ಬ್ರೇಕಿಂಗ್ ನ್ಯೂಸ್
21-07-23 11:50 am Mangalore Correspondent ಕ್ರೈಂ
ಮಂಗಳೂರು, ಜುಲೈ 21: ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ದ್ರವ್ಯ ಮಿಶ್ರಿತ ಭಾಂಗ್ ಚಾಕ್ಲೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಗರದ ರಥಬೀದಿ ಮತ್ತು ಹೈಲ್ಯಾಂಡ್ ಆಸ್ಪತ್ರೆಯ ಬಳಿ ಮೂರು ಕೇಜಿಗೂ ಹೆಚ್ಚು ಭಾಂಗ್ ಚಾಕಲೇಟ್ ಗಳನ್ನು ಪತ್ತೆ ಮಾಡಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಥಬೀದಿಯಲ್ಲಿ ಪೂಜಾ ಸಾಮಗ್ರಿ ಅಂಗಡಿಯಲ್ಲಿ ಇಡಲಾಗಿದ್ದ 48 ಸಾವಿರ ರೂ. ಮೌಲ್ಯದ 85 ಕೇಜಿಯಷ್ಟು ಭಾಂಗ್ ಚಾಕಲೇಟನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಂಗಡಿ ಮಾಲಕ ಮನೋಹರ್ ಶೇಟ್(49) ಎಂಬಾತನ ವಿರುದ್ಧ ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಥಬೀದಿಯ ವೈಭವ್ ಪೂಜಾ ಸೇಲ್ಸ್ ಎನ್ನುವ ಅಂಗಡಿಯಲ್ಲಿ ಚಾಕಲೇಟನ್ನು ಬಚ್ಚಿಟ್ಟು ಅದನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ರೂ. ಚಾಕಲೇಟನ್ನು 20 ರೂ.ಗೆ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬಂದರು ಪೊಲೀಸರು ಅಂಗಡಿಗೆ ದಾಳಿ ನಡೆಸಿದ್ದರು. ರಥಬೀದಿಯಲ್ಲಿ ಎರಡು ಸರಕಾರಿ ಕಾಲೇಜುಗಳಿದ್ದು ಹೆಚ್ಚಾಗಿ ವಿದ್ಯಾರ್ಥಿಗಳೇ ಭಾಂಗ್ ಚಾಕಲೇಟ್ ಗ್ರಾಹಕರಾಗಿದ್ದರು ಎನ್ನಲಾಗಿದೆ.
ಆರೋಪಿ ಚಾಕಲೇಟನ್ನು ಉತ್ತರ ಪ್ರದೇಶದಿಂದ ತಂದಿದ್ದಾಗಿ ಮತ್ತು ಹೋಳಿ ಸಂದರ್ಭದಲ್ಲಿ ನೀಡುವುದಕ್ಕಾಗಿ ಇರಿಸಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಮನೋಹರ್ ಶೇಟ್ ಮೂಲತಃ ಗುಜರಾತ್ ನಿವಾಸಿಯಾಗಿದ್ದು, ತಂದೆಯ ಕಾಲದಿಂದಲೇ ಮಂಗಳೂರಿನಲ್ಲಿ ಪೂಜಾ ಸಾಮಗ್ರಿ ವ್ಯಾಪಾರದಲ್ಲಿ ತೊಡಗಿಸಿದ್ದು, ಇಲ್ಲಿಯೇ ಸೆಟ್ಲ್ ಆಗಿದ್ದಾರೆ. ಹೈಲ್ಯಾಂಡ್ ಆಸ್ಪತ್ರೆಯ ಬಳಿ ಗೂಡಂಗಡಿಯಲ್ಲಿ 12 ಕೇಜಿ ಭಾಂಗ್ ಚಾಕಲೇಟ್ ಪತ್ತೆಯಾಗಿದೆ. ಬೆಚನ್ ಸೋನ್ಕರ್ (45) ಎಂಬಾತ ಅಂಗಡಿಯಲ್ಲಿಟ್ಟು ಚಾಕಲೇಟನ್ನು ಮಾರಾಟ ಮಾಡುತ್ತಿದ್ದುದು ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಹಿಂದಿ ಭಾಷೆಯಲ್ಲಿ ಮಹಾಶಕ್ತಿ ಮುನಕ್ಕಾ, ಬಮ್ ಬಮ್ ಮುನಾವಟಿ, ಪಾವರ್ ಮುನಕ್ಕಾ ವಟಿ, ಆನಂದ ಚೂರ್ಣ ಹೆಸರಿನಲ್ಲಿ ಈ ಚಾಕಲೇಟನ್ನು ಮಾರುತ್ತಿದ್ದರು.
ಗಾಂಜಾ ಇನ್ನಿತರ ಮಾದಕ ದ್ರವ್ಯಗಳ ಪತ್ತೆಗಾಗಿ ಪೊಲೀಸರು ನಗರ ಪ್ರದೇಶದಲ್ಲಿ ಅಂಗಡಿಗಳಿಗೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಬೆಚನ್ ಸೋನ್ಕರ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ಪ್ರಕಾರ, ಭಾಂಗ್ ಚಾಕಲೇಟನ್ನು ಉತ್ತರ ಪ್ರದೇಶದಲ್ಲಿ ತಯಾರಿಸಲಾಗುತ್ತಿದೆ. ಗಾಂಜಾದ ಹೂವು ಮತ್ತು ಹಣ್ಣನ್ನು ಬಳಸ್ಕೊಂಡು ಭಾಂಗ್ ತಯಾರಿಸುವ ಈ ಚಾಕಲೇಟಿಗೆ ಅಲ್ಲಿ ಭಾರೀ ಬೇಡಿಕೆಯಿದೆ. ಅಲ್ಲದೆ, ಭಾಂಗ್ ಚಾಕಲೇಟ್ ಮಾರಾಟಕ್ಕೆ ಅಲ್ಲಿ ಕಾನೂನು ಮಾನ್ಯತೆಯಿದೆ. ಹೋಳಿ ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಭಾಂಗ್ ಮಾರಾಟ ಹೆಚ್ಚಿರುತ್ತದೆ.
The Mangaluru South police station inspector and staff raided a petty shop near Highlands, Mangaluru, which was selling chocolates laced with the Bhang drug on July 19. The accused, Bechan Sonkar (45), a resident of Uttar Pradesh currently staying at Falnir, was arrested in connection with the incident. The police seized Bhang chocolates worth Rs 5,500, which were being sold in packets labeled in Hindi as Mahashakthi Munakka, Bam Bam Munakka Vati, Power Munakka Vati, and Ananda Choorna.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm