ಬ್ರೇಕಿಂಗ್ ನ್ಯೂಸ್
31-10-20 02:27 pm Headline Karnataka News Network ಕ್ರೈಂ
ಡಬ್ಲಿನ್, ಅಕ್ಟೋಬರ್ 31 : ಮೈಸೂರು ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನ ಬರ್ಬರವಾಗಿ ಹತ್ಯೆಗೈದ ಘಟನೆ ಐರ್ಲೆಂಡಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೀಮಾ ಬಾನು ಸೈಯದ್ (37), ಮಗಳು ಅಸ್ಫಿರಾ ರಿಝಾ(11) ಮಗ ಫೈಜಾನ್ ಸೈಯದ್(06) ದಕ್ಷಿಣ ಡಬ್ಲಿನ್ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಶುಕ್ರವಾರ ಕಂಡುಬಂದಿದ್ದಾರೆ. ಐದು ದಿನಗಳ ಹಿಂದೆ ಕೊಲೆಗೈದಿರ ಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಇಬ್ಬರು ಮಕ್ಕಳು ಒಂದು ಕೊಠಡಿಯಲ್ಲಿ, ತಾಯಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸೀಮಾ ಬಾನು ವರ್ಷದ ಹಿಂದಷ್ಟೇ ಮೈಸೂರಿನಿಂದ ಐರ್ಲೆಂಡ್ ತೆರಳಿದ್ದರು. ಘಟನೆ ಬೆಳಕಿಗೆ ಬಂದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಸೀಮಾಳ ಗಂಡ ಸಮೀರ್ ಸೈಯದ್ ಡಬ್ಲಿನ್ ನಗರದಿಂದ ಹೊರಗಿದ್ದ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಮೀರ್ ಸೈಯದ್ ಮೂಲತಃ ಮೈಸೂರಿನ ನಿವಾಸಿಯಾಗಿದ್ದು ದುಬೈನಲ್ಲಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ದುಬೈನಿಂದ ಐರ್ಲೆಂಡ್ ತೆರಳಿದ್ದು ಅಲ್ಲಿ ಹೊಸ ಉದ್ಯೋಗ ಸಿಕ್ಕಿದ್ದರಿಂದ ಕುಟುಂಬದ ಜೊತೆ ಐರ್ಲೆಂಡ್ ತೆರಳಿದ್ದರು.
ಕಳೆದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ. ಈ ಘಟನೆಯ ಬಳಿಕ ಸೀಮಾ ಅವರು ಕುಟುಂಬದ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆತನೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ತನಿಖೆ ಆರಂಭಗೊಂಡಿದ್ದು ಪತಿ ಸಹಕಾರ ನೀಡುತ್ತಿದ್ದಾರೆ.
ಮೈಸೂರಿನ ಸೀಮಾ ಬಾನು ಕುಟುಂಬಸ್ಥರು ಭಾರತೀಯ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿದ್ದು ಶವ ಊರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ತಾಯಿ, ಮಕ್ಕಳ ಹತ್ಯೆ ಬಗ್ಗೆ ಐರ್ಲೆಂಡಿನ ಭಾರತೀಯ ಪ್ರಾಧಿಕಾರ ಆಘಾತ ವ್ಯಕ್ತಪಡಿಸಿದೆ.
The brutal murders of a 37-year-old woman from Karnataka’s Mysuru and her two children have shocked a small suburb in South Dublin. 37-year-old Seema Banu Syed, her 11-year-old daughter Asfira Riza and 6-year-old son Faizan Syed were on Friday found strangled to death in their house in Llywellen Court in Ballinteer suburb of Ireland.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm