ಬ್ರೇಕಿಂಗ್ ನ್ಯೂಸ್
07-11-20 04:18 pm Headline Karnataka News Network ಕ್ರೈಂ
ಕಾಸರಗೋಡು, ನವೆಂಬರ್ 7: ಮಂಜೇಶ್ವರ ಶಾಸಕ ಎಂ.ಕೆ. ಕಮರುದ್ದೀನ್ ಅವರನ್ನು ಕೊನೆಗೂ ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಂದು ಬೆಳಗ್ಗೆ ಶಾಸಕ ಕಮರುದ್ದೀನ್ ಅವರನ್ನು ವಿಚಾರಣೆಗೆ ಕರೆಸಿಕೊಂಡಿದ್ದರು. ಬೆಳಗ್ಗಿನಿಂದ ವಿಚಾರಣೆ ನಡೆಸಿದ ಪೊಲೀಸರು ಈಗ ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಫ್ಯಾಷನ್ ಗೋಲ್ಡ್ ಹೆಸರಲ್ಲಿ ನೂರಾರು ಮಂದಿಯಿಂದ ಕೋಟ್ಯಂತರ ಹಣ ಪಡೆದು ವಂಚನೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಲಾಗಿತ್ತು. ತನಿಖಾ ತಂಡದ ಮುಖ್ಯಸ್ಥ ಪಿ.ವಿವೇಕ್ ಕುಮಾರ್ ಕಾಸರಗೋಡು ಎಸ್ ಪಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಪ್ರಕರಣದಲ್ಲಿ ಶಾಸಕರ ಶಾಮೀಲಾತಿ ಮತ್ತು ವಂಚನೆ ಎಸಗಿರುವುದು ಕಂಡುಬಂದಿದ್ದರಿಂದ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಂಧಿಸಿದ್ದಾರೆ.
ಫ್ಯಾಶನ್ ಗೋಲ್ಡ್ ಹೆಸರಲ್ಲಿ ಹಣ ದ್ವಿಗುಣಗೊಳಿಸುವ ಭರವಸೆಯಿಂದ 700ಕ್ಕೂ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿದ್ದರು. 130 ಕೋಟಿಗೂ ಹೆಚ್ಚು ಮೊತ್ತದ ಹಗರಣ ಇದಾಗಿದ್ದು, ಇತ್ತೀಚೆಗೆ ಹಣ ಸಿಗದೆ ವಂಚನೆಗೊಳಗಾದ ಮಂದಿ ಪೊಲೀಸ್ ದೂರು ದಾಖಲಿಸಿದ್ದರು. ಕಾಸರಗೋಡಿನ ವಿವಿಧ ಠಾಣೆಗಳಲ್ಲಿ ಈವರೆಗೆ 107 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಒತ್ತಡಕ್ಕೊಳಗಾಗಿ ಶಾಸಕರನ್ನು ತನಿಖೆಗೆ ಒಳಪಡಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ಫ್ಯಾಶನ್ ಗೋಲ್ಡ್ ಡೈರೆಕ್ಟರ್ ಪೂಕೋಯ ತಂಗಳ್ ಕೂಡ ಆರೋಪಿಯಾಗಿದ್ದಾರೆ.
Manjeshwar MLA M C Qamaruddin arrested in connection with the fraud case of Fashion Gold International Company. Special Investigation Team led by P Vivek Kumar who was interrogating MLA Qamaruddin in SP's office has arrested the MLA.
22-12-24 10:23 am
HK News Desk
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
Chikkamagaluru, Elephant Attack: ಚಿಕ್ಕಮಗಳೂರಲ್...
19-12-24 06:36 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 06:04 pm
Udupi Correspondent
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
Anil Lobo MCC Bank Arrest, Court: ಬ್ಯಾಂಕ್ ಸಾಲ...
20-12-24 09:48 pm
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm