ಆನ್ಲೈನ್ ಮೋಸ ; ಒಟಿಪಿ ಷೇರ್ ಇಲ್ಲದೆಯೂ ಬ್ಯಾಂಕ್ ಖಾತೆಯಿಂದ ಹಣ ಖಾಲಿ, ಮೋಸ ಹೋಗದಿರಲು ಈ ಅಂಶಗಳನ್ನು ಪಾಲಿಸಿ ; ಮುಂಬೈ ಪೊಲೀಸರ ಸೂಚನೆ  

11-08-23 04:32 pm       HK News Desk   ಕ್ರೈಂ

ಯಾವುದೇ ಶಂಕಿತ ಲಿಂಕ್ ಒತ್ತುವುದು ಅಥವಾ ಓಟಿಪಿ ಷೇರ್ ಮಾಡದೇ ವ್ಯಕ್ತಿಯೊಬ್ಬರು ಆನ್ಲೈನ್ ಮೋಸಕ್ಕೊಳಗಾಗಿದ್ದು, ತನ್ನ ಖಾತೆಯಿಂದ 1.30 ಲಕ್ಷ ರೂಪಾಯಿ ಕಳಕೊಂಡ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

ಮುಂಬೈ, ಆಗಸ್ಟ್ 11: ಯಾವುದೇ ಶಂಕಿತ ಲಿಂಕ್ ಒತ್ತುವುದು ಅಥವಾ ಓಟಿಪಿ ಷೇರ್ ಮಾಡದೇ ವ್ಯಕ್ತಿಯೊಬ್ಬರು ಆನ್ಲೈನ್ ಮೋಸಕ್ಕೊಳಗಾಗಿದ್ದು, ತನ್ನ ಖಾತೆಯಿಂದ 1.30 ಲಕ್ಷ ರೂಪಾಯಿ ಕಳಕೊಂಡ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

ಬೊರಿವಿಲಿ ನಿವಾಸಿ, ಸಿಮೆಂಟ್ ವ್ಯಾಪಾರಿ ಸಬೀರಾಲಿ ಅನ್ಸಾರಿ(47) ಹಣ ಕಳಕೊಂಡವರು. ಇವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೂನಿಯನ್ ಬ್ಯಾಂಕ್ ನಲ್ಲಿ ಪ್ರತ್ಯೇಕ ಎರಡು ಖಾತೆಯನ್ನು ಹೊಂದಿದ್ದಾರೆ. ಆನ್ಲೈನ್ ಖಾತೆ ನಿರ್ವಹಣೆಗಾಗಿ ಎರಡು ಖಾತೆಯಲ್ಲೂ ಗೂಗಲ್ ಪೇ ಮತ್ತು ಪೇಟಿಎಂ ಮಾಡಿಕೊಂಡಿದ್ದರು. ಆಗಸ್ಟ್ 1ರಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಸೆಂಟ್ರಲ್ ಬ್ಯಾಂಕ್ ಖಾತೆಯಿಂದ 89700 ರೂ. ಕಟ್ ಆಗಿರುವ ಬಗ್ಗೆ ಮೆಸೇಜ್ ಬಂದಿತ್ತು. ಕೂಡಲೇ ಬ್ಯಾಂಕ್ ಕಚೇರಿಗೆ ತೆರಳಿ, ಏನೋ ಎಡವಟ್ಟು ಆಗಿರಬೇಕೆಂದು ಬ್ಲಾಕ್ ಮಾಡಲು ಸೂಚಿಸಿದ್ದರು.

ಮರುದಿನವೂ ಯೂನಿಯನ್ ಬ್ಯಾಂಕ್ ಖಾತೆಯಿಂದ 5 ಸಾವಿರ ರೂ. ಕಟ್ ಆಗಿರುವ ಬಗ್ಗೆ ಮೆಸೇಜ್ ಬಂದಿತ್ತು. ಕೂಡಲೇ ಬ್ಯಾಂಕ್ ಕಚೇರಿಗೆ ತಿಳಿಸಿದ್ದು, ಅಷ್ಟರಲ್ಲಿ ಮತ್ತೆ ಮತ್ತೆ ಹಣ ವರ್ಗಾವಣೆಯಾಗಿದ್ದು, ಒಟ್ಟು 41 ಸಾವಿರ ರೂ. ಖಾತೆಯಿಂದ ಖೋತಾ ಆಗಿತ್ತು. ಬ್ಯಾಂಕ್ ಸಿಬಂದಿಯ ಸೂಚನೆಯಂತೆ ಎರಡೂ ಖಾತೆಯನ್ನು ವ್ಯಾಪಾರಿ ಬ್ಲಾಕ್ ಮಾಡಿಸಿದ್ದರು. ಆದರೆ ಅಷ್ಟರಲ್ಲಿ ಎರಡೂ ಖಾತೆಯಿಂದ 1,30,700 ರೂಪಾಯಿ ಯಾವುದೋ ಬೇರೆ ಖಾತೆಗೆ ವರ್ಗಾವಣೆ ಆಗಿತ್ತು. ವಿಶೇಷ ಅಂದ್ರೆ, ಅನ್ಸಾರಿ ಯಾವುದೇ ಲಿಂಕ್ ಷೇರ್ ಮಾಡಿದ್ದಾಗಲೀ, ಓಟಿಪಿ ಶೇರ್ ಮಾಡಿದ್ದಾಗಲೀ ಇಲ್ಲವಂತೆ. ಅದಕ್ಕೂ ಮೊದಲೊಮ್ಮೆ ಯಾರೋ ಆಗಂತುಕ ಫೋನ್ ಕರೆ ಮಾಡಿದ್ದು, ಅನ್ಸಾರಿ ಅದಕ್ಕೆ ರಿಪ್ಲೈ ಮಾಡದೆ ಕಟ್ ಮಾಡಿದ್ದರಂತೆ. ಆದರೂ ಖಾತೆಯಿಂದ ಹಣ ಹೋಗಿರುವುದು ಈಗ ಭಾರೀ ಶಂಕೆಗೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆನ್ಲೈನ್ ಫ್ರಾಡ್ ಆಗದಿರಲು ಈ ಸೂಚನೆ ಪಾಲಿಸಿ

ಮುಂಬೈ ಪೊಲೀಸರು ಸೈಬರ್ ಸೆಕ್ಯುರಿಟಿ ಬಗ್ಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ಆನ್ಲೈನ್ ಬ್ಯಾಂಕ್ ಅಕೌಂಟ್, ಏಪ್ ಗಳ ಪಾಸ್ ವರ್ಡ್ ಗಳನ್ನು ಆಗಿಂದಾಗ್ಗೆ ಬದಲಿಸುತ್ತಿರಬೇಕು. ಸ್ಟ್ರಾಂಗ್ ಆಗಿರುವಂಥ ಪಾಸ್ ವರ್ಡ್ ಮಾಡಿಕೊಳ್ಳಬೇಕು. ಸಿಕ್ಕ ಸಿಕ್ಕ ವೆಬ್ ಸೈಟ್, ಲಿಂಕ್ ಗಳಿಗೆ ಆನ್ಲೈನ್ ಹಣ ಪಾವತಿ ಮಾಡಬಾರದು. ಅರಿವಿಗೆ ಬಾರದೆ ಹಣ ಖಾತೆಯಿಂದ ಕಟ್ ಆಗುತ್ತಿದ್ದಲ್ಲಿ ಕೂಡಲೇ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಬೇಕು. ಐಡಿ ಕಾರ್ಡ್, ಓಟಿಪಿ, ಬ್ಯಾಂಕ್ ಖಾತೆ ಮಾಹಿತಿಗಳನ್ನು ಯಾರಿಗೂ ಷೇರ್ ಮಾಡಬೇಡಿ. ಬ್ಯಾಂಕ್ ಖಾತೆ ಸಂಬಂಧಿಸಿ ಮಾಹಿತಿಗಳನ್ನು ಗೂಗಲ್, ಇಮೇಲ್, ಅನಧಿಕೃತ ಏಪ್ ನಲ್ಲಿ ಸೇವ್ ಮಾಡಿಕೊಳ್ಳಬೇಡಿ. ಇಂಟರ್ನೆಟ್ ಬ್ಯಾಂಕಿಂಗ್ ಉಪಯೋಗದ ಬಳಿಕ ಲಾಗೌಟ್ ಮಾಡಿ. ಅನಧಿಕೃತ ಏಪ್ ಗಳನ್ನು ಮೊಬೈಲಿನಲ್ಲಿ ಡೌನ್ಲೋಡ್ ಮಾಡದಿರಿ. ಸೆಕ್ಯುರ್ ಅಲ್ಲದ ಸಿಕ್ಕ ಸಿಕ್ಕಲ್ಲಿ ವೈಫೈಗಳನ್ನು ಉಪಯೋಗ ಮಾಡದಿರಿ ಇತ್ಯಾದಿ ಸೂಚನೆಗಳನ್ನು ನೀಡಿದ್ದಾರೆ.

A man in Mumbai has lost Rs 11.1 lakh from his account after he was duped online by not pressing any suspected link or sharing an OTP.