ಬ್ರೇಕಿಂಗ್ ನ್ಯೂಸ್
21-06-23 10:42 pm HK News Desk ಕ್ರೈಂ
ಅಹಮದಾಬಾದ್, ಜೂನ್ 21: ಸುಮಾರು 32 ಕೋಟಿ ರೂಪಾಯಿ ಮೌಲ್ಯದ 3.221 ಕೆ.ಜಿ ಕಪ್ಪು ಕೊಕೇನ್ ಸಾಗಿಸುತ್ತಿದ್ದ ಬ್ರೆಜಿಲ್ ಪ್ರಜೆಯೊಬ್ಬನನ್ನು ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಸಾವೊ ಪಾಲೊ ಬಂಧಿತ ಬ್ರೆಜಿಲ್ ಪ್ರಜೆ ಎಂದು ಗುರುತಿಸಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಕಿಟ್ ಬಳಸಿ ಶ್ವಾನ ದಳ ತಪಾಸಣೆ ನಡೆಸಿತು. ಆರಂಭದಲ್ಲಿ ಯಾವುದೇ ಪ್ರಯಾಣಿಕರ ಟ್ರಾಲಿ ಅಥವಾ ಕ್ಯಾಬಿನ್ ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬರಲಿಲ್ಲ. ಆದಾಗ್ಯೂ, ಬ್ಯಾಗ್ನ ತಳ ಭಾಗದಲ್ಲಿ ದಪ್ಪವಾದ ರಬ್ಬರ್ ಹೊಂದಿರುವುದನ್ನು ಕಂಡುಹಿಡಿಯಲಾಯಿತು. ಅದನ್ನು ಬಿಡಿಸಿ ನೋಡಿದಾಗ ಹರಳಿನಂತಹ ಕಪ್ಪು ವಸ್ತು ಪತ್ತೆಯಾಗಿದೆ.
ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕರೆಸಿ ಹರಳಿನ ಕಪ್ಪು ವಸ್ತುವನ್ನು ಪರೀಕ್ಷಿಸಲಾಯಿತು. ಆಗ ಕೊಕೇನ್ ಎಂದು ದೃಢಪಟ್ಟಿದೆ. ಇದರ ತೂಕವು 3.221 ಕೆ.ಜಿ ಇತ್ತು. ಈ ರೂಪದ ಕೊಕೇನ್ ಅನ್ನು ಇದ್ದಿಲು ಮತ್ತು ಇತರ ರಾಸಾಯನಿಕಗಳೊಂದಿಗೆ ಬೆರೆಸಲಾಗುತ್ತದೆ. ಇದು ಕಪ್ಪು ರಬ್ಬರಿನ ನೋಟ ನೀಡುತ್ತದೆ. ಕಳ್ಳತನದಿಂದ ಸಾಗಿಸಲು ಮತ್ತು ಶ್ವಾನ ದಳ ಮತ್ತು ಫೀಲ್ಡ್ ಟೆಸ್ಟಿಂಗ್ ಕಿಟ್‌ಗಳಿಂದ ಪತ್ತೆ ಹಚ್ಚುವಿಕೆ ತಪ್ಪಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.
In a rare seizure, 3.22 kg of designer drug 'black cocaine' has been recovered from a Brazilian national at Ahmedabad airport. The quantity of the drug seized is estimated to be worth ₹ 32 crore. A press release said 'black cocaine' is a designer drug made by mixing cocaine with charcoal and other chemicals to give it a black rubbery appearance and camouflage it. The process also helps evade detection by canines and field-testing kits.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm