ಬ್ರೇಕಿಂಗ್ ನ್ಯೂಸ್
05-11-20 06:08 pm Headline Karnataka News Network ಕ್ರೈಂ
ಚಿಕ್ಕಮಗಳೂರು, ನವೆಂಬರ್ 05: ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಪತ್ನಿ ಮಾಳವಿಕಾಗೆ ಬಂಧನದ ಭೀತಿ ಎದುರಾಗಿದೆ. ಮಾಳವಿಕ ಸಿದ್ಧಾರ್ಥ್ ಸೇರಿ ಕಾಫಿ ಡೇ ಕಂಪನಿಯ ಸೇರಿ 8 ಜನರಿಗೆ ಮೂಡಿಗೆರೆ ಜೆಎಂಎಫ್ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ 300ಕ್ಕೂ ಹೆಚ್ಚು ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣವನ್ನು ಎಬಿಸಿ ಕಂಪೆನಿ ಬಾಕಿ ಉಳಿಸಿಕೊಂಡಿದ್ದು ಇದರ ವಿರುದ್ಧ ಕಾಫಿ ಬೆಳೆಗಾರ ನಂದೀಶ್ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ನಂದೀಶ್, ಪ್ರತಿ ವರ್ಷ ಕಾಫಿಯನ್ನು ಎಬಿಸಿ ಕಂಪೆನಿಗೆ ನೀಡುತ್ತಿದ್ದರು. ಆದರೆ, ಸಿದ್ಧಾರ್ಥ್ ನಿಧನರಾದ ಬಳಿಕ ಬೆಳೆಗಾರರಿಗೆ ಕಂಪೆನಿಯಿಂದ ಬರುತ್ತಿದ್ದ ಹಣ ನಿಂತು ಹೋಗಿದೆ. ನಂದೀಶ್ ಪೋಸ್ಟ್ ಡೇಟೆಡ್ ಚೆಕ್ ಪಡೆದು ಹಣ ನಗದು ಮಾಡಿಕೊಳ್ಳುತ್ತಿದ್ದರು. ಅದರಂತೆ, ನಂದೀಶ್ ಹತ್ತು ಚೆಕ್ ಪಡೆದಿದ್ದು ಅದನ್ನು ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿತ್ತು.
ಚೆಕ್ ಬೌನ್ಸ್ ಹಿನ್ನೆಲೆಯಲ್ಲಿ ನಂದೀಶ್ ತನಗೆ ಬರಬೇಕಿದ್ದ 45.38 ಲಕ್ಷ ಹಣಕ್ಕಾಗಿ ಕೋರ್ಟಿಗೆ ದೂರು ಸಲ್ಲಿಸಿದ್ದರು. ಕಳೆದ ಅಕ್ಟೋಬರ್ 6ರಂದು ಎಬಿಸಿ ಕಂಪೆನಿ ಕಡೆಯಿಂದ ನಿರ್ದೇಶಕರು ಕೋರ್ಟಿಗೆ ಹಾಜರಾಗಬೇಕಿತ್ತು. ಹೀಗಾಗಿ ಕೋರ್ಟ್ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ನ.11ಕ್ಕೆ ಇದ್ದು ಅದಕ್ಕೆ ಮುನ್ನ ಆರೋಪಿಗಳು ಕೋರ್ಟಿಗೆ ಹಾಜರಾಗಬೇಕೆಂದು ನಂದೀಶ್ ಪರ ವಕೀಲರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಕಾಫಿ ಡೇ ಕಂಪನಿಯ ಕಡೆಯಿಂದ ಸ್ಪಷ್ಟನೆ ನೀಡಲಾಗಿದ್ದು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ 1020 ಬೆಳೆಗಾರರಿಗೆ ಹಣ ನೀಡುವುದು ಬಾಕಿ ಇತ್ತು. ಕಳೆದ 11 ತಿಂಗಳಲ್ಲಿ 700ಕ್ಕೂ ಹೆಚ್ಚು ಬೆಳೆಗಾರರಿಗೆ ಹಣ ನೀಡಲಾಗಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಬೆಳೆಗಾರರಿಗೆ ಹಣ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
A non-bailable warrant has been issued in a cheque bounce case against the directors of the Cafe Coffee Day company. One of the directors is former Chief Minister SM Krishna's daughter Malavika Hegde.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm