ಬ್ರೇಕಿಂಗ್ ನ್ಯೂಸ್
11-07-23 10:18 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 11: ರಾಜಧಾನಿಯಲ್ಲಿ ಹಾಡಗಲಲ್ಲೇ ಡಬಲ್ ಮರ್ಡರ್ ನಡೆದಿದ್ದು, ಕಂಪನಿಯ ಮಾಜಿ ಉದ್ಯೋಗಿಯಿಂದಲೇ ಕಂಪನಿಯ ಸಿಇಒ ಹಾಗೂ ಎಂಡಿಯನ್ನ ಕೊಲೆ ಮಾಡಿದ್ದಾನೆ.
ಘಟನೆಯು ನಗರದ ಅಮೃತಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಕೊಲೆಯಾದ ವ್ಯಕ್ತಿಗಳು ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಫಣಿಂದ್ರ ಸುಬ್ರಹ್ಮಣ್ಯ ಮತ್ತು ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ (ಸಿಇಒ) ವಿನುಕುಮಾರ್ ಎಂದು ಗುರುತಿಸಲಾಗಿದೆ. ಅವರನ್ನು ಕಂಪನಿಯ ಮಾಜಿ ಉದ್ಯೋಗಿಯೂ ಆಗಿದ್ದ ಫೆಲಿಕ್ಸ್ ಎಂಬಾತ ಕೊಲೆ ಮಾಡಿದ್ದಾನೆ.
ಕಚೇರಿಯಲ್ಲಿಯೇ ಕೊಲೆ;
ಪಂಪಾ ಬಡವಾಣೆಯಲ್ಲಿರುವ ಏರೋನಿಕ್ಸ್ ಕಂಪನಿಗೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಆಗಮಿಸಿ ಪಣೀಂದ್ರ ಹಾಗೂ ವಿನುಕುಮಾರ್ ಮೇಲೆ ತಲ್ವಾರ್ನಿಂದ ಹಲ್ಲೆ ನಡೆಸಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ತಲ್ವಾರ್ ಮತ್ತು ಚಾಕುವಿನ ಇರಿತದಿಂದ ಗಂಭೀರವಾಗಿ ಗಾಯಗೊಂಡ ಫಣೀಂದ್ರ ಮತ್ತು ವಿನುಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಮೃತಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಫಣಿಂದ್ರ, ವಿನುಕುಮಾರ್ ಮೃತದೇಹಗಳನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಕರಣದಲ್ಲಿ ಫೆಲಿಕ್ಸ್ ಸೇರಿದಂತೆ ಮೂವರು ಆರೋಪಿಗಳು ಕಂಪನಿಗೆ ನುಗ್ಗಿ ಮೊದಲ ಮಹಡಿಯಲ್ಲಿ ಒಬ್ಬರನ್ನ ಕೊಲೆ ಮಾಡಿ, ಎರಡನೇ ಮಹಡಿಯಲ್ಲಿ ಮತ್ತೊಬ್ಬರನ್ನು ಹತ್ಯೆ ಮಾಡಿದ್ದಾರೆ.
ಕಂಪನಿ ಮುಖ್ಯಸ್ಥರ ಕೊಲೆಗೆ ಕಾರಣವೇನು?
ಏರೋನಿಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಫೆಲಿಕ್ಸಯು, ಕಂಪನಿಯಿಂದ ಹೊರಬಂದು ಸ್ವಂತ ಕಂಪನಿ ಸ್ಥಾಪಿಸಿದ್ದ. ಈ ಉದ್ಯಮಕ್ಕೆ ಪಣೀಂದ್ರ ಎದುರಾಳಿಯಾಗಿದ್ದ ಎಂಬ ಒಂದೇ ಕಾರಣಕ್ಕೆ ಫೆಲಿಕ್ಸ್ ಫಣೀಂದ್ರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇನ್ಸ್ಟಾಗ್ರಾಮ್ನಲ್ಲಿ ವಿಚಿತ್ರ ಸ್ಟೇಟಸ್;
ಫೆಲಿಕ್ಸ್ ಈ ಕೃತ್ಯ ಎಸಗುವ ಮುನ್ನ ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಚಿತ್ರ ಸ್ಟೇಟಸ್ ಅಪ್ಡೇಟ್ ಮಾಡಿದ್ದ. ಕೊಲೆಗೂ ಮುಂಚೆ ಪ್ರಪಂಚದಲ್ಲಿ ನಂಬಿಕೆ ದ್ರೋಹಿಗಳು ಹೆಚ್ಚಾಗಿದ್ದಾರೆ ಎಂದು ಸ್ಟೇಟಸ್ ಹಾಕಿದ್ದ, ಅಂತಹ ದ್ರೋಹಿಗಳಿಗೆ ನಾನು ನೋವುಂಟು ಮಾಡುತ್ತೇನೆ. ಕೆಟ್ಟ ವ್ಯಕ್ತಿಗಳಿಗೆ ನಾನು ಹರ್ಟ್ ಮಾಡುತ್ತೇನೆ, ಆದರೆ ಒಳ್ಳೆಯ ವ್ಯಕ್ತಿಗಳನ್ನ ನಾನು ನೋಯಿಸುವುದಿಲ್ಲ ಎಂದು ಜೋಕರ್ ಫೀಲಿಕ್ಸ್ ಸ್ಟೇಟಸ್ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
ಆರೋಪಿ ಫೆಲಿಕ್ಸ್ ತನ್ನನ್ನು ತಾನು ರ್ಯಾಪರ್ ಎಂದು ಬಣ್ಣಸಿಕೊಂಡಿದ್ದ, ಇನ್ಸ್ಟಾಗ್ರಾಮ್, ಟಿಕ್ ಟಾಕ್ ಹಾಗೂ ರೀಲ್ಸ್ ನಲ್ಲಿ ಫೇಮಸ್ ಆಗಿದ್ದ ಎಂದು ತಿಳಿದುಬಂದಿದೆ.
Bengalore double murder, Aeronics Internet Ex-employee of tech firm kills MD and CEO with sword. The incident took place at the company's office in Bengaluru. The ex-employee, identified as Felix, had been terminated from the company a few months ago. According to the police, Felix entered the office and attacked the MD and CEO of the Aeronics Internet Company, Phanindra Subramanya and Vinu Kumar, with a sword. Both men died on the spot.
09-01-25 07:04 pm
HK News Desk
S T Somashekar, Yatnal, DK Shivakumar temple:...
09-01-25 04:54 pm
Hassan, Lokayukta Arrest: ಹಾಸನಾಂಬ ಜಾತ್ರಾ ಮಹೋತ...
09-01-25 04:21 pm
Six Naxals Surrender, CM Siddaramaiah: ಕಾಡಿನ...
08-01-25 09:26 pm
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
08-01-25 09:51 pm
Mangalore Correspondent
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
Mangalore University, Phd Admission: ಮಂಗಳೂರು...
07-01-25 10:22 pm
09-01-25 01:26 pm
Mangaluru Correspondent
Vamanjoor Misfire, Mangalore Crime, Police; ಪ...
09-01-25 11:27 am
Fraud, Mangalore, QR Scan; ಪೆಟ್ರೋಲ್ ಪಂಪ್ ನಲ್ಲ...
08-01-25 10:57 pm
Ullal Crime, Mangalore: ಉಳ್ಳಾಲದಲ್ಲಿ ವಲಸೆ ಕಾರ್...
08-01-25 05:58 pm
Cyber Fruad, CBI, Udupi, Karkala: ಸಿಬಿಐ ಹೆಸ್ರ...
08-01-25 03:14 pm