ಬ್ರೇಕಿಂಗ್ ನ್ಯೂಸ್
31-10-20 09:57 pm Mangalore Reporter ಕ್ರೈಂ
ಮಂಗಳೂರು, ಅಕ್ಟೋಬರ್ 31: ತುಳು ಚಿತ್ರನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣವನ್ನು ಕೊನೆಗೂ ಬಂಟ್ವಾಳ ಪೊಲೀಸರು ಭೇದಿಸಿದ್ದಾರೆ. ಸುರೇಂದ್ರ ಬಂಟ್ವಾಳ್ ನಿಂದ ಫೈನಾನ್ಸ್ ಹಣ ಪಡೆದವರೇ ಸೇರಿಕೊಂಡು ಆತನ ಕೊಲೆ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಹೊರಗೆಡವಿದ್ದಾರೆ.
ಪ್ರಕರಣ ಸಂಬಂಧಿಸಿ ಈವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬೆಂಗಳೂರಿನ ಜೈಲಿನಲ್ಲಿದ್ದ ಮಂಗಳೂರಿನ ರೌಡಿಶೀಟರ್ ಆಕಾಶ್ ಭವನ ಶರಣ್ ಈ ಕೊಲೆ ಮಾಡಿಸಿದ್ದಾನೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

ಸುರೇಂದ್ರ ಬಂಟ್ವಾಳ್ ಆಪ್ತ ಸ್ನೇಹಿತನಾಗಿದ್ದ ಸತೀಶ್ ಕುಲಾಲ್ ಮತ್ತು ಗಿರೀಶ್ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣದ ಚಿತ್ರಣ ಬಯಲಾಗಿದೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರದೀಪ್ ಕುಮಾರ್ ಅಲಿಯಾಸ್ ಪಪ್ಪು ಎಂಬಾತ ಸುರೇಂದ್ರನ ಸ್ನೇಹಿತನಾಗಿದ್ದು ಚಿನ್ನದ ಅಂಗಡಿ ಮಾಡುವುದಕ್ಕಾಗಿ ಹಣ ಪಡೆದುಕೊಂಡಿದ್ದ. ಅದರಲ್ಲಿ ಏಳು ಲಕ್ಷ ರೂಪಾಯಿ ಹಣ ನೀಡಲು ಬಾಕಿಯಿತ್ತು. ಅದಕ್ಕಾಗಿ ಕೊಲೆಗೆ ಸ್ಕೆಚ್ ಹಾಕಿದ್ದು ರೌಡಿ ಆಕಾಶಭವನ್ ಶರಣ್ ಮೂಲಕ ಕೃತ್ಯ ಮಾಡಿಸಿದ್ದಾನೆ. ಇದಕ್ಕಾಗಿ ಶರಣ್ ಗೆ ಬೇರೊಬ್ಬ ವ್ಯಕ್ತಿಯ ಮೂಲಕ ಎರಡು ಲಕ್ಷ ರೂಪಾಯಿ ನೀಡಿದ್ದಾನೆ. ಇದೇ ವೇಳೆ, ಸುರೇಂದ್ರನಿಂದ ಹಣ ಪಡೆದಿದ್ದ ವೆಂಕಪ್ಪ ಅಲಿಯಾಸ್ ವೆಂಕಟೇಶ್ ಸುರೇಂದ್ರನ ಕೊಲೆಗೆ ಸಹಕರಿಸಿದ್ದು ಅದಕ್ಕಾಗಿ ಸತೀಶ ಕುಲಾಲ್ ಗೆ 90 ಸಾವಿರ ರೂ. ನೀಡಿದ್ದ. ಇದಲ್ಲದೆ, ಬಂಟ್ವಾಳದ ಶರೀಫ್ ಅಲಿಯಾಸ್ ಸೈಯದ್ ಶರೀಫ್, ಸುರೇಂದ್ರನ ಜೊತೆಗೆ ವೈಯಕ್ತಿಕ ದ್ವೇಷ ಹೊಂದಿದ್ದು ಕೊಲೆ ಕೃತ್ಯಕ್ಕೆ ಸಹಕರಿಸಿದ್ದಾನೆ.

ಜೈಲಿನಿಂದಲೇ ಸ್ಕೆಚ್ ಹಾಕಿದ್ದ ಶರಣ್ !
ಎರಡು ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆಕಾಶಭವನ್ ಶರಣ್, ಜೈಲಿನಲ್ಲಿದ್ದುಕೊಂಡೇ ಸುರೇಂದ್ರನ ಕೊಲೆಗೆ ಸುಪಾರಿ ಪಡೆದು ಸ್ಕೆಚ್ ಹಾಕಿದ್ದ. ಸುರೇಂದ್ರ ಬಂಟ್ವಾಳ್ ಜೊತೆಗೆ ವೈಯಕ್ತಿಕ ದ್ವೇಷ ಹೊಂದಿದ್ದ ಶರಣ್, ಉಡುಪಿಯ ಹಿರಿಯಡ್ಕದಲ್ಲಿ ಇತ್ತೀಚೆಗೆ ನಡೆದ ಕಿಶನ್ ಹೆಗ್ಡೆ ಕೊಲೆಗೆ ಸುರೇಂದ್ರ ಬಂಟ್ವಾಳ್ ಸಹಾಯ ಮಾಡಿದ್ದಾನೆಂದು ಹೇಳಿ, ಆತನ ವಿರೋಧಿಗಳನ್ನು ಎತ್ತಿಕಟ್ಟಿದ್ದಾನೆ. ಸತೀಶ್ ಕುಲಾಲ್ ಮತ್ತು ಗಿರೀಶನಲ್ಲಿ ಕೊಲೆ ಮಾಡಿಸಲು ಹೇಳಿ ತಪ್ಪಿಸಿಕೊಳ್ಳಲು ಮಂಗಳೂರಿನ ಪಂಪ್ವೆಲ್ ನ ದಿವ್ಯರಾಜ್ ಮತ್ತು ಅನಿಲ್ ಎಂಬವರ ಮೂಲಕ ವಾಹನದ ವ್ಯವಸ್ಥೆ ಮಾಡಿಸಿದ್ದಾನೆ. ಅಲ್ಲದೆ, ಬೆಳ್ತಂಗಡಿಯ ಉಜಿರೆಯ ಪರಿಸರದಲ್ಲಿ ತಲೆಮರೆಸಿಕೊಂಡು ಇರಲು ರಾಜೇಶ್ ಎಂಬಾತ ಸಹಕರಿಸಿದ್ದಾನೆ. ತನ್ನ ಓಮ್ನಿ ವಾಹನವನ್ನು ಕೊಟ್ಟು ಪರಾರಿಯಾಗಲು ಸಹಕಾರ ನೀಡಿದ್ದಾನೆ. ಇವರೆಲ್ಲರನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ದಿವ್ಯರಾಜ್, ಈ ಹಿಂದೆ 2017ರಲ್ಲಿ ಬೆಂಜನಪದವಿನಲ್ಲಿ ನಡೆದ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಲ್ಲದೆ, ಕಿಶನ್ ಹೆಗ್ಡೆ ಕೊಲೆ ನಡೆಯುವಾಗ ಆತನ ಜೊತೆಗಿದ್ದು ಕಿಶನ್ ಆಪ್ತನಾಗಿದ್ದ.

ಆಕಾಶ್ ಭವನ್ ಶರಣ್ ವಿರುದ್ಧ ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. 5 ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದು, ಎರಡು ವರ್ಷಗಳ ಹಿಂದೆ ಮಣಿಪಾಲದ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬೆಂಗಳೂರಿನ ಜೈಲಿನಲ್ಲಿದ್ದ. ಇಲ್ಲಿ ವರೆಗೆ ಆರೋಪಿಗಳ ವಿಚಾರಣೆಯಲ್ಲಿ ಹಣಕಾಸಿನ ವಿಚಾರಕ್ಕೆ ಮತ್ತು ವೈಯಕ್ತಿಕ ದ್ವೇಷದಿಂದ ಕೃತ್ಯ ನಡೆಸಿರುವುದು ಕಂಡುಬಂದಿದ್ದು, ಆರೋಪಿಗಳನ್ನು ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋಟಿ ಹಣ ಎಲ್ಲಿ ಹೋಯ್ತು ??
ಕೊಲೆ ನಡೆದಿದ್ದ ಸಂದರ್ಭದಲ್ಲಿ ಸುರೇಂದ್ರನ ಫ್ಲ್ಯಾಟ್ನಲ್ಲಿ ಒಂದು ಕೋಟಿ ರೂಪಾಯಿ ನಗದು ಇತ್ತು ಎಂದು ಆತನ ತಾಯಿ ಎಸ್ಪಿಗೆ ದೂರು ನೀಡಿದ್ದರು. ಆತನ ಮೈಯಲ್ಲಿದ್ದ ಕೇಜಿಯಷ್ಟು ಬಂಗಾರ ಮತ್ತು ಹಣಕ್ಕಾಗಿಯೇ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರು ನೀಡಿರುವ ಹೇಳಿಕೆಯಲ್ಲಿ ಹಣ ಮತ್ತು ಬಂಗಾರದ ಬಗ್ಗೆ ಮಾಹಿತಿ ನೀಡಿಲ್ಲ. ಆರೋಪಿಗಳು ಸುರೇಂದ್ರನ ಬಳಿಯಿದ್ದ ಹಣವನ್ನು ಹೊತ್ತೊಯ್ದಿದ್ದರೇ, ಆತನ ಮೈಯಲ್ಲಿದ್ದ ಬಂಗಾರವನ್ನು ದೋಚಿದ್ದರೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
In connection to the Murder of Surendra Bantwal police have arrested 9 persons in which Akash Bhavan Sharan is the Master Mind confirms Banwal Police Team.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
25-05-26 11:00 pm
Mangalore Correspondent
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am