ 11: ಸಿಲಿಕಾನ್ ಸಿಟಿಯಲ್ಲಿ ಕಾಮುಕರ ದುರ್ವತನೆ ಎಲ್ಲೆ ಮೀರುತ್ತಿದೆ. ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಸ್ನಾನಗೃಹದಲ್ಲಿ ಇಣುಕಿ ನೋಡುತ್ತಿದ್ದ ವಿಕೃತ ಮನಸ್ಥಿತಿಯ ಕಾಮುಕನನ್ನು ಮಾರತ್ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಬಂಧಿತನನ್ನು ನಿತಿನ್ ಎಂದು ಗುರುತಿಸಲಾಗಿದೆ. 

ಮಾರತ್ತಹಳ್ಳಿಯ ಮುನ್ನೇಕೊಳಲುನಲ್ಲಿ ಬಾಡಿಗೆ ಮನೆಯಲ್ಲಿದ್ದ ನಿತಿನ್ ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವುದನ್ನು ನಿತಿನ್ ಕಿಟಕಿಯಿಂದ ಆಗಾಗ ನೋಡುತ್ತಿದ್ದ. ಆದ್ರೆ, ಮಹಿಳೆ ಅದನ್ನು ಗಮನಿಸಿರಲಿಲ್ಲ,  ಈ ವೇಳೆ ಆರೋಪಿ ನಿತಿನ್ ನನ್ನು ಕಂಡು ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಮಹಿಳೆ ಕೂಗಿಕೊಂಡಿದ್ದನ್ನು ಕೇಳಿದ ಆಕೆಯ ಕುಟುಂಬಸ್ಥರು ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾರತ್​​ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್  ದಾಖಲಾಗಿದೆ.

Bengalore youth arrested for peeping into bathroom. The woman told police she was taking bath around 9.10am when she saw someone peeping at her through the ventilator. She immediately walked out and alerted her parents.